Advertisement
ಗೆಲುವಿಗೆ 193 ರನ್ ಗುರಿ ಪಡೆದಿದ್ದ ತ್ರಿಪುರ, 3ನೇ ದಿನದಾಟದ ಅಂತ್ಯಕ್ಕೆ 3ಕ್ಕೆ 59 ರನ್ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಆದರೆ ಸೋಮವಾರ 163ಕ್ಕೆ ಆಲೌಟ್ ಆಯಿತು.
ಕರ್ನಾಟಕದ ಪರ ವಿದ್ವತ್ ಕಾವೇರಪ್ಪ 44ಕ್ಕೆ 4 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ವಿಜಯ್‌ಕುಮಾರ್ ವೈಶಾಖ್ 3 ವಿಕೆಟ್ ಕೆಡವಿದರು.
Related Articles
Advertisement
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ರೈಲ್ವೇಸ್ ವಿರುದ್ಧ ಆಡಲಿದೆ. ಈ ಮುಖಾಮುಖೀ ಫೆ. 2ರಂದು ಸೂರತ್‌ನಲ್ಲಿ ಆರಂಭವಾಗಲಿದೆ.
2 ಜಯ, 15 ಅಂಕಇದು 4 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಗೆಲುವು. ಗುಜರಾತ್ ವಿರುದ್ಧ ಎಡವಿದರೆ, ಗೋವಾ ವಿರುದ್ಧ ಡ್ರಾ ಸಾಧಿಸಿತ್ತು. ಇದರೊಂದಿಗೆ ಕರ್ನಾಟಕದ ಅಂಕ 15ಕ್ಕೆ ಏರಿದೆ. ತಮಿಳುನಾಡು ಕೂಡ 15 ಅಂಕ ಹೊಂದಿದೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ಕರ್ನಾಟಕ “ಸಿ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿದೆ (1.236). ತಮಿಳುನಾಡು ದ್ವಿತೀಯ ಸ್ಥಾನದಲ್ಲಿದೆ (0.768). ಸಂಕ್ಷಿಪ್ತ ಸ್ಕೋರ್: ಕರ್ನಾಟಕ-241 ಮತ್ತು 151. ತ್ರಿಪುರ-200 ಮತ್ತು 163 (ಸುದೀಪ್ ಚಟರ್ಜಿ 82, ಗಣೇಶ್ ಸತೀಶ್ 22, ಶ್ರೀದಾಮ್ ಪಾಲ್ 21, ವಿದ್ವತ್ ಕಾವೇರಪ್ಪ 44ಕ್ಕೆ 4, ವಿಜಯ್‌ಕುಮಾರ್ ವೈಶಾಖ್ 62ಕ್ಕೆ 3).
ಪಂದ್ಯಶ್ರೇಷ್ಠ: ವಿಜಯ್‌ಕುಮಾರ್ ವೈಶಾಖ್. ತವರಲ್ಲೇ ಎಡವಿದ ಮುಂಬಯಿ
ಮುಂಬಯಿ: ಆತಿಥೇಯ ಮುಂಬಯಿ “ಬಿ’ ವಿಭಾಗದ ರಣಜಿ ಮುಖಾಮುಖೀಯಲ್ಲಿ ಉತ್ತರ ಪ್ರದೇಶ ವಿರುದ್ಧ 2 ವಿಕೆಟ್‌ಗಳ ಸೋಲನುಭವಿಸಿದೆ. ಗೆಲುವಿಗೆ 195 ರನ್ ಗಳಿಸಬೇಕಿದ್ದ ಉತ್ತರಪ್ರದೇಶ 8 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಆರ್ಯನ್ ಜುಯಲ್ (76) ಮತ್ತು ಕರಣ್ ಶರ್ಮ (ಔಟಾಗದೆ 67) ಅವರ ಬ್ಯಾಟಿಂಗ್ ಸಾಹಸದಿಂದ ಯುಪಿ ರೋಚಕ ಜಯ ಸಾಧಿಸಿತು. 149ಕ್ಕೆ 6 ವಿಕೆಟ್ ಬಿದ್ದಾಗ ಮುಂಬಯಿ ಮುಂದೆ ಗೆಲುವಿನ ಅವಕಾಶವಿತ್ತು. ಆದರೆ ಕರಣ್ ಶರ್ಮ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ತಂಡವನ್ನು ದಡ ಸೇರಿಸಿದರು. ಮುಂಬಯಿ ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲೇ ಸೋಲಿಗೆ ತುತ್ತಾಯಿತು. ಸಂಕ್ಷಿಪ್ತ ಸ್ಕೋರ್: ಮುಂಬಯಿ-198 ಮತ್ತು 320. ಯುಪಿ-324 ಮತ್ತು 8 ವಿಕೆಟಿಗೆ 195.