Advertisement
ನಗರದ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿರುವ ನಿವೇಶನಗಳ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿ ಸಂಸದ ಬಿ.ಶ್ರೀರಾಮುಲು ಸೇರಿ ಮೂವರ ವಿರುದ್ಧ ಮಾಜಿ ಸಚಿವ ಕರುಣಾಕರ ರೆಡ್ಡಿ ಇತ್ತೀಚೆಗೆ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲೀಕತ್ವದ ಘೋಷಣೆಯ ದಾವೆ ಹೂಡಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯ ಸಂಸದ ಬಿ.ಶ್ರೀರಾಮುಲು ಸೇರಿ ಮೂವರಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ.
Related Articles
ಸುಷ್ಮಾ ಸ್ವರಾಜ್ ಕಾಲೋನಿಯ ವಿವಿಧ ನಿವೇಶನಗಳಿಗೆ ಸಂಬಂಧಿಧಿಸಿದಂತೆ ಸಂಸದ ಬಿ.ಶ್ರೀರಾಮುಲು, ಬಳ್ಳಾರಿಯ ಕೆ.ತಿಮ್ಮರಾಜು ಮತ್ತು ಬೈರದೇವನಹಳ್ಳಿ ಗ್ರಾಮದ ಡಿ.ರಾಘವೇಂದ್ರ ಎನ್ನುವವರ ವಿರುದ್ಧ ಬಳ್ಳಾರಿ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಆ್ಯಂಡ್ ಸಿಜೆಎಂ ನ್ಯಾಯಾಲಯದಲ್ಲಿ ಕರುಣಾಕರ ರೆಡ್ಡಿ ಆಸ್ತಿ ಘೋಷಣೆಯ ದಾವೆಗಳನ್ನು ಹೂಡಿದ್ದಾರೆ. ನ್ಯಾಯಾಲಯ ಸಂಸದ ಸೇರಿದಂತೆ ಮೂವರಿಗೆ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
Advertisement
ಆಂತರಿಕ ಅಸಮಾಧಾನಕರುಣಾಕರರೆಡ್ಡಿ ಕೆಲ ವರ್ಷಗಳಿಂದ ತಮ್ಮ ಸಹೋದರರಾದ ಸೋಮಶೇಖರ್‌ರೆಡ್ಡಿ ಮತ್ತು ಜನಾರ್ದನ ರೆಡ್ಡಿಯವರಿಂದ ಅಂತರ ಕಾಯ್ದುಕೊಂಡಿದ್ದರು. ಎಲ್ಲಿಯೂ ಬಹಿರಂಗವಾಗಿ ಗುರುತಿಸಿಕೊಂಡಿರಲಿಲ್ಲ. ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆಯಲ್ಲೂ ಕರುಣಾಕರ ರೆಡ್ಡಿ ಭಾಗವಹಿಸಿರಲಿಲ್ಲ. ಈ ಮೂಲಕ ರೆಡ್ಡಿ ಕುಟುಂಬದ ಆಂತರಿಕ ಅಸಮಾಧಾನ ಸಾರ್ವಜನಿಕವಾಗಿ ಬಹಿರಂಗವಾಗಿತ್ತು,ರೆಡ್ಡಿ ಕುಟುಂಬದ ಅವಿಭಾಜ್ಯ ಅಂಗವಾಗಿರುವ ಸಂಸದ ಬಿ.ಶ್ರೀರಾಮುಲು ವಿರುದ್ಧ ಕರುಣಾಕರ ರೆಡ್ಡಿ ಆಸ್ತಿ ಮಾಲೀಕತ್ವದ ಘೋಷಣೆಗೆ ದಾವೆ ಹೂಡುವ ಮೂಲಕ ತಮ್ಮ ಸಹೋದರರ ಮೇಲಿನ ಅಸಮಾಧಾನವನ್ನು ಹೊರ ಹಾಕಿದಂತಾಗಿದೆ. ಈ ಬೆಳವಣಿಗೆ ಚರ್ಚೆಗೆ ಕಾರಣವಾಗಿದೆ. ತಡೆಗೆ ಯತ್ನ
ಕರುಣಾಕರ ರೆಡ್ಡಿ ಪರ ವಕೀಲರು ಇತ್ತೀಚೆಗೆ ಬಳ್ಳಾರಿ ನ್ಯಾಯಾಲಯದಲ್ಲಿ ದಾವೆ ಹೂಡಲು ಆಗಮಿಸಿದ್ದಾಗ ಅದನ್ನು ತಡೆಯಲು ಶ್ರೀರಾಮುಲು ಬೆಂಬಲಿಗರು ಯತ್ನಿಸಿದ್ದರು ಎನ್ನಲಾಗಿದೆ. ಆದರೆ, ಬೆಂಗಳೂರಿನ ವಕೀಲರು ಎಸ್‌ಪಿ ಆರ್.ಚೇತನ್‌ಗೆ ರಕ್ಷಣೆ ನೀಡುವಂತೆ ಕರೆ ಮಾಡುತ್ತಿದ್ದಂತೆ ಶ್ರೀರಾಮುಲು ಬೆಂಬಲಿಗರು ಜಾಗ ಖಾಲಿ ಮಾಡಿದರು ಎಂದು ತಿಳಿದು ಬಂದಿದೆ.