Advertisement
ಜು. 9ರಂದು ವಿಚಾರಣೆಗೆ ಹಾಜರಾಗುವಂತೆ ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್‌ಗೆ ನೋಟಿಸ್ ನೀಡಿರುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಹಗರಣದಲ್ಲಿ ದದ್ದಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ನಗದು ರೂಪದಲ್ಲಿ ನಿಗಮಕ್ಕೆ ಸೇರಿದ ದುಡ್ಡು ಪಡೆದ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 28 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಆರಂಭದಲ್ಲಿ 18 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಕಂಡುಬಂದಿತ್ತು. ತನಿಖೆಯನ್ನು ಚುರುಕು ಗೊಳಿಸುತ್ತಿದ್ದಂತೆ ಆರೋಪಿತರ ಕಂಪೆನಿಗಳ ಮೂಲಕ ನೂರಾರು ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ಆ ಸಂದರ್ಭದಲ್ಲಿ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷರಾಗಿರುವ ಬಸವನಗೌಡ ದದ್ದಲ್‌ರ ಗಮನಕ್ಕೆ ಇಷ್ಟು ಗಂಭೀರವಾದ ವಿಚಾರ ಬಾರಲಿಲ್ಲವೇ, ಇವರ ಸಹಕಾರದಲ್ಲೇ ಹಗರಣ ನಡೆದಿದೆಯೇ ಎಂಬಿತ್ಯಾದಿ ಗೊಂದಲಗಳಿಗೆ ಎಸ್‌ಐಟಿ ಸ್ಪಷ್ಟೀಕರಣ ಕೇಳುವ ಸಾಧ್ಯತೆಗಳಿವೆ.
Related Articles
Advertisement