Advertisement

ಗ್ರಾ.ಪಂ. ಕದನ ಕುತೂಹಲ: ನಿಧನರಾದ ಅಭ್ಯರ್ಥಿಗೆ ಜಯ, ಸೊಸೆಗೆ ಸೋಲು, ಅತ್ತೆಗೆ ಜಯ!

04:12 PM Dec 30, 2020 | Team Udayavani |

ಮಣಿಪಾಲ: ಎರಡು ಹಂತಗಳಲ್ಲಿ ನಡೆದಿದ್ದ ಗ್ರಾಮ ಪಂಚಾಯ್ತಿ ಮತದಾನದ ಫಲಿತಾಂಶದ ಎಣಿಕೆ ಬುಧವಾರ (ಡಿಸೆಂಬರ್ 30, 2020) ಬೆಳಗ್ಗೆ 8ಗಂಟೆಯಿಂದ ಆರಂಭಗೊಂಡಿದ್ದು, ಸಂಜೆಯೊಳಗೆ ಪೂರ್ಣ ಪ್ರಮಾಣದ ಫಲಿತಾಂಶ ಲಭ್ಯವಾಗಲಿದೆ. ಏತನ್ಮಧ್ಯೆ ಫಲಿತಾಂಶದಲ್ಲಿ ಹಲವು ಕುತೂಹಲಕರ ಘಟನೆ ನಡೆದಿದೆ.

Advertisement

ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಗೆದ್ದ ಅಭ್ಯರ್ಥಿ!

ಕೊಡಗಿನ ವಿರಾಜಪೇಟೆಯ ಪಾಲಿಬೆಟ್ಟು ಪಂಚಾಯ್ತಿ ಅಭ್ಯರ್ಥಿ ಬೋಪಣ್ಣ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದರು. ಜಾತಿ ನಿಂದನೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಬೋಪಣ್ಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಗೆ ಕೆಲವು ಗಂಟೆಗಳಿರುವಾಗ ಜಾಮೀನು ಪಡೆದಿದ್ದ ಬೋಪಣ್ಣ ವಾರ್ಡ್ ಗೆ ತೆರಳಿ ಮತಯಾಚಿಸಿದ್ದರು. ಈಗಾಗಲೇ ಎರಡು ಬಾರಿ ಗೆಲುವು ಸಾಧಿಸಿದ್ದ ಬೋಪಣ್ಣ ಇದೀಗ ಮೂರನೇ ಬಾರಿ ಜಯ ಸಾಧಿಸಿದ್ದಾರೆ.

ಪತಿಗೆ ಗೆಲುವು, ಪತ್ನಿಗೆ ಸೋಲು!

ಕೂಡ್ಲಿಗಿ: ಇಲ್ಲಿನ ಗುಂಡುಮುಣು ಗ್ರಾಮ ಪಂಚಾಯ್ತಿ ವಾರ್ಡ್ 1ರಲ್ಲಿ ಪತಿ ಜಯಗಳಿಸಿದ್ದು, ಮತ್ತೊಂದು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪತ್ನಿ ಪರಾಜಯಗೊಂಡಿದ್ದಾರೆ.

Advertisement

ಗುಂಡುಮುಣು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ಅವರು 314 ಮತ ಪಡೆದು ಗೆಲುವಿನ ನಗು ಬೀರಿದ್ದಾರೆ. ಮತ್ತೊಂದೆಡೆ ಪತ್ನಿ ಲಕ್ಷ್ಮೀದೇವಿ 283 ಮತ ಪಡೆದು ಸೋತಿದ್ದು, ಪ್ರತಿಸ್ಪರ್ಧಿ ಚಂದ್ರಗೌಡ 314 ಮತಗಳಿಸಿ ಜಯ ಗಳಿಸಿದ್ದಾರೆ.

ಇದನ್ನೂ ಓದಿ:ಗ್ರಾ.ಪಂ. ಚುನಾವಣೆ: ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಬಣಕ್ಕೆ ಭರ್ಜರಿ ಗೆಲುವು

ಸೊಸೆಗೆ ಸೋಲು, ಸೋರತ್ತೆಗೆ ಗೆಲುವು:

