Advertisement
ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ಏರ್ಪಟ್ಟಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಳ್ಳುವ ಮೂಲಕ ಎಸ್.ವಿ.ಸಂಕನೂರ ಅವರು ಗೆಲುವಿನ ನಗೆ ಬೀರಿದರು.
Related Articles
Advertisement
ಬಿಜೆಪಿ ಸತತ ಮುನ್ನಡೆ : ಬೆಳಗ್ಗೆ 8:00 ಗಂಟೆಗೆ ಮತಪೆಟ್ಟಿಗೆಗಳ ಕೊಠಡಿಯಿಂದ ಮತಪತ್ರಗಳು ಎಣಿಕೆ ಕೊಠಡಿ ಸೇರಿದವು. ಅಲ್ಲಿಂದ ಮಧ್ಯಾಹ್ನ 12:00 ಗಂಟೆ ವರೆಗೂ ಅವುಗಳ ಹೊಂದಿಸುವ ಕಾರ್ಯವಾಯಿತು. ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮಧ್ಯಾಹ್ನ 2:30 ಕ್ಕೆ ಪೂರ್ಣಗೊಂಡಿತು. ಇಲ್ಲಿ ಒಟ್ಟು 14 ಸಾವಿರ ಮತಗಳ ಎಣಿಕೆಯಾದಾಗ 11552 ಮತಗಳು ಸಿಂಧುವಾದರೆ 2445 ಮತಗಳೂ ತಿರಸ್ಕೃತಗೊಂಡವು.
ಎಸ್.ವಿ.ಸಂಕನೂರ-6777, ಕುಬೇರಪ್ಪ-2928 ಹಾಗೂ ಬಸವರಾಜ ಗುರಿಕಾರ-1672 ಮತಗಳನ್ನು ಪಡೆದುಕೊಂಡರು. ಈ ಸುತ್ತಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಕನೂರ ಅವರು 3849 ಮತಗಳ ಅಂತರ ಕಾಯ್ದುಕೊಂಡರು.
2ನೇ ಸುತ್ತಿನ ಮತ ಎಣಿಕೆ ಕಾರ್ಯ ಸಂಜೆ 5:30 ಕ್ಕೆ ಮುಕ್ತಾಯವಾಯಿತು. ಈ ಸುತ್ತಿನಲ್ಲಿ ಒಟ್ಟು 27998 ಮತಗಳ ಎಣಿಕೆ ಪೂರ್ಣಗೊಂಡಾಗ ಎಸ್.ವಿ.ಸಂಕನೂರ-13293, ಕುಬೇರಪ್ಪ-6111, ಗುರಿಕಾರ-3540 ಮತಗಳನ್ನು ಪಡೆದುಕೊಂಡರು. ಇಲ್ಲಿ ಸಂಕನೂರ ಅವರು 7182 ಮತಗಳ ಭಾರಿ ಮುನ್ನಡೆ ಕಾಯ್ದುಕೊಂಡರು. ಇಲ್ಲಿ 4669 ಮತಗಳು ಅಸಿಂಧುವಾದರೆ 23,329 ಮತಗಳು ಸಿಂಧುವಾದವು.3ನೇ ಸುತ್ತಿನ ಮತ ಎಣಿಕೆಯಲ್ಲಿ 41,998 ಮತಗಳ ಎಣಿಕೆ ಪೂರ್ಣಗೊಂಡಿದ್ದು ಸಂಜೆ 7:00 ಗಂಟೆಗೆ. ಇಲ್ಲಿ ಸಂಕನೂರ-19565, ಕುಬೇರಪ್ಪ-9449, ಗುರಿಕಾರ-5281 ಮತಗಳನ್ನು ಪಡೆದುಕೊಂಡರು. ಈ ಹಂತದಲ್ಲಿ 7045 ಮತಗಳು ಅಸಿಂಧುವಾಗಿದ್ದವು. 8772 ಮತ ಅಸಿಂಧು : ಪದವೀಧರ ಕ್ಷೇತ್ರದ ಈ ಚುನಾವಣೆಯಲ್ಲಿ ಶಿಕ್ಷಣ ಪಡೆದ ವಿದ್ಯಾವಂತರೇ ಮತದಾರರಿದ್ದರೂ, ಅಸಿಂಧುಗೊಂಡ ಮತಗಳನ್ನು ನೋಡಿದಾಗ ಬೇಸರವಾಗುತ್ತದೆ. ಕೆಲವಷ್ಟು ಜನರು ತಪ್ಪು ತಪ್ಪಾಗಿ ಅಂಕಿಗಳನ್ನು ಬರೆದು ಮತ ಅಸಿಂಧುವಾಗುವಂತೆ ಮಾಡಿದ್ದರೆ, ಇನ್ನಷ್ಟು ಮತದಾರರು ಬೇಕಾಬಿಟ್ಟಿ ಸಂಗತಿಗಳನ್ನೇ ಮತಪತ್ರದಲ್ಲಿ ಬರೆದು ಮತ ಚಲಾಯಿಸಿದ್ದಾರೆ. ಹೀಗಾಗಿ 8772 ಮತಗಳು ತಿರಸ್ಕೃತಗೊಂಡಿವೆ. ಹಳೆ ಪಿಂಚಿಣಿ ಯೋಜನೆಯನ್ನೇ ಮುಂದುವರೆಸಿ, ಹೊಸ ಪಿಂಚಿಣಿ ಯೋಜನೆ ಬೇಡವೇ ಬೇಡ ಎನ್ನುವ ವಾಕ್ಯಗಳು ಮತ ಪತ್ರದಲ್ಲಿ ಬರೆಯಲಾಗಿದೆ. ಇನ್ನು ಕೆಲವರು ಸರಿ ತಪ್ಪು ಸಂಕೇತಗಳನ್ನು ಬಳಸಿದ್ದಾರೆ. ಕೆಲವಷ್ಟು ಜನರು ಎಲ್ಲ ಅಭ್ಯರ್ಥಿಗಳಿಗೂ ಒಂದೇ ಪ್ರಾಶಸ್ತ್ಯದ ಮತಗಳನ್ನು ನಮೂದು ಮಾಡಿದ್ದಾರೆ. ಕೆಲವರು ರಂಗೋಲಿ ಬಿಡಿಸಿದ್ದರೆ, ಇನ್ನಷ್ಟು ಮತಪತ್ರಗಳಲ್ಲಿ ಇಂಗ್ಲಿಷ ಅಕ್ಷರಗಳಲ್ಲಿ ಒನ್,ಟೂ ಎಂದು ನಮೂದು ಮಾಡಲಾಗಿದೆ. ಹೀಗಾಗಿ ಮತಪತ್ರಗಳಲ್ಲಿ ಮತದಾರರು ಮಾಡಿದ ಅವಾಂತರಗಳಿಂದಾಗಿ ಅತೀ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ. ಸರಳ ವಿಜಯೋತ್ಸವ : ಮತ ಎಣಿಕೆ ಕೇಂದ್ರ ಕೃಷಿ ವಿವಿಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರ ಜಮಾವಣೆಯಾಗಿರಲಿಲ್ಲ. ಗೆಲುವಿನ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಆವರಣದಲ್ಲಿ ಸುಳಿಯಲಿಲ್ಲ. ಆದರೆ ಬಿಹಾರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ನಗರದಲ್ಲಿರುವ ಬಿಜೆಪಿ ಕಚೇರಿಗೆ ಬಂದು ವಿಜಯೋತ್ಸವ ಆಚರಿಸಿದರು.