Advertisement
ಬೇಡಿಕೆ ಹೆಚ್ಚಿರುವ ನಡುವೆಯೇ ಆರ್ಥಿಕ ಸಂಕಷ್ಟ ಉಂಟಾದ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿದ್ದ ಚಾಲನ ಸಿಬಂದಿ ನೇಮಕಾತಿ ಪ್ರಕ್ರಿಯೆ ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದ್ದರಿಂದ ನಿವೃತ್ತ ಚಾಲಕರ ಮೊರೆಹೋಗಿರುವ ಕೆಎಸ್‌ಆರ್‌ಟಿಸಿ, ಕಳೆದ ಮೂರು ವರ್ಷಗಳಲ್ಲಿ ನಾಲ್ಕೂ ಸಾರಿಗೆ ನಿಗಮಗಳಲ್ಲಿ ನಿವೃತ್ತಿ ಹೊಂದಿದ 63 ವರ್ಷ ಮೀರಿರದ ಚಾಲಕರನ್ನು ಮೂರು ತಿಂಗಳ ಮಟ್ಟಿಗೆ ತಾತ್ಕಾಲಿಕ ಆಧಾರದ ಮೇಲೆ ಚಾಲಕರನ್ನಾಗಿ ನೇಮಿಸಿಕೊಳ್ಳಲು ಉದ್ದೇಶಿಸಿದೆ.
ಈ ಸಂಬಂಧ ಕೆಲವು ಷರತ್ತಿಗೊಳಪಟ್ಟು ನಿಗಮದ ಹಲವು ವಿಭಾಗ ಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ. ಆಸಕ್ತ ಚಾಲಕರು ಸೂಕ್ತ ದಾಖಲೆಗಳೊಂದಿಗೆ ಪುತ್ತೂರು, ರಾಮನಗರ, ಚಾಮರಾಜನಗರ, ಮಂಗಳೂರು ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲುವಂತೆ ತಿಳಿಸಿದೆ. ದೈಹಿಕವಾಗಿ ಚಾಲನ ವೃತ್ತಿ ನಿರ್ವಹಣೆಗೆ ಸಮರ್ಥರಿದ್ದು, ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಬೇಕು. ಪ್ರತೀ ದಿನದ 8 ಗಂಟೆಗಳ ಚಾಲನ ಅವಧಿಗೆ ಗೌರವಧನ ಪಾವತಿಸಲಾಗುವುದು. ಎಂಟು ಗಂಟೆ ಅನಂತರದಲ್ಲಿನ ಪ್ರತೀ ಗಂಟೆಗೆ ಹೆಚ್ಚುವರಿ ಭತ್ತೆ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.