Advertisement

ಕರ್ನಿರೆ ಫೌಂಡೇಶನ್‌ ಮುಂಬಯಿ: ವೃಕ್ಷಾರೋಪಣ ಕಾರ್ಯಕ್ರಮ

04:51 PM Jul 04, 2019 | Vishnu Das |

ಮುಂಬಯಿ: ಉಳೆಪಾಡಿ ದೇವಸ್ಥಾನ ಪರಿಸರದಲ್ಲಿ ಸುಮಾರು 400 ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಕರ್ನಿರೆ ಫೌಂಡೇಶನ್‌ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಹೇಳಿದರು.

Advertisement

ಅವರು ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನ ಉಳೆಪಾಡಿ ಹಾಗೂ ಕರ್ನಿರೆ ಫೌಂಡೇಶನ್‌ ಮುಂಬಯಿ ವತಿಯಿಂದ ಉಳೆಪಾಡಿ ದೇವಸ್ಥಾನದ ಪರಿಸರದಲ್ಲಿ ನಡೆದ ವನಮಹೋತ್ಸವದಲ್ಲಿ ಮಾತನಾಡಿ, ದೇವಸ್ಥಾನದ
ಪರಿಸರದಲ್ಲಿ ಮರಗಿಡಗಳನ್ನು ಬೆಳೆಸಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಶಾಂತವಾದ ವಾತಾವರಣ ಸೃಷ್ಟಿಸುವ ಮೂಲ ಉದ್ದೇಶವಾಗಿದೆ, ಕರ್ನಿರೆ ಫೌಂಡೇಶನ್‌ ವತಿಯಿಂದ ಕಳೆದ ಬಾರಿ 5000 ವಿವಿಧ ಜಾತಿಯ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಗಿದ್ದು, ಇದರ ಪೋಷಣೆ
ಯನ್ನು ಮಾಡಲಾಗುತ್ತಿದೆ. ಇದರಲ್ಲಿ ಶೇ.80 ರಷ್ಟು ಗಿಡಗಳು ಬೆಳೆದಿದೆ. ಈ ಬಾರಿಯೂ ಜುಲೈ 6ರಂದು ಸುಮಾರು ಐದು ಸಾವಿರ ಗಿಡಗಳನ್ನು ನೆಡಲಾಗುವುದು, ಈ ಬಾರಿ ಮಳೆ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹೆಚ್ಚು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಮಳೆ ಬೆಳೆ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ ಎಂದರು.

ಮಂಗಳೂರಿನ ಸೆ„ಂಟ್‌ ಅಲೋಶಿಯಸ್‌ ಕಾಲೇಜಿನ ಸುಮಾರು 250 ವಿದ್ಯಾರ್ಥಿಗಳು ವನಮಹೋತ್ಸವದಲ್ಲಿ ಭಾಗಿಯಾಗಿದ್ದು, ಉಳೆ
ಪಾಡಿ ಸುತ್ತಮುತ್ತ ಸ್ವತ್ಛತೆಯಲ್ಲಿಯೂ ಪಾಲ್ಗೊಂಡರು. ವನ
ಮಹೋತ್ಸವದಲ್ಲಿ ವಿವಿಧ ತಳಿಯ ಸುಮಾರು 400 ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮದಲ್ಲಿ ಚಿತ್ತಂಜನ್‌ ಶೆಟ್ಟಿ ಉಳೆಪಾಡಿ, ನಾರಾಯಣ ಶೆಟ್ಟಿ ಉಳೆಪಾಡಿ, ಕೃಷ್ಣ ಶೆಟ್ಟಿ ರಾಜೇಶ್‌ ಶೆಟ್ಟಿ ಪುಲ್ಲೋಡಿ, ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಜೀವನ್‌ ಮಿಲನ್‌, ಎನ್‌.ಇ.ಸಿ.ಎಫ್‌ ನಿರ್ದೇಶಕ
ಶಶಿಧರ ಶೆಟ್ಟಿ, ಐಕಳ ಪಂಚಾಯತ್‌ ಅಧ್ಯಕ್ಷ ದಿವಾಕರ ಚೌಟ, ಗಜೇಂದ್ರ ಶೆಟ್ಟಿ, ಬಾಲಣ್ಣ ಶೆಟ್ಟಿ, ರವೀಂದ್ರ ಶೆಟ್ಟಿ, ಸೈಂಟ್‌ ಅಲೋಶಿಯಸ್‌ ಕಾಲೇಜಿನ ಫಾ| ಡೇನಿಲ್‌ ವಾಸ್‌, ಫಾ| ಪ್ರದೀಪ್‌, ಪ್ರಾಂಶುಪಾಲ ಪ್ರವೀಣ್‌ ಮಾರ್ಟೀಸ್‌, ರಾಜೇಶ್‌ ಪೂಜಾರಿ ಭಿವಂಡಿ, ಶರತ್‌ ಶೆಟ್ಟಿ ಕಿನ್ನಿಗೋಳಿ, ಕರುಣಾಕರ ಶೆಟ್ಟಿ ಉಳೆಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next