Advertisement
ಪಕ್ಷ ರಾಜಕಾರಣ ಹಾಗೂ ಪ್ರತಿಷ್ಠೆಯಿಂದಾಗಿ ಸದನದಲ್ಲಿ ನೂಕಾಟ, ತಳ್ಳಾಟ, ತೋಳ್ಬಲ ಪ್ರದರ್ಶನದ ಅಟ್ಟಹಾಸ ಮೆರೆದು ಸಭಾಪತಿ ಪೀಠದ ಮೇಲೆ ಸದಸ್ಯರು ಹೋಗಿ ಕುಳಿತದ್ದು ನಿಜಕ್ಕೂ ದುರಂತವೇ ಸರಿ. ಸಭಾಪತಿಯವರ ಮೇಲೆ ವಿಶ್ವಾಸ ಇಲ್ಲ ಎಂದು ನೋಟಿಸ್ ಕೊಟ್ಟ ಅನಂತರ ಅದು ನಿಯಮಾವಳಿ ಪ್ರಕಾರ ಇದೆಯೋ ಇಲ್ಲವೋ ನೈತಿಕತೆ ಪ್ರಶ್ನೆಯಿಂದಾದರೂ ಸಭಾಪತಿ ರಾಜೀನಾಮೆ ನೀಡಬಹುದಿತ್ತು. ಕಾಂಗ್ರೆಸ್ ಈ ಕುರಿತು ಸೂಚನೆ ನೀಡಬಹುದಿತ್ತು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಡಿ.15ರ ವರೆಗೂ ಕಲಾಪ ನಡೆಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಸಮ್ಮುಖದಲ್ಲಿ ಎಲ್ಲ ಪಕ್ಷಗಳು ಒಪ್ಪಿ ತೀರ್ಮಾನವಾಗಿದ್ದರೂ ಅದನ್ನು ಸದನಕ್ಕೂ ತಿಳಿಸದೆ ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದು ಮತ್ತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಪತ್ರ ಬರೆದ ಅನಂತರ ಒಂದು ದಿನದ ಕಲಾಪ ನಿಗದಿ ಮಾಡಿದ್ದು ಯಾಕೆ ಎಂಬ ಜಿಜ್ಞಾಸೆಯೂ ಇದೆ. ಎಲ್ಲ ಪಕ್ಷಗಳಿಂದ ಭಿನ್ನ ಎಂದು ಹೇಳಿಕೊಳ್ಳುವ ಬಿಜೆಪಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಕಾರ್ಯಸೂಚಿಯಲ್ಲಿ ಇಲ್ಲದಿ ದ್ದರೂ ಸಭಾಪತಿಯವರು ಪೀಠ ಅಲಂಕರಿಸಿದ ಅನಂತರ ನಿಮ್ಮ ಮೇಲೆ ವಿಶ್ವಾಸ ಇಲ್ಲ ಉಪ ಸಭಾಪತಿಯವರು ಕಲಾಪ ನಡೆಸಲಿ ಎಂದು ಒತ್ತಾಯಿಸಬಹುದಿತ್ತು. ಸಭಾಪತಿಯವರು ಸದನಕ್ಕೆ ಬರದಂತೆ ತಡೆದು ಸದನ ಆರಂಭವಾಗುವ ಮುನ್ನವೇ ಉಪ ಸಭಾಪತಿಯನ್ನು ಪೀಠದಲ್ಲಿ ಕುಳ್ಳಿರಿಸಿದ್ದು ಯಾರೂ ಒಪ್ಪಲಾಗದು.
Advertisement
ವಿಧಾನ ಪರಿಷತ್ ಗಲಾಟೆ: ಪ್ರಜಾಪ್ರಭುತ್ವದ ಅಣಕ
01:10 AM Dec 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.