Advertisement

ಜನರ ಕಾಡಿದ ವರುಣ; ಜನಜೀವನ ಅಸ್ತವ್ಯಸ್ತ

06:00 AM Sep 18, 2017 | |

ಬೆಂಗಳೂರು/ತಿರುವನಂತಪುರ: ಆರಂಭದಲ್ಲಿ ಕೈಕೊಟ್ಟು ಈಗ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಜಡೀ ಮಳೆ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರವಾಹ ಭೀತಿ ತಂದೊಡ್ಡಿದೆ.

Advertisement

ರಾಜ್ಯದಲ್ಲಿ ಸೆಪ್ಟೆಂಬರ್‌ ಆರಂಭದಿಂದಲೂ ಭರ್ಜರಿ ಮಳೆಯಾಗುತ್ತಿದೆ. ದಕ್ಷಿಣ ಕರ್ನಾಟಕ ದಲ್ಲಿ ಕೊಂಚ ಬಿಡುವು ಕೊಟ್ಟಿದ್ದರೂ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಸುರಿದಿತ್ತು.

ಇದೀಗ ಮತ್ತೆ ರಾಜ್ಯಾದ್ಯಂತ ಆವರಿಸಿದ್ದು, ಭಾನುವಾರ ಪೂರ್ತಿ ಬೆಂಗಳೂರು ಮಳೆಯ ಅನುಭವಕ್ಕೆ ಸಾಕ್ಷಿಯಾಯಿತು. ಇನ್ನು ನೆರೆಯ ಕೇರಳದಲ್ಲೂ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೋರಿದೆ. ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಮುಂದಿನ 48
ಗಂಟೆಗಳ ಕಾಲ ಕೇರಳ ಮತ್ತು ಲಕ್ಷದ್ವೀಪದ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಅಟ್ಟಪ್ಪಾಡಿ ಮತ್ತು ಪಾಲ ಕ್ಕಾಡ್‌ ಜಿಲ್ಲೆಯ ಅನೇಕ ಕಡೆ ಭೂಕುಸಿತದಂಥ ಅವಘಡಗಳು ಸಂಭವಿಸಿದ್ದು, ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ, ಮುಂಬೈ ಮತ್ತು ಕೊಂಕಣ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಮಳೆಗೆ ಬೆಚ್ಚಿಬಿದ್ದ ಕೇರಳಿಗರು: ಇಡುಕ್ಕಿ ಹಾಗೂ ಅಳಪ್ಪುಳ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿದ್ದು, ರಸ್ತೆಗಳೆಲ್ಲ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕರುಕುಟ್ಟಿ ಅಣೆಕಟ್ಟಿನ ಮೂರು ಗೇಟ್‌ಗಳನ್ನು ತೆರೆಯಲಾಗಿದೆ. ಅನಕ್ಕಲ್‌, ಪುತೂರು ಮತ್ತು ಜೆಲ್ಲಿಪ್ಪಾರ ದಲ್ಲಿ ಹಲವು ಮನೆಗಳು, ರಸ್ತೆಗಳು ಹಾನಿಗೀಡಾಗಿವೆ. ಕೊಟ್ಟಾಯಂ ತಿರುವನಂತ ಪುರಂ ಮಾರ್ಗದಲ್ಲಿ ಮಣ್ಣು ಕುಸಿದ ಕಾರಣ ರೈಲು ಸಂಚಾರಕ್ಕೂ ಅಡ್ಡಿಯಾಗಿದೆ

ರಾಜ್ಯಾದ್ಯಂತ ನೈರುತ್ಯ ಮುಂಗಾರು ಪ್ರಬಲಗೊಂಡಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಇಡುಕ್ಕಿ ಮತ್ತು ಎರ್ನಾಕುಳಂನಲ್ಲಿ ವೃತ್ತಿಪರ ಕಾಲೇಜು ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಇತ್ತೀಚೆಗಷ್ಟೇ ಭಾರೀ ಮಳೆಯಿಂದಾಗಿ ಅಕ್ಷರಶಃ ಕಂಗಾಲಾಗಿದ್ದ ಮುಂಬೈನಲ್ಲಿ ಮುಂದಿನ 3 ದಿನಗಳ ಕಾಲ ಮತ್ತೂಮ್ಮೆ ವರುಣ ಅಬ್ಬರಿಸಲಿದ್ದಾನೆ. ಸೋಮವಾರದಿಂದ 72 ಗಂಟೆಗಳ ಕಾಲ ಮುಂಬೈ, ಕೊಂಕಣ ಪ್ರದೇಶ ಮತ್ತು ಗೋವಾದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement

ರತ್ನಗಿರಿ, ಸಿಂಧುದುರ್ಗ ಸೇರಿದಂತೆ ದಕ್ಷಿಣ ಕೊಂಕಣ ಪ್ರದೇಶ, ಮಧ್ಯ ಮಹಾರಾಷ್ಟ್ರ, ಗುಜರಾತ್‌ನ ಕೆಲವೆಡೆಯೂ
ಮಳೆಯಾಗಲಿದೆ ಎಂದಿದೆ ಇಲಾಖೆ. ಆಗಸ್ಟ್‌ 29ರಂದು 24 ಗಂಟೆಗಳ ಅವಧಿಯಲ್ಲಿ ಮುಂಬೈ 331 ಮಿ.ಮೀ. ಮಳೆಯನ್ನು ಕಂಡಿತ್ತು. ರೈಲು ಹಳಿಗಳೂ ಜಲಾವೃತವಾದ ಕಾರಣ ಎಷ್ಟೋ ಮಂದಿ 12 ಗಂಟೆಗಳಿಗೂ ಹೆಚ್ಚು ಕಾಲ ರೈಲು ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಐವರು ನೀರು ಪಾಲು
ಕಾರವಾರ
: ಸಮೀಪದ ಚೆಂಡಿಯಾ ಗ್ರಾಮದ ಬಳಿಯ ನಾಗರಮಡಿ ಫಾಲ್ಸ್‌ ನೋಡಲು ಬಂದಿದ್ದ ಗೋವಾದ ಐವರು ಹಳ್ಳದಲ್ಲಿ ಕೊಚ್ಚಿ ಹೋದ ದುರ್ಘ‌ಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಮಡಗಾಂವ್‌ ಸಮೀಪದ ರಾಯ್‌ ಗ್ರಾಮದ ಮರ್ಸಿಲಿನಾ ಮೆಕ್ಸಿಕಾ ಇಸ್ತಿಬಿರೋ(38), ರೇಣುಕಾ (23), ಲೆಸ್ಟರ್‌ ಫ್ರಾನ್ಸಿಸ್‌ ಪೆರೇರಾ(37), ಫ್ರಾನ್ಸಿಲಾ (21), μಯೋನಾ ಪಚಾಗೋ(28) ನೀರು ಪಾಲಾದವರು. ಈ ಪೈಕಿ ಫ್ರಾನ್ಸಿಲಾ ಮತ್ತು ಫಿಯೋನಾ ಪಚಾಗೋ ಅವರ ಮೃತದೇಹಗಳು ಸಿಕ್ಕಿವೆ. ಗೋವಾದಿಂದ 21 ಮಂದಿ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next