ಮುಂಬಯಿ: ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್ ಇದರ ಯುವ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡೋತ್ಸವವು ಮಾ. 5 ರಂದು ಭಾಯಂದರ್ ಪೂರ್ವದ, ನವಘರ್ ರೋಡ್‌ನ ಗುರುದ್ವಾರ ಹಾಲ್ ಸಮೀಪದ ಭಾರತ ರತ್ನ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಜರಗಿತು.
ಸಮಾರಂಭದಲ್ಲಿ ಆ್ಯಥ್ಲೆಟಿಕ್ ಆಟಗಾರ ಆಯುಷ್ ಶೆಟ್ಟಿ ಮತ್ತು ರೋಲರ್ ಸ್ಕೇಟಿಂಗ್ ಆಟಗಾರ ಸವಿತ್ ಬಂಗೇರ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರನ್ನು ಗಣ್ಯರು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿ ಅಭಿನಂದಿಸಿದರು.
ಕ್ರೀಡೋತ್ಸವದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಮನೀಶ್ ಸುವರ್ಣ ಮತ್ತು ತಂಡ ಪ್ರಥಮ, ಅರುಣ್ ಶೆಟ್ಟಿ ಪಣಿಯೂರು ಮತ್ತು ತಂಡ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ರಾಘವೇಂದ್ರ ಬಂಗೇರ ಮತ್ತು ತಂಡ ಪ್ರಥಮ, ಶೈಲೇಶ್ ಶೆಟ್ಟಿ ಮತ್ತು ತಂಡ ದ್ವಿತೀಯ, ಮಹಿಳೆಯರ ಚೆಂಡೆಸೆತ ಸ್ಪರ್ಧೆಯಲ್ಲಿ ಸವಿತಾ ಡಿ. ಶೆಟ್ಟಿ ಮತ್ತು ತಂಡ ಪ್ರಥಮ, ಮಾಲತಿ ಬಂಗೇರ ಮತ್ತು ತಂಡ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದು, ಅಲ್ಲದೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರನ್ನು ಗಣ್ಯರು ಗೌರವಿಸಿದರು.
ಸಮಾರಂಭದ ವೇದಿಕೆಯಲ್ಲಿ ಪಲಿಮಾರು ಮಠದ ಪ್ರಧಾನ ಅರ್ಚಕ ರಾಧಾಕೃಷ್ಣ ಭಟ್, ಸೈಂಟ್ ಆ್ಯಗ್ನೇಸ್ ಶಾಲೆಯ ಅಧ್ಯಕ್ಷ ಅರುಣೋದಯ ರೈ, ಅಯ್ಯಪ್ಪ ಆರಾಧನಾ ಭಕ್ತವೃಂದದ ಸುಧಾಕರ್ ಪೂಜಾರಿ ಮತ್ತು ಹರೀಶ್ ಪಲಿಮಾರ್, ಸಮಿತಿಯ ಸದಸ್ಯ ಪ್ರಭಾಕರ ಶೆಟ್ಟಿ, ಮಂಡಳಿಯ ಅಧ್ಯಕ್ಷ ರವಿಕಾಂತ್ ಶೆಟ್ಟಿ ಇನ್ನ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್, ಕೋಶಾಧಿಕಾರಿ ಗುಣಪಾಲ್ ಶೆಟ್ಟಿ, ಸಂಸ್ಥೆಯ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ವಿ. ಶೆಟ್ಟಿ, ಜತಿನ್ ಮಾಯವಂಶಿ, ಅಶ್ವಿನ್ ದಾಮೋರ್, ದಿನೇಶ್ ನಲವಡೆ, ರಾಜೇಶ್ ವೇತೋಸ್ಕರ್, ಅರುಣ್ ಶೆಟ್ಟಿ ಪಕ್ಕಳ, ಅರುಣ್ ಶೆಟ್ಟಿ ಪಣಿಯೂರು, ದಯಾನಂದ ಶೆಟ್ಟಿ ಮಾಗಂದಡಿ, ಸುಭಾಶ್ ಶೆಟ್ಟಿ, ಅಶೋಕ್ ಕೆ. ಕೋಟ್ಯಾನ್, ಗುಣಪಾಲ್ ಶೆಟ್ಟಿ, ಚೇತನ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಆಶಾ ಶೆಟ್ಟಿ, ಕಾರ್ಯಾಧ್ಯಕ್ಷೆ ಸುಮಂಗಳಾ ಕಣಂಜಾರು, ಗೌರವಾಧ್ಯಕ್ಷ ಅರುಣೋದಯ ರೈ, ಅಧ್ಯಕ್ಷ ರವಿಕಾಂತ್ ಶೆಟ್ಟಿ ಇನ್ನ, ಉಪಾಧ್ಯಕ್ಷರುಗಳಾದ ಸುಭಾಶ್ ಶೆಟ್ಟಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಚೇತನ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ದಿಲೀಪ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಚಂದ್ರಶೇಖರ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿನರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್ ವಂದಿಸಿದರು.