Advertisement
ಸರಕಾರ ಈ ಕುರಿತಾಗಿ ಏಳು ಹಂತಗಳಲ್ಲಿ ಮದುವೆ ನಡೆಸಲು ಚಿಂತಿಸಿದೆ ಅದರಂತೆ ಜುಲೈ ತಿಂಗಳ 23, 26 ಮತ್ತು 29 ರಂದು ಮೂರು ಹಂತದಲ್ಲಿ ನಡೆದರೆ ಆಗಸ್ಟ್ ತಿಂಗಳ 6,10, 14 ಮತ್ತು 17 ತಾರೀಕಿನಂದು ಮತ್ತೆ ನಾಲ್ಕು ಹಂತದಲ್ಲಿ ಸಾಮೂಹಿಕ ಮದುವೆ ನಡೆಯಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಶನಿವಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ವರನಿಗೆ ಪಂಚೆ – ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು ನೀಡಲಾಗುತ್ತದೆ.