Advertisement
ಆರು ವರ್ಷದ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾದಳ ದಿಂದ ಕಾರ್ಯಾಚರಣೆ ನಿಲ್ಲಿಸಿದ ಯುದ್ಧ ವಿಮಾನ ಟುಪ್ಲೋವ್( TU-142) ಮುಖ್ಯಭಾಗ ಹಾಗೂ ಬಿಡಿಭಾಗಗಳು ಕಾರವಾರ ಬಂದು ತಲುಪಿವೆ. ನಿವೃತ್ತ ಯುದ್ಧ ವಿಮಾನದ ಬಿಡಿ ಭಾಗ ತರಲು ಹಾಗೂ ಅದನ್ನು ಕಡಲತೀರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ 6 ಕೋಟಿ ರೂ. ನೆರವು ನೀಡಿದೆ.
ರಷ್ಯಾ ದೇಶದಿಂದ ನಿರ್ಮಾಣದ ಟುಪ್ಲೋವ್-142 ಯುದ್ಧ ವಿಮಾನ 1988 ರಲ್ಲಿ ಭಾರತೀಯ ನೌಕಾದಳವನ್ನು ಸೇರ್ಪಡೆಗೊಂಡಿತು . ವಿವಿಧ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು. 2017 ರಲ್ಲಿ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ರಾಜೋಲಿಯ ನೌಕಾನೆಲೆಯಲ್ಲಿ ಇಡಲಾಗಿತ್ತು. ಆರು ವರ್ಷದ ಹಿಂದೆ ರಾಜ್ಯ ಸರ್ಕಾರದ ವಿನಂತಿ ಮೇರೆಗೆ ಆರು ಕೋಟಿಗೂ ಹೆಚ್ಚು ಹಣ ವ್ಯಯಿಸಿ ಕಾರವಾರಕ್ಕೆ ತರಲಾಗಿದ್ದು ,ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿರುವ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಇದನ್ನು ಸ್ಥಾಪಿಸಸಲಾಗುತ್ತಿದೆ. ಈಗಾಗಲೇ ಯುದ್ಧ ವಿಮಾನ ಮ್ಯೂಸಿಯಂಗೆ ಅಡಿಪಾಯ ಸಹ ಹಾಲಾಗಿದ್ದು , ಜೋಡಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ನೌಕಾಸೇನೆ ವಹಿಸಿಕೊಂಡಿದೆ . ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಟುಪ್ಲೋವ್ ಯುದ್ಧ ವಿಮಾನ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಸಿಗಲಿದೆ.
Related Articles
– ಗಂಗೂಬಾಯಿ ಮಾನಕರ್. ಜಿಲ್ಲಾಧಿಕಾರಿ. ಕಾರವಾರ
Advertisement