Advertisement
ಕೇವಲ ಒಂದು ಸ್ಥಾನವಿದ್ದ ಬಿಜೆಪಿ ಈ ಬಾರಿ 13 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದೆ. ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ. ಹಾಸನ ನಗರಸಭೆಯಲ್ಲಿ ಅಧಿಕಾರಕ್ಕೇರಲು 18 ಸ್ಥಾನಗಳ ಅಗತ್ಯವಿದೆ.
Related Articles
Advertisement
23 ಸದಸ್ಯ ಬಲದ ಚನ್ನರಾಯಪಟ್ಟಣ ಪುರಸಭೆಯಲ್ಲಿ ಜೆಡಿಎಸ್ 15, ಕಾಂಗ್ರೆಸ್ 8 ಸ್ಥಾನ ಪಡೆದಿದ್ದು, ಬಿಜೆಪಿ ಹಾಗೂ ಪಕ್ಷೇತರರು ಯಾವುದೇ ಖಾತೆ ತೆರೆದಿಲ್ಲ.
ಸಕಲೇಶಪುರ ಪುರಸಭೆ ಜೆಡಿಎಸ್ ತೆಕ್ಕೆಗೆ:
ಸಕಲೇಪುರ ಪುರಸಭೆ 23 ಸದಸ್ಯ ಬಲ ಹೊಂದಿದ್ದು, ಜೆಡಿಎಸ್ 14, ಕಾಂಗ್ರೆಸ್ 4, ಬಿಜೆಪಿ 2 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಹೊಳೆನರಸೀಪುರದಲ್ಲಿ ಜೆಡಿಎಸ್ ಕಿಂಗ್!
ಹಾಲಿ ಸಚಿವ ಎಚ್ ಡಿ ರೇವಣ್ಣ ಕ್ಷೇತ್ರವಾದ ಹೊಳೆನರಸೀಪುರದ ಪುರಸಭೆಯ 23 ವಾರ್ಡ್ ಗಳಲ್ಲಿ ಜೆಡಿಎಸ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಯಾರು ಖಾತೆ ತೆರೆದಿಲ್ಲ.
ಒಟ್ಟು ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯ 135 ವಾರ್ಡ್ ಗಳಲ್ಲಿ ಜೆಡಿಎಸ್ 91, ಬಿಜೆಪಿ 20, ಕಾಂಗ್ರೆಸ್ 15 ಹಾಗೂ ಪಕ್ಷೇತರರು 9 ಸ್ಥಾನಗಳಲ್ಲಿ ಗೆದ್ದಿದ್ದಾರೆ.