ಕೋಲಾರ: ದೇಶದ ವಿವಿಧ ಭಾಗಗಳಲ್ಲಿ ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಏತನ್ಮಧ್ಯೆ ಟೊಮೆಟೊ ಬೆಲೆ ಏರಿಕೆಯಾಗಿರುವುದು ಕೋಲಾರದ ಬೇತಮಂಗಲದ ರೈತ ಕುಟುಂಬವೊಂದಕ್ಕೆ ಅದೃಷ್ಟ ಖುಲಾಯಿಸುವಂತೆ ಮಾಡಿದೆ.
ಇದನ್ನೂ ಓದಿ:ಹೋಟೆಲಲ್ಲಿ ತಿಂಡಿ ತಿನ್ನಲು ಎಮರ್ಜೆನ್ಸಿ ಸೈರನ್ ಹಾಕಿ ಬಂದ ಆಂಬ್ಯುಲೆನ್ಸ್ ಚಾಲಕ…
ಟೊಮೆಟೊ ಬೆಲೆ ಗಗನಕ್ಕೇರುವ ಮೂಲಕ ಗ್ರಾಹಕರ ಜೇಬಿಗೆ ಭರ್ಜರಿ ಹೊರೆಯಾಗತೊಡಗಿದ್ದು, ಈಗ ಎಲ್ಲೆಡೆ ಟೊಮೆಟೊ ಸುದ್ದಿಯೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಕೋಲಾರದ ರೈತ ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರಿಗೆ ಟೊಮೆಟೊ ಬೆಳೆಯಿಂದ ಜಾಕ್ ಪಾಟ್ ಹೊಡೆದಂತಾಗಿದೆ.
ಹೌದು ಕೋಲಾರದ ಬಾಗೇಪಲ್ಲಿ ಎಪಿಎಸಿ ಮಾರುಕಟ್ಟೆಯಲ್ಲಿ ರೈತ ಗುಪ್ತಾ ಅವರು ಬರೋಬ್ಬರಿ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದು, ಇದರಿಂದ 38 ಲಕ್ಷ ರೂಪಾಯಿ ಆದಾಯ ಗಳಿಸಿರುವುದಾಗಿ ವರದಿ ತಿಳಿಸಿದೆ.
ರೈತ ಪ್ರಭಾಕರ್ ಗುಪ್ತಾ ಅವರು ಪ್ರತಿ 15 ಕೆಜಿ ತೂಕದ ಬಾಕ್ಸ್ ಅನ್ನು 1,900 ರೂಪಾಯಿಗೆ ಮಾರಾಟ ಮಾಡಿರುವುದಾಗಿ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಗುಪ್ತಾ ಮತ್ತು ಸಹೋದರರು ಕೋಲಾರದ ಬೇತಮಂಗಲದಲ್ಲಿ ಕಳೆದ 40ವರ್ಷಗಳಿಂದ ತಮ್ಮ 40 ಎಕರೆ ಜಮೀನಿನಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.
ಕೋಲಾರ ಎಪಿಎಂಸಿ
ತಮ್ಮ ಕೃಷಿ ಭೂಮಿಯಲ್ಲಿ ಉತ್ತಮ ದರ್ಜೆಯ ತರಕಾರಿಗಳನ್ನು ಬೆಳೆಯುತ್ತಿದ್ದು, ಇದಕ್ಕೆ ರಾಸಾಯನಿಕ ಮುಕ್ತ ಗೊಬ್ಬರಗಳನ್ನು ಬಳಸುತ್ತಿರುವುದಾಗಿ ಪ್ರಭಾಕರ್ ಅವರ ಸಹೋದರ ಸುರೇಶ್ ತಿಳಿಸಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ 15 ಕೆಜಿ ತೂಕದ ಟೊಮೆಟೊ ಬಾಕ್ಸ್ ಅನ್ನು 800 ರೂಪಾಯಿಗೆ ಮಾರಾಟ ಮಾಡಿರುವುದಾಗಿ ನೆನಪಿಸಿಕೊಂಡಿದ್ದಾರೆ.
ನಾವು ಈ ಬಾರಿ 2.5 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದೇವು. ಇದಕ್ಕಾಗಿ ಪ್ರತಿ ಎಕರೆಗೆ 2.5 ಲಕ್ಷ ರೂಪಾಯಿ ವ್ಯಯಿಸಿದ್ದೇವು. 2.5 ಎಕರೆ ಪ್ರದೇಶದಲ್ಲಿ ನಮಗೆ 300 ಬಾಕ್ಸ್ ಗಳಷ್ಟು ಟೊಮೆಟೊ ಬೆಳೆಯುತ್ತಿತ್ತು. ಆದರೆ ಈ ಬಾರಿ ನಮಗೆ ಸಿಕ್ಕಿದ್ದು ಕೇವಲ 90 ಬಾಕ್ಸ್ ಗಳು. ಹೀಗಾಗಿ ಒಟ್ಟು 40 ಎಕರೆಯಲ್ಲಿ 2,000 ಬಾಕ್ಸ್ ಗಳಷ್ಟು ಟೊಮೆಟೊ ಸಿಕ್ಕಿರುವುದಾಗಿ ಸುರೇಶ್ ಹೇಳಿದರು.
ಇಡೀ ದೇಶದಲ್ಲಿ ಕೋಲಾರ ಎಪಿಎಂಸಿ ಟೊಮೆಟೊ ಮಾರಾಟದ ಎರಡನೇ ಅತೀ ದೊಡ್ಡ ಮಾರುಕಟ್ಟೆ ಮಾರುಕಟ್ಟೆಯಾಗಿದೆ. ಕೋಲಾರ ಮಾರುಕಟ್ಟೆಯಿಂದ ಪ್ರತಿದಿನ 8,000 ಮೆಟ್ರಿಕ್ ಟನ್ ಗಳಷ್ಟು ಟೊಮೆಟೊವನ್ನು ಸರಬರಾಜು ಮಾಡುತ್ತಿದ್ದೇವು. ಆದರೆ ಈಗ ಕೇವಲ 1,000 ಮೆಟ್ರಿಕ್ ಟನ್ ಟೊಮೆಟೊಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಎಪಿಎಂಸಿ ಮಾರುಕಟ್ಟೆ ವ್ಯಾಪಾರಿ ಸುಧಾಕರ್ ತಿಳಿಸಿದ್ದಾರೆ.
ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ ಟೊಮೆಟೊ ಕಳ್ಳತನದ ಪ್ರಕರಣ ಕೂಡಾ ವರದಿಯಾಗುತ್ತಿದೆ. ಆ ನಿಟ್ಟಿನಲ್ಲಿ ಕೋಲಾರದಲ್ಲಿಯೂ ಟೊಮೆಟೊ ಬೆಳೆಗಾರರು ತಮ್ಮ ಹೊಲದ ಸುತ್ತ 24×7 ಕಾವಲು ಕಾಯಲಾಗುತ್ತಿದೆ ಎಂದು ವರದಿ ಹೇಳಿದೆ.