Advertisement

Karwar Naval Base; ತೇಜ್ ಟಗ್ ಬೋಟ್ ನ ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ

03:34 PM Aug 10, 2023 | Team Udayavani |

ಕಾರವಾರ : ಕದಂಬ ನೌಕಾನೆಲೆಯ ಡಾಕ್ ಯಾರ್ಡ್ ನಲ್ಲಿ ಗುರುವಾರ ಆಗ್ನಿ ಅನಾಹುತ ಸಂಭವಿಸಿದ್ದು ತೇಜ್ ಹೆಸರಿನ ಟಗ್ ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಶಿಫ್ಟ್ ಲೈಫ್ಟ್ ಡಾಕ್ ಯಾರ್ಡ್ ದಟ್ಟ ಹೊಗೆಯಿಂದ ತುಂಬಿ ಹೋಗಿತ್ತು.

Advertisement

ಆಕಸ್ಮಿಕವಾಗಿ ಶಿಪ್ ಕರೆತರುವ ತೇಜ್ ಹೆಸರಿನ ಟಗ್ ಬೋಟ್ ನ ಇಂಜಿನ್ ಗೆ ಬೆಂಕಿ ತಗುಲಿ ನೌಕಾನೆಲೆಯ ಡಾಕ್ ಯಾರ್ಡಗೆ ಬೆಂಕಿ ಹರಡುವ ಸಾಧ್ಯತೆಗಳಿದ್ದವು.ದೊಡ್ಡ ಮಟ್ಟದಲ್ಲಿ ಟಗ್ ಬೋಟ್ ಗೆ ಬೆಂಕಿ ಆವರಿಸುತ್ತಿದ್ದಂತೆ ಎಚ್ಚೆತ್ತ‌ ಸಿಬಂದಿ ಕಾರವಾರದಿಂದ ಆಗ್ನಿಶಾಮಕ ದಳವನ್ನು ಕರೆಯಿಸಿ,‌ಬೆಂಕಿ‌ ಆರಿಸಿತು.ಸ್ಥಳಕ್ಕೆ ಕಾರವಾರದ ಅಗ್ನಿಶಾಮಕ ದಳ ಸಿಬಂದಿ ಆಗಮಿಸಿ ದೊಡ್ಡ ಪ್ರಮಾಣದ ಬೆಂಕಿ ಆರಿಸಲು ಶ್ರಮಿಸಿದರು.

ನೌಕಾ ಅಗ್ನಿಶಾಮಕ ಸಿಬಂದಿ ಹಾಗೂ ಕಾರವಾರ ಅಗ್ನಿಶಾಮಕ ಸಿಬಂದಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸಿ ಬೆಂಕಿ ನಂದಿಸಿದರು.ತೇಜ್ ಟಗ್ ನ ಬೆಂಕಿ‌ ಶೀಘ್ರ ಹತೋಟಿಗೆ ಬಂದು ಹೆಚ್ಚಿನ ಅನಾಹುತ ಸಂಭವಿಸಲಿಲ್ಲ ಎಂದು ನೌಕಾನೆಲೆ‌ ಮೂಲಗಳು ತಿಳಿಸಿವೆ.

ಟಗ್ ನ ಬೆಂಕಿ ಅನಾಹುತಕ್ಕೆ ಕಾರಣ ತಿಳಿಯಲು ನೇವಿ ಆಂತರಿಕ ತನಿಖೆ ನಡೆಸಲಿದೆ. ಬೆಂಕಿ ಅನಾಹುತ ದಿಂದ ಸಿಬಂದಿಗಳಿಗೆ ಯಾವುದೇ ಅಪಾಯವಾಗಿಲ್ಲ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಬಂಧ ದೂರು ದಾಖಲಾಗುವ ಸಂಭವ ಸಹ ಇದೆ. ಟಗ್ ನಲ್ಲಿ ಬೆಂಕಿ ಹತ್ತಲು ತಾಂತ್ರಿಕ ತೊಡಕು ಕಾರಣ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next