Advertisement

Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್‌ “ಇಂಜೆಕ್ಷನ್‌’

10:54 PM Jul 06, 2024 | Team Udayavani |

ಬೆಂಗಳೂರು: ಆತ್ಮಾವಲೋಕನ ಸಭೆಯಲ್ಲಿ ಬಿಜೆಪಿಯ ನೂತನ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್‌ ದಾಸ್‌ ಅಗರ್ವಾಲ್‌ ಬಿಜೆಪಿ ನಾಯಕರಿಗೆ ಮೊದಲ ದಿನವೇ ಇಂಜೆಕ್ಷನ್‌ ನೀಡಿದ್ದು ಗೊಂದಲ ಪರಿಹರಿಸಿಕೊಳ್ಳದಿದ್ದರೆ ದೊಡ್ಡ ನಾಯಕರಿಗೂ “ಶಸ್ತ್ರಚಿಕಿತ್ಸೆ’ ಮಾಡುವ ಎಚ್ಚರಿಕೆ ನೀಡಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರಿಗಾಗಿ ದುಡಿಯಿರಿ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

Advertisement

ಬೀದರ್‌, ಚಿಕ್ಕೋಡಿ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಸಭೆ ಶನಿವಾರ ನಡೆದಿದ್ದು ಬೆಳಗಾವಿ ಭಾಗದ ನಾಯಕರು ನಿರೀಕ್ಷೆ ಮಾಡದ ರೀತಿಯಲ್ಲಿ ಡಾ.ಅಗರ್ವಾಲ್‌ ಚಾಟಿ ಏಟು ನೀಡಿದ್ದಾರೆ. ಸ್ವಪಕ್ಷೀಯರಿಂದಲೇ ಸೋಲಾಯಿತು ಎಂದು ಜೊಲ್ಲೆ ಕುಟುಂಬ ವರ್ಗ ನೀಡಿದ ದೂರನ್ನು ಬಿಜೆಪಿ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದರ ಪರಿಣಾಮ ಈ ಸಭೆಯಲ್ಲಿ ಕಂಡು ಬಂದಿದೆ.

ಕುತೂಹಲಕಾರಿ ಸಂಗತಿ ಎಂದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಭೆಯನ್ನು ಹಠಾತ್‌ ಮುಂದೂಡಲಾಗಿದೆ. ಹೀಗಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಂ ಸ್ವಲ್ಪದರಲ್ಲೇ ಬಚಾವ್‌ ಆಗಿದೆ. ದಾವಣಗೆರೆ ಸಭೆ ಮುಂದೂಡಿಕೆಯಾಗಿರುವುದರ ಜತೆಗೆ ಹೊಸ ದಿನಾಂಕವೂ ನಿಗದಿಯಾಗದಿರುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

ಬಣ ರಾಜಕೀಯಕ್ಕೆ ತರಾಟೆ
ಪ್ರತಿಯೊಂದು ಲೋಕಸಭಾ ಕ್ಷೇತ್ರದ ವಿಚಾರದಲ್ಲೂ ರಾಧಾಮೋಹನ್‌ ದಾಸ್‌ ತಮ್ಮದೇ ಆದ ಮೂಲದಿಂದ ಸಂಗ್ರಹಿಸಿದ ವರದಿ ಆಧರಿಸಿ ಆಯಾ ಕ್ಷೇತ್ರಗಳ ಎರಡೂ ಬಣಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುರಪುರ ಕ್ಷೇತ್ರದ ಮಾಜಿ ಶಾಸಕ ರಾಜುಗೌಡ ಅವರ ಮೇಲೆ ಅಗರ್ವಾಲ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆತ್ಮಾವಲೋಕನ ಸಭೆಯ ಜತೆಗೆ ಕಾರ್ಯಕಾರಿಣಿಗೂ ಅವರು ಗೈರಾಗಿದ್ದಾರೆ. ಇಷ್ಟೊಂದು ನಿರ್ಲಕ್ಷ್ಯ ತೋರುವವರು ಜವಾಬ್ದಾರಿ ಸ್ಥಾನದಲ್ಲಿರಬೇಕೇ? ಅವರನ್ನಾéಕೆ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಬಾರದು? ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪ್ರಶ್ನಿಸಿದರು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next