ಹಾಸನ: ಹಾಸನ ತಾಲೂಕಿನ ಹೆರಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈರಾಪುರ ಕ್ಷೇತ್ರದಿಂದ ಅತ್ತೆ ಸೊಂಬಮ್ಮ ಮತ್ತು ಸೊಸೆ ಪವಿತ್ರ ಸ್ಪರ್ಧಿಸಿದ್ದರು. ಪೈಪೋಟಿಯ ಫಲಿತಾಂಶದಲ್ಲಿ ಜೆಡಿಎಸ್ ಬೆಂಬಲಿತ ಸೊಂಬಮ್ಮ 276 ಮತಗಳನ್ನು ಪಡೆದು ಗೆಲುವಿನ ನಗು ಬೀರಿದ್ದು, ಕಾಂಗ್ರೆಸ್ ಬೆಂಬಲಿತ ಪವಿತ್ರ 273 ಮತ ಪಡೆದು ಪರಾಜಯಗೊಂಡಿದ್ದಾರೆ.

ಚುನಾವಣೆ ನಂತರ ನಿಧನರಾಗಿದ್ದ ಅಭ್ಯರ್ಥಿಗೆ ಜಯ:

ಬೆಳಗಾವಿ: ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲೂಕಿನ ಸಿಬಿ ಅಂಬೋಜಿ(67ವರ್ಷ) ಜಯ ಸಾಧಿಸಿದ್ದಾರೆ. ವಕೀಲರಾಗಿದ್ದ ಅಂಬೋಜಿಯವರು ಈ ಹಿಂದೆ ನಾಲ್ಕು ಬಾರಿ ಗೆದ್ದಿದ್ದು, ಒಂದು ಬಾರಿ ಗ್ರಾ.ಪಂ. ಅಧ್ಯಕ್ಷರಾಗಿದ್ದರು. ಈ ಬಾರಿ ಚುನಾವಣೆಯಲ್ಲಿ 414 ಮತ ಪಡೆದು ಗೆಲುವು ಸಾಧಿಸಿದ್ದರು.

ತೃತೀಯ ಲಿಂಗಿಗೆ ಸೋಲು:

ಮಂಡ್ಯ: ಕೀಲಾರ ಗ್ರಾಮ ಪಂಚಾಯ್ತಿಯ 1ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ತೃತೀಯ ಲಿಂಗಿ ಪ್ರಫುಲ್ಲಾ ದೇವಿ 327 ಮತ ಪಡೆದು ಪರಾಜಯಗೊಂಡಿದ್ದು, ಪ್ರತಿಸ್ಪರ್ಧಿ ಪ್ರದೀಪ್ ಕುಮಾರ್ 495 ಮತಗಳಿಸಿ ಗೆಲುವು ಸಾಧಿಸಿದ್ದಾರೆ.

ಒಂದು ಮತದ ಅಂತರದಿಂದ ಸೋಲು:

ವಿಜಯಪುರ: ಜಿಲ್ಲೆಯ ಹಿರೇಮುರಾಳ ಗ್ರಾ.ಪಂನ ಜಂಗಮುರಾಳ ಗ್ರಾಮದ ಲೋಕೇಶ ಸಿದ್ದಪ್ಪ ಢವಳಗಿ 129 ಮತ ಪಡೆದಿದ್ದು, ಇವರ ಗೆಲುವಿಗೆ 3 ಅಂಚೆ ಮತಗಳು ಸಹಕಾರಿಯಾಗಿದ್ದು, ಪ್ರತಿಸ್ಪರ್ಧಿ ಹಣಮಂತ ವಾಲಿಕಾರ 128 ಮತ ಪಡೆದು ಒಂದು ಮತದ ಅಂತರದಿಂದ ಸೋಲನ್ನನುಭವಿಸಿದ್ದಾರೆ.

ರೋಚಕ ಗೆಲುವು- ಮೂರು ಬಾರಿ ಮತ ಎಣಿಕೆ:

ಹಾವೇರಿ: ಸವಣೂರು ತಾಲೂಕಿನ ಪಂಚಾಯ್ತಿ ಚುನಾವಣೆಯ ಫಲಿತಾಂಶದಲ್ಲಿ ಮೂರು ಬಾರಿ ಮತ ಎಣಿಕೆ ನಡೆಸಿದ್ದು, ಇದರಲ್ಲಿ ಇಬ್ಬರು ಅಭ್ಯರ್ಥಿಗಳು 95 ಮತ ಪಡೆದಿದ್ದರು. ನಂತರ ಲಾಟರಿ ಎತ್ತುವ ಮೂಲಕ ಪಕ್ಕಿರೇಶ ಸೂರಣಗಿ ಗೆಲುವು ಸಾಧಿಸುವ ಮೂಲಕ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next