Advertisement
ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದು ಇವುಗಳನ್ನು ಆದ್ಯತಾ ವಲಯಗಳಾಗಿ ಪರಿಗಣಿಸಿ ಹೆಚ್ಚಿನ ಅನುದಾನ ಒದಗಿಸಿದ್ದು, ಮೇಕೆದಾಟು, ಎತ್ತಿನಹೊಳೆ, ಭದ್ರಾ, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗಳಿಗೆ ಹಣಕಾಸು ನಿಗದಿ ಮಾಡಿ ಕಾಂಗ್ರೆಸ್ ಹೋರಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.ಗೋವು ದತ್ತು ಪಡೆಯುವ ಪುಣ್ಯಕೋಟಿ, ಗೋ ಉತ್ಪನ್ನಗಳ ಮಾರುಕಟ್ಟೆಗೆ ಗೋ ಮಾತಾ ಸಹಕಾರ ಸಂಘ, ಹಾಲು ಉತ್ಪಾದಕರಿಗೆ ಸಾಲ ನೀಡಲು ಕ್ಷೀರ ಸಹಕಾರ ಬ್ಯಾಂಕ್, ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಗುಂಪು ರಚನೆ, ಯಂತ್ರೋಪಕರಣ ಬಳಕೆ ಮಾಡುವ ರೈತರಿಗೆ ಸಬ್ಸಿಡಿ ನೀಡುವ ರೈತ ಶಕ್ತಿಯಂತಹ ಹೊಸ ಯೋಜನೆ ಪ್ರಕಟಿಸಿ ಚೊಚ್ಚಲ ಬಜೆಟ್‌ನಲ್ಲೇ ಸೈ ಎನಿಸಿಕೊಂಡಿದ್ದಾರೆ.
Related Articles
Advertisement
ನೀರಾವರಿಗೆ 14 ಸಾವಿರ ಕೋ.ರೂ. ಕೃಷ್ಣಾ ಮೇಲ್ದಂಡೆ ಮೂರನೇ ಹಂತಕ್ಕೆ 5000 ಕೋಟಿ ರೂ., ಕಳಸಾ-ಬಂಡೂರಿ ನಾಲಾ ಯೋಜನೆಗೆ 1 ಸಾವಿರ ಕೋಟಿ ರೂ., ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ. ಮೇಕೆದಾಟು ಯೋಜನೆಗೆ 1 ಸಾವಿರ ಕೊಟಿ ರೂ., ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆ ಕೊರತೆ ನೀಗಿಸಲು ನವಲೆಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ 1ಸಾವಿರ ಕೋಟಿ ರೂ. ಒದಗಿಸಿ 2021-22 ನೇ ಸಾಲಿನಲ್ಲಿ ಆನುಮೋದಿಸಿದ 8,774 ಕೋಟಿ ರೂ. ಹೊಸ ನೀರಾವರಿ ಯೋಜನೆಗಳಿಗೆ ರೂಪು ರೇಷೆ ಸಿದ್ಧಪಡಿಸಲಾಗು ವುದು. ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಆಯ್ದ ಮಹಿಳಾ ಸ್ವ ಸಹಾಯ ಸಂಘಗಳಿಗೆ ತಲಾ 1.5 ಲಕ್ಷ ರೂ. ನೆರವು ನೀಡಲು 500 ಕೋಟಿ ರೂ. ಅನುದಾನ, ಎಸ್‌ಸಿ-ಎಸ್‌ಟಿ ಗುಂಪುಗಳ 3.9 ಲಕ್ಷ ಮಹಿಳೆಯರಿಗೆ ಅನುಕೂಲ ಕಲ್ಪಿಸುವುದು. ಮಹಿಳಾ ಸ್ವ ಸಹಾಯ ಸಂಘಗಳಿಗೆ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊಗಿಸಲು ಏಕಗವಾಕ್ಷಿ ಯೋಜನೆ, ಸ್ವ ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳ ಬ್ರ್ಯಾಂಡಿಂಗ್ ಮೌಲ್ಯವರ್ಧನೆ, ಪ್ಯಾಕಿಂಗಘ ಸೌಲಭ್ಯ ಒದಗಿಸಿ, ಮಾರುಕಟ್ಟೆ ಒದಗಿಸಲು ಆಸ್ಮಿತೆ ಹೆಸರಿನ ಮಾರಾಟ ಮೇಳ ಆಯೋಜನೆ ಘೋಷಿಸಲಾಗಿದೆ. ಪ್ರಮುಖ ಘೋಷಣೆಗಳು
-ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ
-ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
-ಗೋ ಉತ್ಪನ್ನಗಳ ಮಾರಾಟಕ್ಕಾಗಿ ರಾಜ್ಯಾ ದ್ಯಂತ ಗೋ ಮಾತಾ ಸಹಕಾರ ಸಂಘ ಸ್ಥಾಪನೆ
-ಬೆಳಗಾವಿಯಲ್ಲಿ ಕಿದ್ವಾಯಿ ಪಾದ್ರೇಶಿಕ ಕ್ಯಾನ್ಸರ್ ಕೇಂದ್ರ, ಹಾನಗಲ್‌ನಲ್ಲಿ ಮಾವು ಸಂÓRರಣಾ ಘಟಕೆ
-ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆಯುಷ್ ವಿಭಾಗ
-ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದು ಶ್ರೀನಾರಾಯಣ ಗುರು ವಸತಿ ಶಾಲೆ ಪ್ರಾರಂಭ
-ರಾಜ್ಯದಿಂದ ಕಾಶಿ ಯಾತ್ರೆ ಕೈಗೊ ಳ್ಳುವ 30 ಸಾವಿರ ಮಂದಿಗೆ ಸರ್ಕಾ ರ ದಿಂದ ತಲಾ 5 ಸಾವಿರ ರೂ.
-ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭ
-ವಾರ್ಷಿಕವಾಗಿ 125 ಕನ್ನಡ ಚಿತ್ರಗಳಿಗೆ ಸಹಾಯಧನವನ್ನು 200 ಕನ್ನಡ ಚಿತ್ರಗಳಿಗೆ ಏರಿಕೆ ಮಾಡುವುದು.
-ಬೆಂಗಳೂರಿನ ನಾಲ್ಕು ಭಾಗಗಳಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
-ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪ್ರವಾಸಿಗೈಡ್‌ಗಳ ಗೌರವಧನ ಹೆಚ್ಚಳ
-ಪಡಿತರ 5 ಕೆಜಿ ಅಕ್ಕಿ ಜತೆಗೆ 1 ಕೆಜಿ ರಾಗಿ/ಜೋಳ ಸಿಎಂ ಪಂಚಸೂತ್ರ
1. ರಾಜ್ಯದಲ್ಲಿ ಎಲ್ಲರನ್ನೂ ಒಳಗೊಂಡ ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಮಾಡುವುದು.
2. ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆಗೆ ಒತ್ತು ನೀಡುವುದು. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಕಾರ್ಯಕ್ರಮ ರೂಪಿಸಿ ಆರೋಗ್ಯ ಸೇವೆ ಒದಗಿಸುವುದು.
3. ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡುವುದು
4. ಕೃಷಿ ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಅಭಿವೃದ್ಧಿ ಸಾಧಿಸುವುದು.
5. ಹೊಸ ಚಿಂತನೆ, ಹೊಸ ಚೈತನ್ಯ,ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುವುದು.