Advertisement
ಎರಡು ಪಕ್ಷದಿಂದಲೂ ಬಿರುಸಿನ ಪ್ರಚಾರ ನಡೆಯುತ್ತಿದೆ. ದೊಡ್ಡ ಮಟ್ಟಿಗೆ ಮತ ಪಡೆಯುವ ಮೂರನೇ ಅಭ್ಯರ್ಥಿ ಇಲ್ಲದೇ ಇರುವುದರಿಂದ ಕಾಂಗ್ರೆಸ್-ಬಿಜೆಪಿ ತಮ್ಮ ವೋಟ್‌ಬ್ಯಾಂಕ್‌ಗಳನ್ನೇ ಗುರಿಯಾಗಿಸಿಕೊಂಡಿವೆ.
Related Articles
Advertisement
ಜಾತಿ ಲೆಕ್ಕಾಚಾರವನ್ನು ಹಾಕಿದರೆ ಮುಸ್ಲಿಂ ಮತಗಳೇ ಕ್ಷೇತ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದು, ಅದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಬಹುದು. ಆದರೆ ಮುಸ್ಲಿಂ ಮತಗಳಿಂದಲೇ ಗೆಲ್ಲುವುದು ಕಷ್ಟ. ಎಸ್‌ಡಿಪಿಐ ಕೂಡ ಕಣದಲ್ಲಿರುವುದರಿಂದ ಅದು ಎಷ್ಟು ಮತಗಳನ್ನು ಪಡೆಯಬಹುದು ಎಂಬುದೂ ಮುಖ್ಯ. ಕಾಂಗ್ರೆಸ್, ಬಿಜೆಪಿಯಲ್ಲಿರುವ ಇತರೆ ಸಮುದಾಯಗಳ ಮತಗಳು ಯಾರ ಕಡೆಗೆ ಹೆಚ್ಚು ಹರಿಯುತ್ತದೋ ಎಂಬುದು ಫಲಿತಾಂಶವನ್ನು ನಿರ್ಧರಿಸಬಹುದು. ಹಾಗಾಗಿ ಇದರತ್ತಲೇ ಎರಡೂ ಪಕ್ಷದ ಅಭ್ಯರ್ಥಿಗಳು ಲೆಕ್ಕಾಚಾರ ಹರಿಸಿದ್ದಾರೆ. ಜತೆಗೆ ರಾಜ್ಯ, ರಾಷ್ಟ್ರಮಟ್ಟದ ನಾಯಕರ ಆಗಮನದಿಂದ ಪಕ್ಷಗಳಿಗೆ ಪ್ಲಸ್ ಆಗಲಿದ್ದು, ಬಿಜೆಪಿಯು ಯುಪಿ ಸಿಎಂ ಯೋಗಿ ಬರುವುದನ್ನು ಖಚಿತಪಡಿಸಿದೆ. ಹಿಂದಿನ ಬಾರಿ ತಮ್ಮ ವಿರುದ್ಧ ಕೆಲವರು ಕೈಗೊಂಡ ಅಪಪ್ರಚಾರ ಸೋಲಿಗೆ ಕಾರಣವಾಯಿತು ಎಂದು ರಮಾನಾಥ ರೈಗಳು ಹೇಳುತ್ತಿದ್ದಾರೆ. ಇದೂ ಅನುಕಂಪದ ಮತಗಳನ್ನಾಗಿ ಪರಿವರ್ತಿಸುತ್ತದೋ ಕಾದು ನೋಡಬೇಕು. ಇದರೊಂದಿಗೆ ಕೊನೆಯ ಅವಕಾಶ ಕೊಡಿ ಎಂಬುದೂ ಕೈ ಹಿಡಿದರೆ ರಮಾನಾಥ ರೈ ಆವರಿಗೆ ಅನುಕೂಲಕರ ವಾತಾವರಣ ನಿರ್ಮಿಸಬಹುದು.
ಕಣದಲ್ಲಿರುವ ಅಭ್ಯರ್ಥಿಗಳು 5- ರಾಜೇಶ್ ನಾಕ್çಉಳಿಪಾಡಿಗುತ್ತು (ಬಿಜೆಪಿ)
- ಬಿ.ರಮಾನಾಥ ರೈ (ಕಾಂಗ್ರೆಸ್)
- ಪ್ರಕಾಶ್ ರಫಾಯಲ್ ಗೋಮ್ಸ್ (ಜೆಡಿಎಸ್)
- ಪುರುಷೋತ್ತಮ (ಎಎಪಿ)
- ಎಂ.ಇಲ್ಯಾಸ್ (ಎಸ್‌ಡಿಪಿಐ) ಲೆಕ್ಕಾಚಾರ ಏನು?
ಇಬ್ಬರೂ ಹಳೇ ಹುಲಿಗಳೇ. ಆದರೆ ಒಬ್ಬರು ನಿವೃತ್ತಿಯ ಅಂಚಿ ನಲ್ಲಿರುವವರು. ಹಾಗಾಗಿ ಗೌರವ ವಿದಾಯದ ಮಾತು ಭಾವನಾತ್ಮಕ ರೂಪ ಪಡೆದರೆ ಗೆಲುವಿನ ಅಂಶದಲ್ಲಿ ಪ್ರಮುಖವಾದುದು. ಇಲ್ಲವಾದರೆ ಅಭಿವೃದ್ಧಿಯದ್ದೇ ಮೇಲುಗೈ. – ಕಿರಣ್ ಸರಪಾಡಿ