Advertisement

5ರಂದು ಕರ್ನಾಟಕ-ತ.ನಾಡು ಗಡಿ ಸಾಂಕೇತಿಕ ಬಂದ್‌

07:05 AM Apr 03, 2018 | Team Udayavani |

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ವಿರೋಧ ಪಕ್ಷಗಳು ಬಂದ್‌ಗೆ ಕರೆ ನೀಡಿರುವುದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಕನ್ನಡ ಸಂಘಟನೆಗಳು ಅತ್ತಿಬೆಲೆಯಲ್ಲಿ ಏಪ್ರಿಲ್‌5 ರಂದು ಸಾಂಕೇತಿಕವಾಗಿ, ತಮಿಳುನಾಡು ಮತ್ತು ಕರ್ನಾಟಕದ ಗಡಿ ಬಂದ್‌ ಮಾಡಲು ತೀರ್ಮಾನಿಸಿವೆ. ಇದಾದ ಬಳಿಕ ಕರ್ನಾಟಕ ಬಂದ್‌ ಬಗ್ಗೆ ಚಿಂತನೆ ನಡೆಸಲಿವೆ ಎಂದು  ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ತಮಿಳುನಾಡಿನ  ಡಿಎಂಕೆ ಪಕ್ಷದ ಮುಖಂಡ ಸ್ಟಾಲಿನ್‌, ಚಿತ್ರನಟರಾದ ರಜನೀಕಾಂತ್‌ ಮತ್ತು ಕಮಲ್‌ ಹಾಸನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸಿದರೂ ಮತ್ತೆ ಕಾವೇರಿ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆದಿವೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಆಗಬಾರದು ಎಂದರು.

ಕಾವೇರಿ ನದಿ ನೀರಿನ ವಿಚಾರವಾಗಿ ಈಗಾಗಲೇ ತಮಿಳುನಾಡಿನ ಸಂಸದರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ನಮ್ಮ ಸಂಸದರು ಕಾವೇರಿ, ಮೇಕೆದಾಟು, ಕಳಸಬಂಡೂರಿ ಮತ್ತು ಮಹಾದಾಯಿ ವಿಚಾರವಾಗಿ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ತಮಿಳುನಾಡಿನ ರಾಜಕೀಯ ಮುಖಂಡರ ಬದ್ಧತೆಯನ್ನ ನಮ್ಮವರು ನೋಡಿ ಕಲಿಯಬೇಕು. ನಮ್ಮ ಸಂಸದರು ಕೂಡ ರಾಜೀನಾಮೆ ನೀಡಿ ಪ್ರತಿಭಟಿಸಲಿ ಎಂದು ಹೇಳಿದರು.

ಕರ್ನಾಟ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ರಾಜಕೀಯ ಲಾಭಕ್ಕಾಗಿ ಚಿತ್ರನಟ ರಜನೀಕಾಂತ್‌ ಮತ್ತು ಕಮಲ್‌ ಹಾಸನ್‌ ಕಾವೇರಿ ಕ್ಯಾತೆ ತೆಗಿದಿದ್ದಾರೆ. ಅಲ್ಲದೆ, ಕೆಲವು ಮುಖಂಡರು ಪ್ರಧಾನಿ ಬಂದಾಗ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದಾಗಿ ಹೇಳುತ್ತಿದ್ದಾರೆ. ನಮಗೂ ಪ್ರತಿಭಟಿಸುವುದು ಗೊತ್ತಿದೆ ಎಂದರು.

Advertisement

ಕೂಡಿಯುವ ನೀರಿನ ಉದ್ದೇಶದಿಂದಾಗಿ ಕರ್ನಾಟಕ ಮೇಕೆದಾಟು ಯೋಜನೆಗೆ ಮುಂದಾಗಿದೆ. ಈ ಬಗ್ಗೆ ಮಾತನಾಡುವ ಹಕ್ಕು ತಮಿಳುನಾಡಿಗೆ ಇಲ್ಲ. ಕರ್ನಾಟಕದ ವಿರುದ್ಧ ಡಿಎಂಕೆ ಮುಖಂಡ ಸ್ಟಾಲಿನ್‌ ಮಾತನಾಡುತ್ತಿರುವುದು ಖಂಡನೀಯ.ಚುನಾವಣೆಯನ್ನು ಬದಿಗೊತ್ತಿ ರಾಜಕೀಯ ಮುಖಂಡರು ಕಾವೇರಿ ವಿಚಾರದಲ್ಲಿ ಒಂದಾಗಬೇಕು ಎಂದು ಮನವಿ ಮಾಡಿದರು.

ಎಂಇಎಸ್‌ ವಿರುದ್ಧ ಕಣಕ್ಕೆ.
ಬೆಳಗಾವಿಯಲ್ಲಿ ಎಂಇಎಸ್‌ ಅಭ್ಯರ್ಥಿಗಳು ಗೆದ್ದು ಶಾಸನ ಸಭೆಗೆ ಬರುತ್ತಿದ್ದಾರೆ. ಕನ್ನಡಿಗರು ಇದಕ್ಕೆ ಅವಕಾಶ ಕೊಡಬಾರದರು.   ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರ ಕಣಕ್ಕಿಳಿಸಲು ತೀರ್ಮಾನಿಸಲಾಗಿದ್ದು,ಯಾವುದೇ ಕಾರಣಕ್ಕೂ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಯಬಾರದು ಎಂದು ವಾಟಾಳ್‌ ನಾಗರಾಜ್‌ ಮತ್ತು ಸಾ.ರಾ.ಗೋವಿಂದು ಮನವಿ ಮಾಡಿದರು.ಮಹಾಜನ್‌ ವರದಿ ಜಾರಿಗೆ ಒತ್ತಾಯಿಸಿ ಬೆಳಗಾವಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್‌ಗೆ ಈ ಭಾರಿ ಕನ್ನಡಿಗರು ತಕ್ಕಪಾಠ ಕಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next