ಮುಂಬಯಿ: ಕರ್ನಾಟಕ ಸಂಘ ಮುಂಬಯಿ ವತಿಯಿಂದ ಯಕ್ಷಕಲಾ ರಕ್ಷಣಾ ವೇದಿಕೆ ಮುಂಬಯಿ ಇವರಿಂದ ಫೆ. 8 ರಂದು ಸಂಜೆ 6 ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಕಾರ್ತವೀರ್ಯ ಯಕ್ಷಗಾನ ಪ್ರದರ್ಶನಗೊಂಡಿತು.
ಅಶ್ವಿನಿ ಕೊಂಡದಕುಳಿ ಅವರ ಸಂಯೋಜನೆಯಲ್ಲಿ ಹಾಗೂ ಹೆರಂಜಾಲು ಗೋಪಾಲ ಗಾಣಿಗ ಅವರ ನಿರ್ದೇಶನದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಗೋಪಾಲ ಕೃಷ್ಣ ಗಾಣಿಗ ಹೆರಂಜಾಲು, ಮದ್ದಳೆಯಲ್ಲಿ ಶಶಿಕುಮಾರ್ ಆಚಾರ್ ಉಡುಪಿ, ಚೆಂಡೆಯಲ್ಲಿ ರಾಮನ್ ಹೆಗ್ಡೆ ಅವರು ಸಹಕರಿಸಿದರು.
ಮುಮ್ಮೇಳದಲ್ಲಿ ಕಲಾವಿದರಾಗಿ ಅಶ್ವಿನಿ ಕೊಂಡದಕುಳಿ, ನರೇಂದ್ರ ಹೆಗ್ಡೆ, ಲಕ್ಷ್ಮೀನಾರಾಯಣ ಭಟ್, ನಾಗೇಂದ್ರ ಭಟ್ ಮೂರುರು, ಮಹಾಬಲೇಶ್ವರ ಭಟ್ ಇಟಗಿ, ಟಿ. ವಿ. ಸ್ಫೂ³ರ್ತಿ ಭಟ್ ಮೊದಲಾದವರು ಪಾಲ್ಗೊಂಡಿದ್ದರು. ಸದಾಶಿವ ವಾಲ್ಪಾಡಿ ಅವರ ಸಂಚಾಲಕದಲ್ಲಿ ಕಾರ್ಯಕ್ರಮವು ನೆರವೇರಿತು. ಇದೇ ಸಂದರ್ಭದಲ್ಲಿ ಅಶ್ವಿನಿ ಕೊಂಡದಕುಳಿ ಅವರನ್ನು ಕರ್ನಾಟಕ ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್ ಕುಮಾರ್ ಪೊಲಿಪು, ಸಮಿತಿ ಸದಸ್ಯರಾದ ಓಂದಾಸ್ ಕಣ್ಣಂಗಾರ್, ಮೈಸೂರು ಅಸೋಸಿಯೇಶನ್ ಕಾರ್ಯದರ್ಶಿ ಡಾ| ಗಣಪತಿ ಶಂಕರ ಲಿಂಗ ಅವರು ಉಪಸ್ಥಿತರಿದ್ದರು. ಕಲಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