Advertisement

ಹೊಕ್ಕಾಡಿಗೋಳಿ ಸರಕಾರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

01:58 PM Nov 02, 2021 | Team Udayavani |

ಸಿದ್ಧಕಟ್ಟೆ : ರೋಟರಿ ಸಿದ್ಧಕಟ್ಟೆ ಫಲ್ಗುಣಿ ಸಹಕಾರದಲ್ಲಿ ಸರಕಾರಿ ಶಾಲೆ ಹೊಕ್ಕಾಡಿಗೋಳಿ, ಅರಂಬೋಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Advertisement

ಕನ್ನಡ ತಾಯಿಗೆ ಪುಷ್ಪನಮನ ಸಲ್ಲಿಸಿ ನಮಿಸಲಾಯಿತು. ವಿದ್ಯಾರ್ಥಿಗಳು ಗೀತ ಗಾಯನದ ಮೂಲಕ ಭುವನೇಶ್ವರಿ ದೇವಿಯನ್ನು ಗೌರವಿಸಿದರು. ಕನ್ನಡ ಪರವಾದ ಘೋಷಣೆಗಳನ್ನು ಕೂಗಲಾಯಿತು. ಹೊಕ್ಕಾಡಿಗೋಳಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಪ್ರಸಾದ್ ನಲ್ಲೂರ್ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

ಊರಿನ ವಿದ್ಯಾಭಿಮಾನಿಯಾದ ಐತ್ತೇರಿಯ ಹರಿಯಪ್ಪ ಶೆಟ್ಟಿ, ಜಯಂತಿ ಶೆಟ್ಟಿಯವರ ಮಗನಾದ ಮನೋಜ್ ಶೆಟ್ಟಿ ಅವರು ಧನ್ಯಶ್ರೀ ಶೆಟ್ಟಿಯವರೊಂದಿಗೆ ತಮ್ಮ ಮಗನಾದ ಜಶ್ವಿಕ್ ಶೆಟ್ಟಿಯವರ ಎರಡನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.

ಪಂಚಾಯತ್ ಸದಸ್ಯರಾದ ಪ್ರಭಾಕರ್ ಹೆಚ್, ಸುರೇಂದ್ರ, ಸತೀಶ್ ಮಠ, ರಮೇಶ್ ಮಂಜಿಲ, ಸುದರ್ಶನ್, ರೋಟರಿ ಸಿದ್ಧಕಟ್ಟೆ ಫಲ್ಗುಣಿಯ ಅಧ್ಯಕ್ಷರಾದ ಮೈಕಲ್ ಡಿಕೋಸ್ತ, ಬೆಳ್ತಂಗಡಿ ಠಾಣೆಯ ಮುಖ್ಯ ಆರಕ್ಷಕರಾದ ವಿಜಯ ಕುಮಾರ್ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್, ಕಾರ್ಯದರ್ಶಿ ಪದ್ಮನಾಭ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸದಾಶಿವ ಪೂಜಾರಿ, ಉಪಾಧ್ಯಕ್ಷರಾದ ಮಮತಾ, ಪೋಷಕರು, ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ರೋಟರಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಗೌತಮಿ ಹಾಗೂ ಧನ್ಯಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಗುರುಗಳಾದ ಸುಮಿತ್ರ ಎಸ್ ಸ್ವಾಗತಿಸಿ, ಶಿಕ್ಷಕರಾದ ಸುಚಿತ್ರ ವಂದನಾರ್ಪಣೆಗೈದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next