Advertisement
ನರೇಗಾ ಉದ್ಯೋಗ ಚೀಟಿ ಹೊಂದಿ ರುವ ಕುಟುಂ ಬದ 3 ವರ್ಷ ದೊಳ ಗಿನ ಮಕ್ಕಳಿಗೆ ಈ ಕೇಂದ್ರ ಆಶ್ರಯ ನೀಡ ಲಿದೆ. ಗ್ರಾಮೀಣ ಭಾಗ ದಲ್ಲಿ ನರೇಗಾ ಕೂಲಿ ಕಾರ್ಮಿಕ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಸಿ ಕೊಂಡಾಗ ಅವರ ಮಕ್ಕಳು ಪೋಷಣೆ, ಸುರಕ್ಷೆ, ಪೌಷ್ಟಿಕ ಆಹಾರದ ಕೊರತೆ ಅನುಭವಿಸಬಾರದು ಎಂಬ ದೂರದೃಷ್ಟಿ ಇದರ ಹಿಂದಿದೆ.
ಮಕ್ಕಳ ಸುರಕ್ಷೆಯ ದೃಷ್ಟಿಯಿಂದ ನೆಲ ಅಂತಸ್ತಿನಲ್ಲೇ “ಕೂಸಿನ ಮನೆ’ಗೆ ಕಟ್ಟಡ ಸೌಲಭ್ಯ ಒದಗಿಸಬೇಕು. ಮಕ್ಕಳ ಆಟ, ಕಲಿಕೆ ಹಾಗೂ ವಿಶ್ರಾಂತಿಗೆ ಪೂರಕವಾದ ವಿಶಾಲವಾದ ಕಟ್ಟಡ ಒದಗಿಸಬೇಕು ಎಂದು ಸರಕಾರ ಗ್ರಾ.ಪಂ.ಗಳಿಗೆ ಸೂಚನೆ ನೀಡಿದೆ. “ಕೂಸಿನ ಮನೆ’ಗೆ ದಾಖಲಾಗುವ ಮಕ್ಕಳಿಗೆ ಆರೈಕೆದಾರರ ನೇಮಕ ಆಗಲಿದೆ. ನರೇಗಾ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ 10 ಮಹಿಳೆಯರನ್ನು ಗುರುತಿಸಿ, ಅವರಲ್ಲಿ ಇಬ್ಬರನ್ನು ಪಾಳಿಯ ಮೇಲೆ ಈ ಶಿಶುಪಾಲನ ಕೇಂದ್ರಕ್ಕೆ ಆಯ್ಕೆ ಮಾಡಬೇಕೆಂದು ಸರಕಾರವು ಗ್ರಾ.ಪಂ.ಗಳಿಗೆ ಸೂಚಿಸಿದೆ. ಇದಕ್ಕಾಗಿ ಅವರಿಗೆ ನರೇಗಾ ಯೋಜನೆಯಡಿ 100 ದಿನದ ಕೂಲಿ ಪಾವತಿ ಮಾಡುವಂತೆ ತಿಳಿಸಿದೆ.
Related Articles
ಪ್ರತೀ ಕೇಂದ್ರಕ್ಕೆ ಕನಿಷ್ಠ 25 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೇಂದ್ರಗಳು ಪ್ರತೀ ದಿನ ಕನಿಷ್ಠ ಆರೂವರೆ ತಾಸು ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಬಿಸಿಯೂಟ, ಸಂಜೆ ಲಘು ಉಪಾಹಾರ ನೀಡಬೇಕು. ಮಕ್ಕಳ ಹಾಜರಾತಿ ನಿರ್ವಹಿಸಬೇಕು. ವೈದ್ಯಾಧಿಕಾರಿಗಳ ತಪಾಸಣೆ ಕಡ್ಡಾಯ. ಪ್ರತೀ ಕೇಂದ್ರಕ್ಕೆ ಆಯಾ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಮಂದಿ ಸದಸ್ಯರ ನಿರ್ವಹಣ ಸಮಿತಿ ರಚನೆ ಆಗಲಿದೆ. ಕೂಸಿನ ಮನೆ ಸ್ಥಾಪನೆಗೆ ಒಂದು ಬಾರಿ 35 ಸಾವಿರ ರೂ. ಹಾಗೂ ಮೂಲ ಸೌಕರ್ಯಕ್ಕೆ ಒಟ್ಟು 30 ಸಾವಿರ ರೂ., ಮಕ್ಕಳ ಆಟಿಕೆ ಸಾಮಗ್ರಿ ಖರೀದಿಗೆ 5 ಸಾವಿರ ರೂ. ಅನುದಾನವನ್ನು ಗ್ರಾ.ಪಂ.ಗಳು ತಮ್ಮ ಅನಾವರ್ತಕ ಅನುದಾನದಲ್ಲಿ ಬಳಸಲು ಅವಕಾಶ ಇದೆ. ವಿವಿಧ ಅಧಿಕಾರಿಗಳು ಕಾಲಕಾಲಕ್ಕೆ ಕೇಂದ್ರಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಲಿದ್ದಾರೆ.
Advertisement
ಒಟ್ಟು ಮೂರು ಹಂತಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಉಡುಪಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಅನುಷ್ಠಾನಕ್ಕೆ ಬರಲಿದೆ. ಈಗಾಗಲೇ ಸಿಬಂದಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕೆಲವೆಡೆ ಶಿಶುಪಾಲನ ಕೇಂದ್ರಕ್ಕೆ ಕಟ್ಟಡ ಗುರುತಿಸುವ ಕಾರ್ಯ ನಡೆಯುತ್ತಿದೆ.-ಪ್ರಸನ್ನ ಎಚ್., ಜಿ.ಪಂ. ಸಿಇಒ, ಉಡುಪಿ -ಪುನೀತ್ ಸಾಲ್ಯಾನ್