ಬೆಂಗಳೂರು: ಲೋಕಸಭಾ ಚುನಾವಣೆ ಮೊದಲ ಹಂತದ ಸಂದರ್ಭದಲ್ಲಿನ ಬಸ್ ಟಿಕೆಟ್ ದರದ ಸುಲಿಗೆ ಎರಡನೇ ಹಂತದ
ಚುನಾವಣೆಯಲ್ಲೂ ಮುಂದುವರಿದಿದೆ. ಬಸ್ ದರ ಹೆಚ್ಚಳದಿಂದಾಗಿ ಮತದಾರರಿಗೆ ತಮ್ಮ ಹಕ್ಕು ಚಲಾವಣೆ ದುಬಾರಿಯಾಗಿ
ಪರಿಣಮಿಸಲಿದೆ.
Advertisement
ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, ಮತ ಚಲಾಯಿಸಲು ಆಯಾ ಕ್ಷೇತ್ರಗಳಿಗೆ ತೆರಳಲು ಜನರು ಸಿದ್ಧವಾಗಿದ್ದರೆ, ಮತ್ತೊಂದೆಡೆ ಖಾಸಗಿ ಬಸ್‌ನವರು ಟಿಕೆಟ್ ದರ ಹೆಚ್ಚಿಸಲು ಕಾದು ಕುಳಿತಿದ್ದಾರೆ.
ಬಳ್ಳಾರಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಈ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಚುನಾವಣೆ ನಡೆಯಲಿದೆ. ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ನೆಲೆಸಿದ್ದು, ಮಂಗಳವಾರದ ಚುನಾವಣೆಗೆ ಶುಕ್ರವಾರ ರಾತ್ರಿಯೇ ತಮ್ಮ-ತಮ್ಮ ಊರುಗಳಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾರೆ.
Related Articles
ಮೊದಲ ಹಂತದ ಚುನಾವಣಾ ವೇಳೆ ಸಾರಿಗೆ ಇಲಾಖೆಯು 1,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದರೂ ಖಾಸಗಿ ಬಸ್‌ನವರು ಸಾಮಾನ್ಯ ದಿನಗಳಿಗಿಂತ ಎರಡು ಪಟ್ಟು ಹೆಚ್ಚು ಟಿಕೆಟ್ ದರ ಹೆಚ್ಚಿಸಿದ್ದರು. 2ನೇ ಹಂತದ ಚುನಾವಣೆಯೊಳಗೆ ಹೆಚ್ಚಿನ ಟಿಕೆಟ್ ದರ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.
Advertisement
ಆದರೆ, ವಿಶೇಷ ಹಬ್ಬಗಳ ವೇಳೆ, ಮೊದಲ ಹಂತದ ಚುನಾವಣೆಯಲ್ಲಿಯೂ ಕ್ರಮ ಕೈಗೊಳ್ಳಲಿಲ್ಲ. ಈಗಲೂ ಕಣ್ಣುಮುಚ್ಚಿಕುಳಿತಿದೆ. ಈ ಕುರಿತು ಚುನಾವಣಾ ಆಯೋಗವಾದರೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪ್ರಯಾಣಿಕರದ್ದಾಗಿದೆ.
ರೂ.ವರೆಗೆ ಹಾಗೂ ವಾರಾಂತ್ಯದಲ್ಲಿ 1,000 ರೂ.ಗಳಿಂದ 1,400 ರೂ.ವರೆಗೆ ಇರಲಿದೆ. ವಿಶೇಷ ಹಬ್ಬಗಳ ಸಂದರ್ಭದಲ್ಲಿ 2,500 ರಿಂದ 2,800 ರೂ.ವರೆಗೂ ಹೆಚ್ಚಿಸಿರುವ ಉದಾಹರಣೆಗಳು ಇವೆ. ಚುನಾವಣೆ ಸಂದರ್ಭದಲ್ಲಿ ವಿವಿಧ ಖಾಸಗಿ ಬಸ್‌ಗಳು ಟಿಕೆಟ್ ದರ ಹೆಚ್ಚಳ ಮಾಡಿರುವ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಲಾಗುವುದು.
●ಮನೋಜ್‌ಕುಮಾರ್ ಮೀನಾ, ರಾಜ್ಯ
ಮುಖ್ಯ ಚುನಾವಣಾಧಿಕಾರಿ ಸಾಮಾನ್ಯ ದಿನ ಹಾಗೂ ವಾರಾಂತ್ಯದ ಪ್ರಯಾಣಕ್ಕೆ ಹೋಲಿಸಿದರೆ, ಚುನಾವಣೆ ಹಿನ್ನೆಲೆಯಲ್ಲಿ ಬಸ್‌ಗಳ ಟಿಕೆಟ್ ದರ ದುಪ್ಪಟ್ಟು
ಆಗಿದ್ದು, ನಮ್ಮ ಜೇಬು ಸುಡುವಂತಾಗಿದೆ. ಒಬ್ಬರು, ಒಮ್ಮೆ ಊರಿಗೆ ಹೋಗಿ ಬರಲು ಸುಮಾರು 5 ಸಾವಿರ ಹಣ ಬೇಕಾಗುತ್ತದೆ. ಈ ಹಣದುಬ್ಬರದ ಮಧ್ಯೆ ಊರಿಗೆ ಹೋಗಲು ಸಾಧ್ಯವಿಲ್ಲ.
●ಪೂಜಾ ನಾಯಕ್, ಬೆಂಗಳೂರು ನಿವಾಸಿ
(ಮೂಲ ವಿಜಯಪುರ)