Advertisement
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಈ ಬಗ್ಗೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಲಾಗಿತ್ತಾದರೂ ಈ ಭರವಸೆಯನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಆದರೆ, ರಾಜ್ಯದಲ್ಲಿ 12.16 ಲಕ್ಷ ಉದ್ಯೋಗ ಸೃಷ್ಟಿಸಿದ್ದು, ಇದರಲ್ಲಿ ಅತಿ ಸಣ್ಣ,
Related Articles
Advertisement
ಇದರಿಂದಾಗಿ ದೇಶದಲ್ಲಿ ಕರ್ನಾಟಕ ಶೇ.42.9(1.49 ಲಕ್ಷ ಕೋಟಿ) ಬಂಡವಾಳ ಆಕರ್ಷಿಸುವ ಮೂಲಕ 1ನೇ ಸ್ಥಾನಕ್ಕೇರಿದ್ದು, ಎಫ್ಡಿಐ ಹೂಡಿಕೆಯಲ್ಲೂ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 3.46 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ 1923 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೌಶಲ್ಯಾಭಿವೃದ್ಧಿ ತರಬೇತಿ: ರಾಜ್ಯದಲ್ಲಿ ಅಂದಾಜು 5 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಕೈಗಾರಿಕೆಗಳ ಬೆಳವಣಿಗೆ ಹಾಗೂ ಉತ್ತೇಜನ ನೀಡುವ ಸಲುವಾಗಿ ಇನ್ವೆಸ್ಟ್ ಕರ್ನಾಟಕ ಫೋರಂ ಆರಂಭಿಸಲಾಗಿದೆ. ಬೆಂಗಳೂರು ನಗರವನ್ನು ವಿದ್ಯುತ್ ಚಾಲಿತ ವಾಹನಗಳ ಕೇಂದ್ರವನ್ನಾಗಿಸಲು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ ಅಂಡ್ ಎನರ್ಜಿ ಸ್ಟೋರೇಜ್ ನೀತಿ ಜಾರಿಗೊಳಿಸಲು ಮುಂದಾಗಿದೆ ಎಂದರು.
ಮಹಿಳ್ಳೋದ್ಯಮ ಪಾರ್ಕ್: ರಾಜ್ಯ ಸರ್ಕಾರ ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ 6 ಮಹಿಳ್ಳೋದ್ಯಮ ಪಾರ್ಕ್ ಸ್ಥಾಪನೆ ಮಾಡಲು ತೀರ್ಮಾನಿಸಿದೆ. ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ 48.03 ಎಕರೆ ಪ್ರದೇಶ, ಕನಕಪುರದ ಹಾರೋಹಳ್ಳಿ ಕೈಗಾರಿಕಾ ಪ್ರದೇಶ 100 ಎಕರೆ,
ಬಳ್ಳಾರಿಯ ಕುಡಿತಿನಿ ಕೈಗಾರಿಕಾ ಪ್ರದೇಶ 60 ಎಕರೆ, ಧಾರವಾಡದ ಗಮ್ಮನಗಟ್ಟಿ ಕೈಗಾರಿಕಾ ಪ್ರದೇಶ 30 ಎಕರೆ, ಕಲಬುರ್ಗಿಯ ನಂದೂರ್ ಕೈಗಾರಿಕಾ ಪ್ರದೇಶ 50.70 ಎಕರೆ ಹಾಗೂ ಮಂಗಳೂರಿನ ಕೆನರಾ ಕೈಗಾರಿಕಾ ಪ್ರದೇಶದ 40 ಎಕರೆ ಜಾಗದಲ್ಲಿ ಮಹಿಳ್ಳೋದ್ಯಮ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಭೂಮಿಗಾಗಿ ಬೇಡಿಕೆ ಇದೆ: ಮೈಸೂರು ನಗರದಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಉದ್ದೇಶದಿಂದ ಪ್ರಮುಖ ಕೈಗಾರಿಕೆಗಳು ಭೂಮಿ ನೀಡುವಂತೆ ಬೇಡಿಕೆ ಸಲ್ಲಿಸಿವೆ. ಹೀಗಾಗಿ ಕೋಚನಹಳ್ಳಿಯಲ್ಲಿ 189 ಎಕರೆ, ಅಡಕನಹಳ್ಳಿಯಲ್ಲಿ 63 ಎಕರೆ, ತಾಂಡ್ಯದಲ್ಲಿ 70 ಹಾಗೂ ಕಲ್ಲಹಳ್ಳಿಯಲ್ಲಿ 30 ಎಕರೆ ಜಾಗವನ್ನು ಕೈಗಾರಿಕಾ ಪ್ರದೇಶವನ್ನಾಗಿಸಲು ಕ್ರಮವಹಿಸಲಾಗುವುದು ಎಂದು ಸಚಿವ ದೇಶಪಾಂಡೆ ತಿಳಿಸಿದರು.
