Advertisement

Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್‌ ಎದುರಾಳಿ

11:10 PM Dec 25, 2024 | Team Udayavani |

ಅಹ್ಮದಾಬಾದ್‌: ಸತತ 2 ಪಂದ್ಯಗಳನ್ನು ಗೆದ್ದ ಉತ್ಸಾಹದಲ್ಲಿರುವ ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ ಗುರುವಾರ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಕೂಟದಲ್ಲಿ ಪ್ರಬಲ ಪಂಜಾಬ್‌ ತಂಡವನ್ನು ಎದುರಿಸಲಿದೆ.

Advertisement

ಸದ್ಯ 8 ಅಂಕಗಳೊಂದಿಗೆ ರಾಜ್ಯ 2ನೇ ಸ್ಥಾನದಲ್ಲಿದೆ. ಪಂಜಾಬ್‌ ಇಷ್ಟೇ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ರಾಜ್ಯ ಕ್ವಾರ್ಟರ್‌ ಫೈನಲ್‌ಗೆ ತುಸು ಸನಿಹವಾಗಲಿದೆ.

ಕರ್ನಾಟಕ ಈವರೆಗೆ ಮುಂಬಯಿ ವಿರುದ್ಧ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿ 7 ವಿಕೆಟ್‌, ಪುದುಚೇರಿ ವಿರುದ್ಧ 3 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next