Advertisement

ಕರ್ನಾಟಕ ಸಂಗೀತ ವಿಶ್ವಕ್ಕೆ ಪರಿಚಯಿಸಿದ್ರು ನಾದಬ್ರಹ್ಮಾನಂದ ಶ್ರೀ

05:48 PM May 23, 2018 | Team Udayavani |

ನರಗುಂದ: ಭಾರತದ ಸಂಗೀತವನ್ನು 170 ದೇಶಗಳಲ್ಲಿ ಪರಿಚಯಿಸಿದ ಇಲ್ಲಿನ ಪೂಜ್ಯ ನಾದಬ್ರಹ್ಮಾನಂದರ ನಾದಯೋಗ ಅಪ್ರತಿಮವಾದದ್ದು. ಸಂಗೀತದ ಮೇರು ಪರ್ವತವಾದ ಅವರು ಮೊಟ್ಟ ಮೊದಲ ಬಾರಿಗೆ 32 ಸ್ವರದ ಪರಿಕರವನ್ನು ಸಂಶೋಧನೆ ಮಾಡಿದರು. ಕರ್ನಾಟಕ ಸಂಗೀತ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಅವರ ಸೇವೆ ಸ್ಮರಣೀಯ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಹಾಗೂ ಸಿಂದಗಿ ಶಾಂತವೀರೇಶ್ವರ ಯೋಗ ವ್ಯಾಯಾಮ ಹಾಗೂ ಕ್ರೀಡಾ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ನಾದಬ್ರಹ್ಮಾನಂದ ಸ್ವಾಮಿಗಳ 122ನೇ ಜಯಂತ್ಯುತ್ಸವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾದಬ್ರಹ್ಮಾನಂದರಿಗೆ ಅಮೆರಿಕಾದ ಶ್ವೇತ ಭವನದಲ್ಲಿ ಮುಕ್ತವಾಗಿ ಅವಕಾಶವಿತ್ತು. ಇದ್ದು ಭಾರತದ ಸಾದು ಪರಂಪರೆಯ ಶಕ್ತಿಯನ್ನು ಎತ್ತಿತೋರಿಸುತ್ತದೆ. ಮೈಸೂರು ಸಂಸ್ಥಾನದ ಸಂಗೀತ ವಿದ್ವಾಂಸರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನರಗುಂದ ಹೆಸರನ್ನು ಬೆಳಗಿಸಿದ ಕರ್ನಾಟಕದ ತಾನ್‌ಸೇನ್‌ ಎಂದೇ ಪ್ರಸಿದ್ಧರಾದ ನಾದಬ್ರಹ್ಮಾನಂದರು ನಮಗೆಲ್ಲ ಸ್ಮರಣೀಯರು ಎಂದರು.

ವಿದ್ಯಾರ್ಥಿಗಳೇ ಈ ದೇಶದ ಆಸ್ತಿ. ಹೀಗಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಉತ್ತಮ ಪ್ರಜೆಗಳಾಗಿ ಸಮೃದ್ಧ ಭಾರತ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಉಪನ್ಯಾಸಕ ಮಹಾಂತೇಶ ಹಿರೇಮಠ ಮಾತನಾಡಿ, ನಾದಯೋಗಕ್ಕೆ ಜೀವಾಳವಾಗಿ ಬಂದ ನಾದಬ್ರಹ್ಮಾನಂದರ ಬದುಕೇ ಅಮೂಲ್ಯ ಸಂದೇಶವನ್ನು ಕೊಡುತ್ತದೆ ಎಂದರು. ಈ ಸಂದರ್ಭದಲ್ಲಿ ಅಸ್ಬಾಕ್‌ ಮನಿಗಾರ, ಅನಿಲಕುಮಾರ ಜೈನರ, ಅಶ್ವಿ‌ನಿ ಕುಂಬಾರ, ಚಂದ್ರು ಚವಡಿ, ಹುಸೇನ್‌ಬಿ ಕುಲಗೌಡ್ರ, ಲಕ್ಷ್ಮೀ ಕಲ್ಲಾಪುರ, ಸೈರಾಬಾನು ಪಿಂಜಾರ, ಸೌಮ್ಯಲತಾ ಇನಾಮದಾರ, ಬಸವರಾಜ ಸಂಗಡಿ, ಕಲಾವತಿ ಮೇಟಿ, ತಮ್ಮನಗೌಡ ಕೆಂಪನಗೌಡ್ರ, ಸುಶ್ಮಿತಾ ಪಟ್ಟಣಶೆಟ್ಟಿ, ಲಕ್ಷ್ಮೀ ಚಂದನ್ನವರ, ಜ್ಯೋತಿ ನಾಸಿಪುಡಿ, ನಾಗರತ್ನಾ ಅಪ್ಪನ್ನವರ, ಕಾರ್ತಿಕ ರಾಯರ, ಜಗದೀಶ ಬಸರಕೋಡ, ಸೌಭಾಗ್ಯ ಕಲ್ಲಾಪುರಗೆ ಶ್ರೀಮಠದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

Advertisement

ಮುರಿಗೆಪ್ಪ ದಂಡೀನ ಕಾರ್ಯಕ್ರಮ ಉದ್ಘಾಟಿಸಿದರು. ಅಜ್ಜಪ್ಪಗೌಡ ಪಾಟೀಲ, ಚನ್ನಬಸಪ್ಪ ಕಂಠಿ, ಜಿ.ವಿ. ಹೊಂಗಲ, ವೀರಭದ್ರಪ್ಪ ಪುರಾಣಿ, ಪಂಚಣ್ಣ ಬೆಳವಟಗಿ ಇದ್ದರು. ಸಂಗೀತಗಾರ ಚಂದ್ರಕಾಂತ ಇನಾಮದಾರ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಪ್ರೊ| ಪರಶುರಾಮ ದಂಡೀನ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next