ವಿಮಾನಯಾನ ಸೇವೆ: ಮೈಸೂರು ಕೈಗಾರಿಕೆ ಮಾತ್ರವಲ್ಲದೆ ಉತ್ತಮ ಪ್ರವಾಸಿ ಕೇಂದ್ರವಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಮೈಸೂರು ನಗರಕ್ಕೆ ದೇಶದ ವಿವಿಧ ಭಾಗಗಳಿಂದ ಸಂಪರ್ಕ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಮೂಲಕ ವಿಮಾನಯಾನ ಸೇವೆ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪ್ರಮುಖವಾಗಿ ಮೈಸೂರು-ಗೋವಾ, ಗೋವಾ-ಬೆಂಗಳೂರು-ಮೈಸೂರು, ಗೋವಾ-ಹಂಪಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಿಮಾನ ಸೇವೆ ಒದಗಿಸುವಂತೆ ಕೋರಲಾಗಿದ್ದು, ಈ ನಡುವೆ ಬೀದರ್ ವಿಮಾನ ನಿಲ್ದಾಣ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದರು.
ಬೆಂಗಳೂರು 2ನೇ ರಾಜಧಾನಿ: ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿ ಎಂದು ಘೋಷಿಸುವಂತೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯಲಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇತ್ತೀಚೆಗೆ ವಿಶ್ವದ ಡಿಜಿಟಲ್ ಸಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ಜಾಗತಿಕವಾಗಿ ಗುರುತಿಸಿಕೊಂಡಿರುವ ಬೆಂಗಳೂರು ನಗರ, ರಾಷ್ಟ್ರ ರಾಜಧಾನಿ ದೆಹಲಿಗಿಂತಲೂ ಉತ್ತಮ ಮೂಲ ಸೌಕರ್ಯಗಳನ್ನು ಹೊಂದಿದೆ. ಹೀಗಾಗಿ ಬೆಂಗಳೂರು ನಗರವನ್ನು ದೇಶದ 2ನೇ ರಾಜಧಾನಿಯಾಗಿ ಘೋಷಿಸುವಂತೆ ಪ್ರಧಾನಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆಯಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಕೋಮು ಸಾಮರಸ್ಯ ಕದಡಬಾರದು: ಸಮಾಜದಲ್ಲಿ ಯಾರೂ ಕೂಡ ಕೋಮು ಸಾಮರಸ್ಯ ಕದಡುವ ಕೆಲಸ ಮಾಡಬಾರದು. ಉತ್ತರ ಕನ್ನಡದಲ್ಲಿ ಇತ್ತೀಚೆಗೆ ಸಂಭವಿಸಿದ ಪರೇಶ್ ಮೆಸ್ತಾ ಸಾವಿನ ಮರಣೋತ್ತರ ವರದಿಯಲ್ಲಿ ಸಾವಿಗೆ ನಿಖರ ಕಾರಣ ನೀಡಲಾಗಿದ್ದರೂ, ಈ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿ ಗಲಭೆ ಸೃಷ್ಟಿಸಲಾಯಿತು. ಕೋಮುಗಲಭೆ ಸೃಷ್ಟಿಸುವುದು ಪಾಪದ ಕೆಲಸವಾಗಿದ್ದು, ದೇಶದ ಸಂವಿಧಾನಕ್ಕೂ ಮಾರಕವಾಗಲಿದೆ.
ರಾಜ್ಯ ಸರ್ಕಾರವನ್ನು ಎದುರಿಸಲಾಗದ, ಕೋಮುವಾದಿ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮುಂದಾಗಿದ್ದು, ಕೋಮುವಾದದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಕಡಿಣ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಕರಾವಳಿ ಭಾಗದಲ್ಲಿ ಪದೇ ಪದೆ ಹಿಂಸಾಚಾರ ಮರುಕಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.