Advertisement

ಡೊಂಬಿವಲಿ ಕರ್ನಾಟಕ ಸಂಘ ಭಜನ ಸ್ಪರ್ಧೆ: ಬಹುಮಾನ ವಿತರಣೆ

04:32 PM Mar 03, 2017 | Team Udayavani |

ಡೊಂಬಿವಲಿ:  ಕರ್ನಾಟಕ ಸಂಘ ಡೊಂಬಿವಲಿ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-4 ಅಂಗವಾಗಿ  ಸಂಘದ ಸುವರ್ಣ ಮಹೋತ್ಸವ ಸಮಿತಿ ಮತ್ತು ಲಲಿತ ಕಲಾ ವಿಭಾಗದ ಜಂಟಿ ಆಯೋಜನೆಯಲ್ಲಿ ಶ್ರೀ ಪುರಂದರ ದಾಸರ ಆರಾಧನೆ, ಸ್ತುತಿ ಸೌರಭ ಭಜನ ಸ್ಪರ್ಧೆ ಮತ್ತು ಸಮ್ಮಾನ ಕಾರ್ಯಕ್ರಮವು ಫೆ. 26 ರಂದು ಸಂಜೆ ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಇದೇ ಸಂದರ್ಭದಲ್ಲಿ ಭಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀ ಅಯ್ಯಪ್ಪ ಭಜನ ಮಂಡಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿ ಶುಭಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಡೊಂಬಿವಲಿ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಪ್ರಕಾಶ್‌ ಭಟ್‌, ಬಂಟರ ಸಂಘ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಬೊಲಾ°ಡುಗುತ್ತು ಚಂದ್ರಹಾಸ ಎಂ. ರೈ, ಸಂಘದ ಅಧ್ಯಕ್ಷ ವಿಠಲ ಎ. ಶೆಟ್ಟಿ, ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಶೇಖರ ಸಸಿಹಿತ್ಲು, ಅರ್ಪಣಾ ಭಟ್‌, ಮೋಹನ್‌ದಾಸ್‌ ರೈ, ಶ್ರೀಧರ ಆರ್‌. ಶೆಟ್ಟಿ, ಸನತ್‌ ಕುಮಾರ್‌ ಜೈನ್‌ ಮತ್ತು  ವಸಂತ ಸುವರ್ಣ, ಸಂಘದ ಉಪಾಧ್ಯಕ್ಷ ದಿಲೀಪ್‌ ಕೋಪರ್ಡೆ, ಗೌರವ ಕಾರ್ಯದರ್ಶಿ ದೇವದಾಸ್‌ ಕುಲಾಲ್‌, ಕೋಶಾಧಿಕಾರಿ ಚಿತ್ತರಂಜನ್‌ ಆಳ್ವ, ಜತೆ ಕಾರ್ಯದರ್ಶಿ ಗಣೇಶ್‌ ಶೆಟ್ಟಿ ಐಕಳ, ಲೋಕನಾಥ ಶೆಟ್ಟಿ, ಕೋಶಾಧಿಕಾರಿ ಸತೀಶ್‌ ಆಲಗೂರ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು.

ಭಜನ ಸ್ಪರ್ಧೆಯಲ್ಲಿ ಡೊಂಬಿವಲಿ ಹವ್ಯಕ ಮಂಡಳಿ, ಮಹಾಲಕ್ಷಿ¾à ಭಜನ ಮಂಡಳಿ, ವರದ ಸಿದ್ಧಿವಿನಾಯಕ ಭಜನ ಮಂಡಳಿ, ಕುಲಾಲ ಸಂಘ ಸ್ಥಳೀಯ ಸಮಿತಿ, ಶ್ರೀ ಮಧ್ವ ಭಜನ ಮಂಡಳಿ, ಪೂರ್ಣಪ್ರಜ್ಞ ಭಜನ ಮಂಡಳಿ, ಪಶ್ಚಿಮ ವಿಭಾಗದ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ರಾಜಾಪುರ ಸಾರಸ್ವರ ಸಂಘ, ಸನ್ಮತಿ ಭಜನ ಮಂಡಳಿ, ಅಯ್ಯಪ್ಪ ಭಜನ ಮಂಡಳಿ ಆಜೆªಪಾಡಾ, ಮುಂಬ್ರಾ ಮಿತ್ರ ಭಜನ ಮಂಡಳಿ, ರಾಧಾಕೃಷ್ಣ ಭಜನ ಮಂಡಳಿ, ಚಿದಂಬರ ಭಜನ ಮಂಡಳಿ ಕೋಪರ್‌ ಹೀಗೆ ಒಟ್ಟು 15 ತಂಡಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next