Advertisement

karnataka polls 2023; ಅಧಿಕಾರ ಸನ್ಯಾಸ ಕುಂದಾಪುರ ಕ್ಷೇತ್ರ ವಿಶೇಷ

03:55 PM Apr 08, 2023 | Team Udayavani |

ಕುಂದಾಪುರ: ರಾಜಕೀಯ ಸ್ಥಾನಮಾನ ನನಗೂ ಇರಲಿ, ಮನೆ ಮಂದಿಗೂ ಇರಲಿ ಎಂದು ಬಯ ಸುವವರ ಮಧ್ಯೆ ಕುಂದಾಪುರ ಕ್ಷೇತ್ರ ವಿಶಿಷ್ಟವಾಗಿ ಮುನ್ನೆಲೆಗೆ ಬಂದಿದೆ.

Advertisement

ಇಲ್ಲಿನ ಇಬ್ಬರು ಮುಖಂಡರು ರಾಜಕಾರಣಿಗಳು ಸಕ್ರಿಯವಾಗಿರುವಾಗಲೇ ಅಧಿಕಾರ ಸನ್ಯಾಸ ಸ್ವೀಕ ರಿಸಿರುವುದು ಕುಂದಾಪುರವನ್ನು ಚರ್ಚೆಗೆ ತರಿಸಿದೆ.

ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ
ಯಾಗಿ 36 ವರ್ಷಗಳ ಶಾಸಕತ್ವ ಅವಧಿ ಹೊಂದಿದ್ದ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಾಸಕತ್ವ ಕಳೆದ
ವರ್ಷ ಜ. 5ರಂದು ಕೊನೆಯಾಯಿತು. ಈಗ ಚುನಾವಣ ರಾಜಕೀಯದಿಂದ ಹೊರಗಿದ್ದು, ಎಐಸಿಸಿ ಸದಸ್ಯರಾಗಿದ್ದುಕೊಂಡು ಪಕ್ಷ ಹಾಗೂ ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಕೆ. ಪ್ರತಾಪ ಚಂದ್ರ
ಶೆಟ್ಟಿ
ಜನತಾಪಕ್ಷ ಸಹಿತ ಇತರ ಪಕ್ಷಗಳು ಪ್ರಬಲವಾಗಿ ದ್ದಾಗಲೂ 1983, 1985, 1989, 1994ರಲ್ಲಿ ವಿಧಾನ ಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾದ ವರು ಪ್ರತಾಪ ಚಂದ್ರ ಶೆಟ್ಟಿ. 2004, 2010, 2016 ರಿಂದ ವಿಧಾನ ಪರಿಷತ್‌ ಸದಸ್ಯರಾದರು. 2018 ರಲ್ಲಿ ವಿಧಾನಪರಿಷತ್‌ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಹುದ್ದೆಯ ಹೊಣೆ ನಿರ್ವಹಿಸಿದ ಉಡುಪಿ ಜಿಲ್ಲೆಯ ಮೊದಲ ಸಭಾಪತಿ. ಅವಿಭಜಿತ ದ.ಕ. ಜಿಲ್ಲೆಯ ಎರಡನೇ ಸಭಾಪತಿ. ಕೆಪಿಸಿಸಿ ಸದಸ್ಯ ಸ್ಥಾನಕ್ಕೆ 2023ರ ಜ. 16ರಂದು ರಾಜೀನಾಮೆ ನೀಡಿದ್ದರು. ಪಕ್ಷ ಸಂಘಟನೆಗೆ ಸಹಾಯವಾಗಬೇಕು; ಸೂಕ್ತ, ಆಸಕ್ತರಿಗೆ ಅವಕಾಶ ಸಿಗಲೆಂದು ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ವಿನಾ ಪಕ್ಷಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹಾಲಾಡಿ ಶ್ರೀನಿವಾಸ
ಶೆಟ್ಟಿ
1999ರಿಂದ ಸತತವಾಗಿ ಗೆದ್ದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. ನಾಲ್ಕು ಬಾರಿ ಬಿಜೆಪಿಯಿಂದ, ಒಂದು ಬಾರಿ ಪಕ್ಷೇತರರಾಗಿ ಗೆದ್ದದ್ದಲ್ಲದೇ, ಗೆಲುವಿನ ಅಂತರ ಏರಿಸಿಕೊಂಡವರು. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಾಗ ಸ್ವಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಪಕ್ಷ ಮತ್ತೆ ಬರಮಾಡಿಕೊಂಡಿತು. 3 ಸಾವಿರದಷ್ಟಿದ್ದ ಬಿಜೆಪಿ ಮತಗಳು 1.03 ಲಕ್ಷಕ್ಕೇರಿತು. ಒಟ್ಟು ಮತ ದಾನದಲ್ಲಿ ಬಿಜೆಪಿಗೆ ಶೇ. 66, ಕಾಂಗ್ರೆಸ್‌ಗೆ ಶೇ. 30, ಜೆಡಿಎಸ್‌ಗೆ 1.7 ಶೇ., ಜೆಡಿಯುಗೆ 1.7 ಶೇ. ಮತಗಳಿಕೆಯಾಗಿತ್ತು. ಗೆಲುವಿನ ಅಂತರ 56,405 ಮತಗಳು. ಶೇ.36ರಷ್ಟು ಮತಗಳ ಪ್ರಮಾಣದಲ್ಲಿ ಗೆಲುವು ದೊರೆತಿತ್ತು.ಈಗ ಶ್ರೀನಿವಾಸ ಶೆಟ್ಟಿಯವರೂ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷಕ್ಕೆ ಪತ್ರ ಬರೆದು ತಿಳಿಸಿದ್ದಾರೆ.

