Advertisement

ಕಾರ್ಯಪ್ಪ ಕಾಲೇಜಿನಲ್ಲಿ ರಂಗ ತರಬೇತಿ ಕಾರ್ಯಾಗಾರ ಸಂಪನ್ನ

03:01 PM Mar 28, 2017 | Team Udayavani |

ಮಡಿಕೇರಿ: ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸ್ನಾತಕೋತ್ತರ ಆಂಗ್ಲ ವಿದ್ಯಾರ್ಥಿಗಳಿಗಾಗಿ ಒಂಭತ್ತು ದಿನಗಳ ಕಾಲ ನಡೆದ ರಂಗ ತರಬೇತಿ ಕಾರ್ಯಾಗಾರ ಸಮಾರೋಪಗೊಂಡಿದೆ.

Advertisement

ಕಾಲೇಜು ಸಭಾಂಗಣದಲ್ಲಿ ನಡೆದ ಕೊನೆಯ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು “”ಉಲ್ಟಾ ರಾಜ-ಪಲ್ಟಾ ಮಂತ್ರಿ ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿರಾಜಪೇಟೆಯ ಡಾ| ಎಸ್‌.ವಿ. ನರಸಿಂಹನ್‌ ವಿದ್ಯಾರ್ಥಿಗಳು ರಂಗ ಪ್ರಯೋಗದಲ್ಲಿ ಭಾಗವಹಿಸುವ ಮೂಲಕ ಭಾಷೆಗೂ ಮೀರಿದ ಸಂವಹನ ಮಾಧ್ಯಮಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸ್ನಾತಕೋತ್ತರ ಆಂಗ್ಲ ವಿಭಾಗದ ಈ ವಿನೂತನ  ಕಾರ್ಯಕ್ರಮ ಮುಂದೆಯೂ ವಿದ್ಯಾರ್ಥಿಗಳಿಗೆ ಪುಸ್ತಕದಿಂದ ಆಚೆಗೆ ಇರುವ ಜಗತ್ತಿನ ಆಗು ಹೋಗುಗಳಿಗೆ ಸ್ಪಂದಿಸುವ ಅವಕಾಶ ನೀಡಲಿ ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾರ್ವತಿ ಅಪ್ಪಯ್ಯ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಇಂತಹ ಕಾರ್ಯಕ್ರಮಗಳಿಗೆ ಕಾಲೇಜಿನ ಪ್ರೋತ್ಸಾಹ ಸದಾ ಇರುತ್ತದೆ ಎಂದರು. 

ಸಂಯೋಜಕರಾದ ಡಾ. ನಯನಾ ಕಶ್ಯಪ್‌ ಸಾಹಿತ್ಯಾಭ್ಯಾಸವೆಂದರೆ ಸದಾ ಪುಸ್ತಕ ಓದುವುದು, ತರಗತಿಗಳಲ್ಲಿ ಉಪನ್ಯಾಸಗಳನ್ನು ಆಲಿಸುವುದು, ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇವುಗಳಿ ಗಷ್ಟೇ ಸೀಮಿತವಾಗಿರದೆ ಸಮಾಜದ ಆಗುಹೋಗುಗಳನ್ನು ಗಮನಿಸಿ ಅವುಗಳಿಗೆ ಸ್ಪಂದಿಸುವುದು ಕೂಡ ಅತ್ಯಂತ ಅವಶ್ಯಕ. ಈ ಕಾರಣಕ್ಕಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ರಂಗಾನುಭವದ ಮೂಲಕ ಲೋಕಾನುಭವ ಮತ್ತು ಸ್ವಾನುಭವದ ಅವಕಾಶ ನೀಡುವ ಸಲುವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಯೋಜಕತ್ವದಲ್ಲಿ ಸ್ನಾತಕೋತ್ತರ ಆಂಗ್ಲ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ರಂಗತರಬೇತಿ ನೀಡಲಾಯಿತು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟ ಬೆಂಗಳೂ ರಿನ ರಂಗಕರ್ಮಿ ಶ್ರೀ ಪ್ರಣೀತ್‌ ಪಿ. ವಿದ್ಯಾರ್ಥಿಗಳಲ್ಲಿರುವ 
ಸುಪ್ತ  ಪ್ರತಿಭೆಯನ್ನು ಅನಾವರಣಗೊಳಿಸಲು ರಂಗತರಬೇತಿ ಅತ್ಯಂತ ಸೂಕ್ತ ಮಾಧ್ಯಮ ಎಂದರು. ಸ್ನಾತಕೋತ್ತರ ಆಂಗ್ಲ ವಿಭಾಗದ ಉಪನ್ಯಾಸಕರಾದ ಕುಮಾರಿ ನೂರ್‌ ಸಭಾ ಹಾಗೂ ನೂರ್‌ ಹುದಾ ಕಾರ್ಯಕ್ರಮ ನಿರೂಪಿಸಿ ಶ್ರೀನಿವಾಸ್‌ ಪಿ.ಕೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next