Advertisement

ರಾಜ್ಯದ ಫೈನಲ್‌ ಕನಸಿಗೆ ಪೂಜಾರ ಅಡ್ಡಿ

12:30 AM Jan 28, 2019 | Team Udayavani |

ಬೆಂಗಳೂರು: ಶನಿವಾರ ಬೌಲಿಂಗ್‌ನಲ್ಲಿ ಮೆರೆದಾಡಿ ಈ ಬಾರಿ ರಣಜಿ ಫೈನಲ್‌ಗೇರುವ ಕನಸು ಕಂಡಿದ್ದ ಕರ್ನಾಟಕದ ಮೇಲೆ ರವಿವಾರದ ಕೊನೆಯಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದೆ. ಗೆಲುವಿಗೆ 279 ರನ್‌ ಗುರಿ ಪಡೆದ ಸೌರಾಷ್ಟ್ರ, 3 ವಿಕೆಟಿಗೆ 224 ರನ್‌ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿದೆ.

Advertisement

ಸೆಮಿಫೈನಲ್‌ ಗೆಲ್ಲುವ ರಾಜ್ಯದ ಯೋಜನೆಯನ್ನು ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್‌ ಜಾಕ್ಸನ್‌ ಸದ್ಯ ವಿಫ‌ಲಗೊಳಿಸಿದ್ದಾರೆ. ಪೂಜಾರ 108, ಜಾಕ್ಸನ್‌ 90 ರನ್‌ ಬಾರಿಸಿ ಕ್ರೀಸ್‌ ಆಕ್ರಮಿಸಿಕೊಂಡಿದ್ದಾರೆ. 23 ರನ್‌ಗೆ ಸೌರಾಷ್ಟ್ರದ 3 ವಿಕೆಟ್‌ಗಳು ಪಟಪಟನೆ ಉದುರಿಕೊಂಡಾಗ, ಕರ್ನಾಟಕ ಬಹುತೇಕ ಗೆದ್ದೇ ಬಿಟ್ಟ ಭಾವನೆಯಲ್ಲಿತ್ತು. ಆದರೆ ಚೇತೇಶ್ವರ ಪೂಜಾರ ಹಾಗೂ ಜಾಕ್ಸನ್‌ ಅಲ್ಲಿಂದ ಕ್ರೀಸಿಗೆ ಅಂಟಿಕೊಂಡರು. ಮತ್ತೂಂದೇ ಒಂದು ವಿಕೆಟ್‌ ಉರುಳಲು ಅವರು ಅವಕಾಶ ಮಾಡಿಕೊಡಲಿಲ್ಲ. ಇವರಿಬ್ಬರ ಮುರಿಯದ 4ನೇ ವಿಕೆಟ್‌ ಜತೆಯಾಟದಲ್ಲಿ 201 ರನ್‌ ಒಟ್ಟುಗೂಡಿತು. ಪೂಜಾರ 216 ಎಸೆತ ಎದುರಿಸಿ 108 ರನ್‌ ಬಾರಿಸಿದರು. ಅದರಲ್ಲಿ 14 ಬೌಂಡರಿಗಳು ಒಳಗೊಂಡಿವೆ.

ಪೂಜಾರ ಕರ್ನಾಟಕ ಬೌಲರ್‌ಗಳ ಎಲ್ಲ ಪ್ರಯತ್ನಗಳನ್ನು ವಿಫ‌ಲಗೊಳಿಸಿದರು. ತಾಳ್ಮೆಯ ಆಟವಾಡುತ್ತ, ಎದುರಾಳಿ ಬೌಲರ್‌ಗಳ ತಾಳ್ಮೆಗೆಡಿಸುತ್ತ ಸಾಗಿ 108 ರನ್‌ವರೆಗೆ ಬೆಳೆದಿದ್ದಾರೆ. ಇವರಿಗೆ ಅಷ್ಟೇ ಸಮರ್ಥ ಸಾಥ್‌ ನೀಡಿದ ಶೆಲ್ಡನ್‌ ಜಾಕ್ಸನ್‌ ರಾಜ್ಯದ ಬೌಲರ್‌ಗಳ ನೋವು ಹೆಚ್ಚಾಗಲು ಕಾರಣರಾದರು. ಜಾಕ್ಸನ್‌ ಕೂಡ ಜಬರ್ದಸ್ತ್ ಆಟವಾಡಿದರು. 205 ಎಸೆತಗಳಿಂದ ಅಜೇಯ 90 ರನ್‌ ಹೊಡೆದಿದ್ದಾರೆ. ಸಿಡಿಸಿದ್ದು 13 ಬೌಂಡರಿ.

ಇಬ್ಬರಲ್ಲಿ ಒಬ್ಬರು ಔಟಾಗಿದ್ದರೂ ಕರ್ನಾಟಕಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಅವಕಾಶ ಸಿಗುತ್ತಿತ್ತು. ಆದರೆ ಇವರು ಇದಕ್ಕೆ ಅವಕಾಶವನ್ನೇ ನೀಡಿಲ್ಲ. ಮೊದಲ ಇನ್ನಿಂಗ್ಸ್‌ ಹಿನ್ನಡೆ ಪಡೆದಿದ್ದ ಸೌರಾಷ್ಟ್ರವೀಗ ಸ್ಪಷ್ಟ ಗೆಲುವಿನತ್ತ ಸಾಗಿದೆ. ಉಳಿದ 7 ವಿಕೆಟ್‌ಗಳಿಂದ 55 ರನ್‌ ಗಳಿಸುವುದು ಸೌರಾಷ್ಟ್ರಕ್ಕೆ ಸಮಸ್ಯೆಯೇನಲ್ಲ.

