Advertisement
ಶಿಕ್ಷಣ ಕಾಶಿ, ಜೈನ ಕಾಶಿ ಎಂದೆಲ್ಲ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ 1999, 2004, 2008, 2013-ನಾಲ್ಕು ಬಾರಿ ಕೆ.ಅಭಯಚಂದ್ರ ಅವರು ಗೆದ್ದು ಬೀಗಿದ್ದರು. ಆದರೆ 2018ರಲ್ಲಿ ಬಿಜೆಪಿ ಅಲೆಯನ್ನೇರಿದ ಉಮಾನಾಥ ಕೋಟ್ಯಾನ್ ಬಿಜೆಪಿ ಅಧಿಪತ್ಯ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ 1994ರಲ್ಲಿ ಜತನಾದಳದಿಂದ ಕೆ. ಅಮರನಾಥ ಶೆಟ್ಟಿ ಗೆದ್ದಿದ್ದರು. 1983 ಮತ್ತು 85ರಲ್ಲಿ ಇವರೇ ಜನತಾಪಕ್ಷದ ಪರವಾಗಿ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ್ದರು.
Related Articles
Advertisement
ಮೋದಿ ಭೇಟಿ ಸಂಚಲನ-ಪ್ರಿಯಾಂಕಾ ನಿರೀಕ್ಷೆಇಬ್ಬರೂ ಅಭ್ಯರ್ಥಿಗಳು ಹೆಚ್ಚು ನೆಚ್ಚಿಕೊಂಡಿರುವುದು ಮನೆ ಮನೆ ಭೇಟಿಯನ್ನೇ. ಪ್ರಧಾನಿ ನರೇಂದ್ರ ಮೋದಿ ಅವರು ಮೂಲ್ಕಿಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡದ್ದು ಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೂ ಸದ್ಯವೇ ಮೂಲ್ಕಿಯಲ್ಲಿ ಪ್ರಚಾರ ನಡೆಸಲಿದ್ದು, ಇದು ಕೊನೇ ಗಳಿಗೆಯಲ್ಲಿ ಕಾಂಗ್ರೆಸ್ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಬಳ್ಕುಂಜೆಯಲ್ಲಿ ಕೈಗಾರಿಕೆ ನಿರ್ಮಾಣ ಉದ್ದೇಶಕ್ಕೆ ಭೂ ಸ್ವಾಧೀನ ವಿಷಯ ಚುನಾವಣೆಯ ವಿಷಯವಾಗಿಸಿದೆ ಕಾಂಗ್ರೆಸ್. ಕಾಂಗ್ರೆಸ್ ಪ್ರಣಾಳಿಕೆಯ “ಬಜರಂಗದಳ ನಿಷೇಧ’ ವಿಷಯ ಕೊನೇ ಹೊತ್ತಿನಲ್ಲಿ ಬಿಜೆಪಿಗೆ ಆನಾಯಾಸವಾಗಿ ಸಿಕ್ಕಿರುವ ಅಸ್ತ್ರ. ಹಾಗಾಗಿ ಅಭಿವೃದ್ಧಿಯ ಜತೆ ಭಾವನಾತ್ಮಕ ಸಂಗತಿಗಳೂ ಫಲಿತಾಂಶ ನಿರ್ಣಯದಲ್ಲಿ ಪಾಲು ಪಡೆಯುವುದು ಖಚಿತ.
ಜೆಡಿಎಸ್‌ನ ಡಾ| ಅಮರಶ್ರೀ ಅಮರನಾಥ ಶೆಟ್ಟಿ ಅವರು ತಮ್ಮ ತಂದೆ ಮಾಜಿ ಶಾಸಕ ದಿ| ಕೆ. ಅಮರನಾಥ ಶೆಟ್ಟಿ ಅವರ ವರ್ಚಸ್ಸಿನಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಉಳಿದವರು ಫಲಿತಾಂಶ ನಿರ್ಣಯದಲ್ಲಿ ಪಾತ್ರ ವಹಿಸುವ ಸಾಧ್ಯತೆ ತೀರಾ ಕಡಿಮೆ. ಕಣದಲ್ಲಿರುವ ಅಭ್ಯರ್ಥಿಗಳು 8
- ಉಮಾನಾಥ ಕೋಟ್ಯಾನ್ (ಬಿಜೆಪಿ)
- ಮಿಥುನ್ ರೈ (ಕಾಂಗ್ರೆಸ್)
- ಡಾ| ಅಮರಶ್ರೀ ಅಮರನಾಥ ಶೆಟ್ಟಿ (ಜೆಡಿಎಸ್)
- ವಿಜಯನಾಥ ವಿಠ್ಠಲ ಶೆಟ್ಟಿ (ಎಎಪಿ)
- ಆಲೊ#àನ್ಸ್ ಫ್ರಾಂಕೋ (ಎಸ್‌ಡಿಪಿಐ)
- ದಯಾನಂದ (ಕರ್ನಾಟಕ ರಾಷ್ಟ್ರ ಸಮಿತಿ )
- ಈಶ್ವರ ಎಸ್. ಮೂಡುಶೆಡ್ಡೆ (ಪಕ್ಷೇತರ)
- ದುರ್ಗಾ ಪ್ರಸಾದ್ (ಪಕ್ಷೇತರ) ಲೆಕ್ಕಾಚಾರ ಏನು?
ಈ ಬಾರಿ ಎರಡೂ ಪಕ್ಷಗಳಿಗೂ ಜಿದ್ದಾ ಜಿದ್ದಿಯ ಪೈಪೋಟಿ ಇದೆ. ಬಿಜೆಪಿ ಮರಳಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ದ್ದರೂ ಹಿಂದಿನ ಬಾರಿಗಿಂತ ಕೊಂಚ ಹೆಚ್ಚಿನ ಶ್ರಮ ಹಾಕಬೇಕಾದ ಸ್ಥಿತಿ ಇದೆ. ಕಾಂಗ್ರೆಸ್ ಗೆ 2013 ರ ಗೆಲುವೇ ಸ್ಫೂರ್ತಿ. ಭವಿಷ್ಯದ ಕನಸುಗಳನ್ನು ಮನವರಿಕೆ ಮಾಡಿ ಮತಗಳನ್ನಾಗಿಸುವುದೇ ದೊಡ್ಡ ಸವಾಲು. – ಭರತ್ ಶೆಟ್ಟಿಗಾರ್