Advertisement
ಒಂದು ಮತದ ಅಂತರದಿಂದ ಗೆದ್ದ ಅದೃಷ್ಟಶಾಲಿಗಳು!
Related Articles
Advertisement
ಒಂದು ಮತದ ಗೆಲುವು:
ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮ ಪಂಚಾಯ್ತಿಯ ಬಸ್ತಿಹಳ್ಳಿ ಗ್ರಾಮದ ಶಾಂತಕುಮಾರ್ ಅವರು ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಮಬಲದ ಫಲಿತಾಂಶ- ಟಾಸ್ ನಲ್ಲಿ ಗೆದ್ದ ಅಭ್ಯರ್ಥಿ:
ಬಾಗಲಕೋಟೆ ಜಿಲ್ಲೆಯ ಗೊರಬಾಳ ಗ್ರಾಮ ಪಂಚಾಯ್ತಿಯ ಫಲಿತಾಂಶ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಇಲ್ಲಿನ ಗೋಪಶಾನಿ ವಾರ್ಡ್ ನ ಇಬ್ಬರು ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರು.
ಗೋಪಶಾನಿ ವಾರ್ಡ್ ನ ಮಹಾಂತೇಶ್ ಮತ್ತು ಕಳಕಪ್ಪ ತಲಾ 88 ಮತಗಳನ್ನು ಪಡೆದಿದ್ದು, ಸಮಬಲ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಗೆಲುವು ನಿರ್ಧರಿಸಲು ಟಾಸ್ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಚುನಾವಣಾಧಿಕಾರಿ ಇಬ್ಬರು ಅಭ್ಯರ್ಥಿಗಳ ಸಮ್ಮುಖದಲ್ಲಿ ಟಾಸ್ ಹಾಕಿದ್ದು, ಇದರಲ್ಲಿ ಅಭ್ಯರ್ಥಿ ಮಹಾಂತೇಶ್ ಗೆಲುವಿನ ನಗು ಬೀರಿದ್ದಾರೆ.
ಬೂಕನಕೆರೆ ಗ್ರಾ.ಪಂನಲ್ಲಿ ಲಾಟರಿ ಮೂಲಕ ಆಯ್ಕೆ!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮ ಪಂಚಾಯಿತಿ ಫಲಿತಾಂಶದಲ್ಲಿ ಸಮಬಲದ ಮತ ಪಡೆದಿದ ಪರಿಣಾಮ ಲಾಟರಿ ಡ್ರಾ ಮೂಲಕ ಅಭ್ಯರ್ಥಿ ಆಯ್ಕೆ ನಡೆದಿತ್ತು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ತಲಾ 183 ಮತ ಪಡೆದಿದ್ದರು. ನಂತರ ಅಧಿಕಾರಿಗಳ ನಡೆಸಿದ ಲಾಟರಿ ಡ್ರಾ ಪರೀಕ್ಷೆಯಲ್ಲಿ ಜೆಡಿಎಸ್ ನ ಮಂಜುಳಾ ವಿಜೇತರಾಗುವ ಮೂಲಕ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಸಾಣಿಕೆರೆ ಅಭ್ಯರ್ಥಿಗೆ ಲಾಟರಿ ಮೂಲಕ ಗೆಲುವು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯ್ತಿಯ ಅಭ್ಯರ್ಥಿಗಳಾದ ಅಂಜು ಎಂ ಹಾಗೂ ಬಿ.ಎ.ಕ್ಷಿತಿಜಾ 375 ಮತ ಪಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಅಂಜು ಎ ಲಾಟರಿ ಮೂಲಕ ಗೆಲುವು ಸಾಧಿಸಿದ್ದಾರೆ.
ಸ್ಪರ್ಧೆಯಲ್ಲಿ ತಾಯಿಗೆ ಜಯ, ಮಗನಿಗೆ ಸೋಲು!
ಬೀದರ್ ತಾಲೂಕಿನ ಚಿಮಕೋಡ್ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ತಾಯಿ ಗೆಲುವು ಸಾಧಿಸಿದ್ದು, ಮಗ ಸೋಲನ್ನನುಭವಿಸಿದ್ದಾರೆ. ಚಿಮಕೋಡ್ ನ ಖಾಜಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ತಾಯಿ ತುಳಜಮ್ಮ 244 ಮತ ಪಡೆದು ಜಯ ಗಳಿಸಿದ್ದಾರೆ. ಪುತ್ರ ಶಿವರಾಜ್ 255 ಮತ ಪಡೆದು ಪರಾಜಯಗೊಂಡಿದ್ದು, ಪ್ರತಿಸ್ಪರ್ಧಿ ಅನಿಲ್ 301 ಮತ ಪಡೆದು ಗೆಲುವು ಪಡೆದಿದ್ದಾರೆ.