Advertisement

ಚಾ.ನಗರಕ್ಕೆ ಕರ್ನಾಟಕ ರಾಜ್ಯೋತ್ಸವ ಈ ಬಾರಿ ವಿಶೇಷ

02:57 PM Nov 02, 2022 | Team Udayavani |

ಯಳಂದೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ಚಾಮರಾಜನಗರ ಜಿಲ್ಲೆಗೆ ವಿಶಿಷ್ಟವಾಗಿದ್ದು ಇಲ್ಲಿನ ಜೀರಿಗೆ ಗದ್ದೆ ಪೋಡಿನ ಮಾದಮ್ಮ, ಯಳಂದೂರಿನ ಚಿತ್ರನಟ ಅವಿನಾಶ್‌ಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದರೆ. ಇದೇ ಮಣ್ಣಿನ ಡಾ.ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಬಾರಿ ರಾಜ್ಯೋತ್ಸವದಲ್ಲಿ ಗಡಿನಾಡ ಜಿಲ್ಲೆಗೆ ಈ ಹಿಂದೆ ನೀಡಿರದ ಆದ್ಯತೆಯನ್ನು ಸರ್ಕಾರ ನೀಡಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವ ನಮಗೆ ವಿಶಿಷ್ಟವಾಗಿದೆ. ಯಳಂದೂರು ತಾಲೂಕು ಆಡಳಿತ ನಿರೀಕ್ಷೆಗೂ ಮೀರಿ ಹೆಚ್ಚು ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಿದೆ. ಇದರ ನಿಮಿತ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ಕನ್ನಡ ನಾಡುನುಡಿ ಪರಂಪರೆ ಸಾರುವ ಕವನ ವಾಚನ ಮಾಡಿ ಗಮನ ಸೆಳೆದಿದ್ದಾರೆ. ಇವರಲ್ಲಿ ಮೂವರಿಗೆ ನಾನು ಈ ಹಿಂದೆ ನುಡಿದಂತೆ ವೈಯುಕ್ತಿವಾಗಿ ಪ್ರಥಮ ಬಹುಮಾನ ವಾಗಿ 5000 ರೂ., ದ್ವಿತೀಯ ಬಹುಮಾನ 3000 ರೂ. ಹಾಗೂ ತೃತೀಯ ಬಹುಮಾನ 2000 ರೂ. ನಗದಾಗಿ ಕ್ರಮವಾಗಿ ಸುಂದರ್‌ ಕಲಿವೀರ್‌, ಗುಂಬಳ್ಳಿ ಬಸವರಾಜು ಹಾಗೂ ಬಳೇಪೇಟೆ ಪ್ರಕಾಶ್‌ರವರಿಗೆ ನೀಡಿದ್ದೇನೆ. ಇಂತಹ ಮತ್ತಷ್ಟು ಕಾರ್ಯ ಕ್ರಮಗಳನ್ನು ರೂಪಿಸಿ ನೆಲ, ಜನ ಭಾಷೆಯನ್ನು ಇನ್ನಷ್ಟು ವೃದ್ಧಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ ವಿನಯ್‌ ಮಾತನಾಡಿ, ಕನ್ನಡ ಭಾಷೆಯ ಇತಿಹಾಸಕ್ಕೆ 2000 ವರ್ಷಗಳ ಐತಿಹ್ಯವಿದೆ. ಗ್ರೀಕ್‌ ನಾಡಿನಲ್ಲಿ ಕನ್ನಡದ ಪದಗಳು ಬಳಕೆಯಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ಇಲ್ಲಿನ ಶಿಲ್ಪಕಲೆ, ಸಂಗೀತ ಇಡೀ ನಾಡಿಗೆ ಪ್ರಸಿದ್ಧಿ ಪಡೆದಿದೆ. ವಿದೇಶಗಳೊಂದಿಗೆ ಇಲ್ಲಿನ ರಾಜರು ವ್ಯವಹಾರ ಇರಿಸಿಕೊಂಡಿದ್ದರು. ಇದಕ್ಕೆ ಮಾಧ್ಯಮವಾಗಿ ಕನ್ನಡ ಭಾಷೆ ಬಳಕೆ ಮಾಡಿದ್ದರು ಎಂಬುದಕ್ಕೆ ಸಾಕ್ಷಿ ಇವೆ. ಯಳಂದೂರು ಪಟ್ಟಣದ ಬಳೇಮಂಪಟ, ಇಲ್ಲಿನ ಸಾಹಿತಿಕ ರತ್ನಗಳು ಭಾಷೆ, ನಾಡಿಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿವೆ ಎಂದು ಬಣ್ಣಿಸಿದರು. ಕನ್ನಡ ಭಾಷೆಯಲ್ಲಿ ಎಸ್‌ಎಸ್‌ ಎಲ್‌ಸಿಯಲ್ಲಿ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪಪಂ ಅಧ್ಯಕ್ಷೆ ಪ್ರಭಾವತಿ ಉಪಾಧ್ಯಕ್ಷೆ ಲಕ್ಷ್ಮೀ ಸದಸ್ಯರಾದ ಮಹೇಶ್‌, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತ, ಮಲ್ಲಯ್ಯ, ರವಿ, ಸುಶೀಲಾ, ಶಾಂತಮ್ಮ, ಮಹೇಶ್‌, ನಿಂಗರಾಜು, ರಘು ತಹಶೀಲ್ದಾರ್‌ ಆನಂದಪ್ಪ ನಾಯಕ್‌ ಇಒ ಉಮೇಶ್‌, ಬಿಇಒ ಕೆ. ಕಾಂತರಾಜು, ಡಾ. ಸುಂಗಂಧ ರಾಜನ್‌ ತಾಲುಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next