ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಜರಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳನ್ನು ಹಿರಿಯ ಗಾಯಕ ಗರ್ತಿಕೆರೆ ರಾಘವೇಂದ್ರ ಹಾಗೂ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮಾ ಅವರು ಪ್ರದಾನಿಸಿದರು.
2020-21ನೇ ಸಾಲಿನ ಗೌರವ ಪ್ರಶಸ್ತಿಗೆ ಹಿಂದೂಸ್ತಾನಿ ಸಂಗೀತ ಗಾಯಕ ಆರ್.ಪಿ. ಅಸುಂಡಿ, ಸುಗಮ ಸಂಗೀತ ಕಲಾವಿದೆ ದಿ| ರಮಾ ಅರವಿಂದ (ಅವರ ಮಗಳು ಪ್ರಶಸ್ತಿ ಸ್ವೀಕರಿಸಿದರು) ಭಾಜರಾದರು. ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಸಂಗೀತ ಕಲಾವಿದ ಮಧೂರ ಪಿ. ಬಾಲಸುಬ್ರಹ್ಮಣ್ಯಂ, ಸುಕನ್ಯಾ ರಾಂಗೋಪಾಲ್, ಸುರಳಿ ಗಣೇಶ್ ಮೂರ್ತಿ, ಮುರಳಿ, ಹಿಂದೂಸ್ತಾನಿ ಸಂಗೀತದಲ್ಲಿ ಶ್ರೀಪಾದ ಹೆಗಡೆ, ಪಂ.ರಾಜಪ್ರಭುದೋತ್ರೆ ಹಾಗೂ ಟಿ. ರಂಗ ಪೈ ತೋನ್ಸೆ ಪಾತ್ರರಾದರು.
ನೃತ್ಯ ವಿಭಾಗದಲ್ಲಿ ನಯನಾ ರೈ, ಪ್ರವೀಣ್ ಕುಮಾರ್, ಮಧು ನಟರಾಜ್ ಹಾಗೂ ಗುರುಮೂರ್ತಿ.
ಸುಗಮ ಸಂಗೀತದಲ್ಲಿ ಉಪಾಸನಾ ಮೋಹನ್, ಕಥಾಕೀರ್ತನದಲ್ಲಿ ವೈಕುಂಠದತ್ತ ಮಹಾರಾಜ ಹಾಗೂ ಜಿ. ಸೋಮಶೇಖರ್ ದಾಸ್, ಗಮಕದಲ್ಲಿ ಎಚ್.ಎಸ್. ಗೋಪಾಲ್ ಅವರಿಗೆ ಹಾಗೂ ವಿಶೇಷ ಪ್ರಶಸ್ತಿಯನ್ನು ಗಣೇಶ್ ಭಟ್ ಅವರಿಗೆ ಪ್ರದಾನಿಸಲಾಯಿತು.
ಇದನ್ನೂ ಓದಿ:ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತಕ್ಕೆ ಪ್ರತಿಕೂಲ ಹವಾಮಾನವೇ ಕಾರಣ!
Related Articles
2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಗೌರವ ಪ್ರಶಸ್ತಿ: ಎಸ್.ಎಸ್.ಶಿವಾನಂದ ಸ್ವಾಮಿ, ಎಂ.ಆರ್.ಮೂರ್ತಿ
ವಾರ್ಷಿಕ ಪ್ರಶಸ್ತಿ ಕರ್ನಾಟಕ ಸಂಗೀತ ವಿಭಾಗ: ಎಚ್.ಕೆ.ಬಾಲಕೃಷ್ಣ ರಾವ್, ಎಚ್.ಎಸ್.ನಾಗರಾಜ್, ಟಿ.ಎಸ್.ಚಂದ್ರಶೇಖರ ಮತ್ತು ರಂಗಸ್ವಾಮಿ,
ಹಿಂದೂಸ್ತಾನಿ ಸಂಗೀತ ವಿಭಾಗ: ಅಪ್ಪಣ್ಣ ರಾಮಚಂದ್ರ, ಬಾಲಚಂದ್ರ ನಾಕೋಡ್, ದೇವೇಂದ್ರಕುಮಾರ ಪತ್ತಾರ, ಚಾಳೇಕರ್
ನೃತ್ಯ ವಿಭಾಗ: ಪಿ.ಕಮಲಾಕ್ಷ ಆಚಾರ್, ಪದ್ಮಜಾ ಸುರೇಶ್, ವಿದ್ಯಾ ರವಿಶಂಕರ್, ಬಾಲಸುಬ್ರಹ್ಮಣ್ಯಂ ಶರ್ಮ.
ಸುಗಮ ಸಂಗೀತ ವಿಭಾಗ: ಇಂದ್ರಾನಿ ಅನಂತರಾಂ, ವಸಂತಕುಮಾರ್ ಕುಂಬ್ಳೆ, ಕಥಾ ಕೀರ್ತನ ವಿಭಾಗ ಕೆ.ವಿ.ಚಂದ್ರಮೌಳಿ.
ಹೊರದೇಶ ಕಲಾವಿದರು: ಡಿ.ಕೇಶವ್.
2019ನೇ ಸಾಲಿನ ಪುಸ್ತಕ ಬಹುಮಾನ: “ಗಮಕ ಸಂಗತಿ ಡಾ| ಸವಿತಾ ಸಿರಗೋಜಿ.
2020ನೇ ಪುಸ್ತಕ ಬಹುಮಾನ: “ಸ್ವರ ಮಾಲಾ ಶತಕ’ ಡಾ| ಹರೀಶ ಹೆಗಡೆ.