ಬೆಂಗಳೂರು: ರಾಜ್ಯದ 2019-20ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ. 71.80 ಫಲಿತಾಂಶ ಬಂದಿದೆ
ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. ಕೋವಿಡ್-19 ಸೋಂಕು ಭೀತಿ ಇದ್ದರೂ ಈ ಬಾರಿ 8,11,050 ಮಂದಿ ಈ ಬಾರಿ ಪರೀಕ್ಷೆ ಬರೆದಿದ್ದರು ಎಂದರು.
ಈ ಬಾರಿಯ ಪರೀಕ್ಷೆಯಲ್ಲಿ 66.41 ಶೇ ಬಾಲಕರು ಉತ್ತೀರ್ಣರಾಗಿದ್ದರೆ, ಶೇ. 77.74 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿ ರ್ಯಾಂಕ್ ಕೊಡುವ ಬದಲು ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ್, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡಗಳು ಎ ಗ್ರೇಡ್ ಪಡೆದಿವೆ.
ರಾಜ್ಯದಲ್ಲಿ ಈ ಬಾರಿ ಆರು ಮಂದಿ 625ಕ್ಕೆ 625 ಅಂಕ ಪಡೆದಿದ್ದರೆ. ಶಿರಸಿಯ ಸನ್ನಿಧಿ, ಬೆಂಗಳೂರಿನ ಚಿರಾಯು, ನಿಖಿಲೇಶ್, ಮಂಡ್ಯದ ಧೀರಜ್ ರೆಡ್ಡಿ, ದಕ್ಷಿಣ ಕನ್ನಡದ ಅನುಷ್, ಚಿಕ್ಕಮಗಳೂರಿನ ತನ್ಮಯಿ ಅವರು ಶೇ.100 ಅಂಕ ಪಡೆದಿದ್ದಾರೆ.