Advertisement

ಇಬ್ಬರೂ
ಸಚಿವರಾಗಲಿಲ್ಲ
1983ರಲ್ಲಿ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಪ್ರತಾಪಚಂದ್ರ ಶೆಟ್ಟಿ ಜತೆಯಾಗಿ ವಿಧಾನಸಭೆ ಪ್ರವೇಶಿಸಿದವರು. ಅವರಿಬ್ಬರೂ ಮುಖ್ಯಮಂತ್ರಿಗಳಾಗಿದ್ದರೂ ಶೆಟ್ಟರಿಗೆ ಪಕ್ಷವು ಸಚಿವ ಸ್ಥಾನವನ್ನೂ ನೀಡ ಲಿಲ್ಲ. ಹಾಗೆಂದು ಇವರ ಹಿಂಬಾಲಕರ ಹೊಯ್ದಾಟ, ಹಿಂಬಾಗಿಲ ರಾಜಕಾರಣ ಮಾಡಲಿಲ್ಲ. ತನಗಿಂತ ಕಿರಿಯ ವಯಸ್ಸಿ ನವರು, ಸ್ವಂತ ಜಿಲ್ಲೆಯವರು ಸಚಿವರಾದಾ ಗಲೂ ಅಪಸ್ವರ ತೆಗೆದಿಲ್ಲ. ಮತ್ತೂಮ್ಮೆ ವಿಧಾನ ಪರಿಷತ್‌ಗೆ ಯಾವುದೇ ಜಂಜಡ ಇಲ್ಲದೇ ಆಯ್ಕೆಯಾಗುವ ಅವಕಾಶ ಇರುವಾಗಲೇ ಸ್ಪರ್ಧೆ ಕಣದಿಂದ ಹಿಂದೆ ಸರಿದರು. ಕೆಪಿಸಿಸಿ ಸದಸ್ಯತ್ವ ಊರ್ಜಿತದಲ್ಲಿ ಇರುವಾಗಲೇ ರಾಜೀನಾಮೆ ನೀಡಿದರು.

ಹಾಗೆಯೇ ಹಾಲಾಡಿ ಅವರಿಗೂ ಪಕ್ಷವು ಸಚಿವ ಸ್ಥಾನ ನೀಡಲಿಲ್ಲ. ಅದಕ್ಕಾಗಿ ಇವರು ದುಂಬಾಲು ಬೀಳಲಿಲ್ಲ. ತನ್ನ ಮನೆಗೆ ಸ್ವತಃ ಯಡಿಯೂರಪ್ಪ ಬಂದಾಗಲೂ ಸಚಿವ ಪದವಿಗೆ ಬೇಡಿಕೆ ಇಟ್ಟಿಲ್ಲ. ಪಕ್ಷೇತರರಾಗಿ ವಿಜಯಿಯಾಗಿದ್ದ ಅವರನ್ನು ಮರಳಿ ಪಕ್ಷಕ್ಕೆ ಕರೆತಂದರೂ ಯಾವುದೇ ಪದವಿಗೆ ಪರಿಗಣಿಸಲಿಲ್ಲ ಎಂಬ ಟೀಕೆ ಇದ್ದೇ ಇದೆ. ಮಂತ್ರಿಯಾಗುವವರ ಪಟ್ಟಿಯಲ್ಲಿ ಹೆಸರಿದೆ, ಬನ್ನಿ ಎಂಬ ಆಹ್ವಾನದ ಮೇರೆಗೆ ಬೆಂಗಳೂರಿಗೆ ಹೋಗಿ ಕೊನೆಕ್ಷಣದಲ್ಲಿ ಕೈ ತಪ್ಪಿದಾಗ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷ ಬಿಟ್ಟರೇ ಹೊರತು ಬೇರೇನೂ ಅಲ್ಲ. ಆ ಬಳಿಕ ಮರಳಿ ಪಕ್ಷಕ್ಕೆ ಸೇರಿದ ಮೇಲೂ ಪಕ್ಷಕ್ಕೆ ದುಡಿದವರು.

-  ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next