ಕಂಟಕವಾದ ತೀರ್ಪು
ಸೌರಾಷ್ಟ್ರದ ದ್ವಿತೀಯ ಇನ್ನಿಂಗ್ಸ್‌ ವೇಳೆ ಪೂಜಾರ ವಿರುದ್ಧದ ಕಾಟ್‌ ಬಿಹೈಂಡ್‌ ತೀರ್ಪನ್ನು ಅಂಪಾಯರ್‌ ತಿರಸ್ಕರಿಸಿದ್ದು ಕರ್ನಾಟಕಕ್ಕೆ ಕಂಟಕವಾಗಿ ಪರಿಣಮಿಸಿತು. ಆಗಿನ್ನೂ ಪೂಜಾರ ಅರ್ಧ ಶತಕದ ಗಡಿಯನ್ನೂ ತಲುಪಿರಲಿಲ್ಲ. ಔಟೆಂಬುದು ಅರಿವಿದ್ದರೂ ಪೂಜಾರ ಕ್ರೀಡಾಸ್ಫೂರ್ತಿ ಮೆರೆಯದಿದ್ದುದು ಅಚ್ಚರಿಯಾಗಿ ಕಂಡಿತು.

Advertisement

2 ರನ್ನಿಗೆ ಬಿತ್ತು 2 ವಿಕೆಟ್‌
ಶನಿವಾರ 237 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದ ಕರ್ನಾಟಕ ರವಿವಾರ ತನ್ನ 2ನೇ ಸರದಿಯನ್ನು ಕೇವಲ 239 ರನ್‌ಗೆ ಮುಗಿಸಿತು. ಶ್ರೇಯಸ್‌ ಗೋಪಾಲ್‌ ಕ್ರೀಸ್‌ನಲ್ಲಿ ಇದ್ದಿದ್ದರಿಂದ ಇನ್ನೂ 25-30 ರನ್‌ ಗಳಿಸಬಹುದೆಂಬ ನಿರೀಕ್ಷೆ ಇತ್ತು. ಈ ಎರಡೂ ವಿಕೆಟ್‌ಗಳನ್ನು ದೇವೇಂದ್ರ ಜಡೇಜ ಪಡೆದರು. ಅವರ ಸಾಧನೆ

ರಣಜಿ ಸ್ಕೋರ್‌ ಕಾರ್ಡ್‌
ಕರ್ನಾಟಕ 2ನೇ ಇನಿಂಗ್ಸ್‌ 239 ಆಲೌಟ್‌

ಶ್ರೇಯಸ್‌ ಗೋಪಾಲ್‌ ಸಿ ವಸವಡ ಬಿ ಡಿ.ಜಡೇಜ    61
ಅಭಿಮನ್ಯು ಮಿಥುನ್‌ ಅಜೇಯ    37
ರೋನಿತ್‌ ಮೋರೆ ಎಲ್ಬಿ ಡಿ.ಜಡೇಜ    0
ಇತರೆ    11
ವಿಕೆಟ್‌ ಪತನ: 9-239, 10-239
ಬೌಲಿಂಗ್‌
ಜೈದೇವ್‌ ಉನಾಡ್ಕತ್‌    15    3    35    3
ಸಿ.ಸಕಾರಿಯ    11    0    38    0
ಪ್ರೇರಕ್‌ ಮಂಕಡ್‌    10    0    27    2
ಧರ್ಮೇಂದ್ರ ಜಡೇಜ    28    3    78    5
ಕಮಲೇಶ್‌ ಮಕ್ವಾನ    16    1    52    0
ಸೌರಾಷ್ಟ್ರ 2ನೇ ಇನಿಂಗ್ಸ್‌ 224/3
ಹಾರ್ವಿಕ್‌ ದೇಸಾಯಿ ಸಿ ಸಿದ್ಧಾರ್ಥ್ ಬಿ ಮಿಥುನ್‌    9
ಸ್ನೆಲ್‌ ಪಟೇಲ್‌ ಸಿ ಎಸ್‌.ಶರತ್‌ ಬಿ ವಿನಯ್‌ ಕುಮಾರ್‌    0
ವಿಶ್ವರಾಜ್‌ ಜಡೇಜ ಎಲ್ಬಿ ವಿನಯ್‌ ಕುಮಾರ್‌    0
ಚೇತೇಶ್ವರ ಪೂಜಾರ ಅಜೇಯ    108
ಶೆಲ್ಡನ್‌ ಜಾಕ್ಸನ್‌ ಅಜೇಯ    90
ಇತರೆ    17
ವಿಕೆಟ್‌ ಪತನ: 1-1, 2-3, 3-23
ಬೌಲಿಂಗ್‌
ವಿನಯ್‌ ಕುಮಾರ್‌    18    1    48    2
ಅಭಿಮನ್ಯು ಮಿಥುನ್‌    13    3    35    1
ರೋನಿತ್‌ ಮೋರೆ    18    6    44    0
ಕೃಷ್ಣಮೂರ್ತಿ ಸಿದ್ಧಾರ್ಥ್    2    1    1    0
ಕೆ.ಗೌತಮ್‌    14    3    44    0
ಶ್ರೇಯಸ್‌ ಗೋಪಾಲ್‌    6    0    29    9
ಆರ್‌.ಸಮರ್ಥ್    3    0    9    0

Advertisement

Udayavani is now on Telegram. Click here to join our channel and stay updated with the latest news.

Next