ಬೆಂಗಳೂರು: ಅಧಿಕಾರಿಗಳ ಪೋಸ್ಟಿಂಗ್, ಲೋಕ ಸಭಾ ಚುನಾವಣ ಟಿಕೆಟ್ ಸಹಿತ ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಸಚಿವೆ ಲಕ್ಷಿ$¾à ಹೆಬ್ಟಾಳ್ಕರ್ ವಿರುದ್ಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬೆಳಗಾವಿ ಯಲ್ಲಿ ನನ್ನ ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್ ಮಧ್ಯೆ ಶೀತಲಸಮರ ಏನೂ ಇಲ್ಲ. ಎಲ್ಲವೂ ನನ್ನ ಅಡಿಯಲ್ಲೇ ಇರಬೇಕು ಎಂಬ ಸ್ವಭಾವ ನನ್ನದಲ್ಲ. ಅಧಿಕಾರಿಗಳ ವಿಚಾರದಲ್ಲೂ ಹಾಗೆಯೇ. ಯಾರು ಬಂದರೂ ಕೆಲಸ ಮಾಡಬೇಕಾಗುತ್ತದೆ. ಯಾವುದೋ ಒಂದು ಸ್ಥಾನಕ್ಕೆ ಸಂಬಂಧಪಟ್ಟಂತೆ ಅವರಿಗೆ ಬೇಕಾದವರನ್ನು ಹಾಕಿಸಿಕೊಂಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಲೋಕಸಭಾ ಟಿಕೆಟ್ ವಿಷಯದಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ. ಯಾರಾದರೊಬ್ಬರು ಅಭ್ಯರ್ಥಿ ಯಾಗಲೇ ಬೇಕು. ನಾನು ಮೊದಲಿನಿಂದಲೂ ಈ ಸಂಬಂಧ ಪ್ರಯತ್ನ ನಡೆಸುತ್ತಿದ್ದೇನೆ. ನಾನೇ ಸ್ಪರ್ಧೆ ಮಾಡ ಬೇಕೆಂದು ಈ ಹಿಂದೆ ನಿರ್ಧರಿಸಿದ್ದೆ. ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಾರದೇ ಇದ್ದಿದ್ದರೆ ನಾನೇ ಕಣಕ್ಕಿಳಿಯುತ್ತಿದ್ದೆ. ಸಂಬಂಧಪಟ್ಟವರಿಗೆ ಈ ವಿಚಾರವನ್ನು ನಾನು ಮೊದಲೇ ತಿಳಿಸಿದ್ದೇನೆ ಎನ್ನುವ ಮೂಲಕ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.
ಬೆಳಗಾವಿಯಲ್ಲಿ ಸದ್ಯ ಯಾರೂ ಕಾಂಗ್ರೆಸ್‌ಗೆ ಬರುವುದಿಲ್ಲ. ಇತರೆಡೆ ಬಿಜೆಪಿ ಹಾಗೂ ಜೆಡಿಎಸ್‌ನ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.