Advertisement
ಕೋವಿಡ್ 19 ನ ಆರಂಭದಲ್ಲಿ ಜಿಲ್ಲಾಡಳಿತ ಮತ್ತು ಸರಕಾರದ ಆದೇಶದಂತೆ ಸ್ಥಳೀಯ ಪಂಚಾಯತ್ ಅಧ್ಯಕ್ಷ ನಾರಾಯಣ ಪೂಜಾರಿ ನೇತೃತ್ವದಲ್ಲಿ ಪೋಲೀಸರ ಮತ್ತು ಅರಣ್ಯ ಇಲಾಖೆಯ ಸಹಕಾರದಿಂದ ರಸ್ತೆಯನ್ನು ಬಂದ್ ಮಾಡಲಾಗಿತ್ತು.ಇದೀಗ ಅಧ್ಯಕ್ಷರ ಕಾರ್ಯವಧಿ ಮುಗಿದಿರುವುದರಿಂದ ರಸ್ತೆಯನ್ನು ತೆರವುಗೊಳಿಸುವುವವರಾರು? ಎಂಬ ಪ್ರಶ್ನೆ ಉದ್ಬವಿಸಿದೆ.
Related Articles
Advertisement
ಜವಾಬ್ದಾರಿ ಮರೆತ ಸ್ಥಳೀಯಾಡಳಿತ ?ಈ ರಸ್ತೆಯ ಎರಡು ಕಡೆ ರಸ್ತೆ ಅಡ್ಡವಾಗಿ ಸುಮಾರು 6ಅಡಿ ಆಳದ ಕಂದಕವನ್ನು ತೆಗೆದು ಅಂತರ್ ರಾಜ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.ಎರಡು ಕಡೆ ತೆಗೆದ ಕಂದಕಗಳು ಹಾಗೆಯೇ ಇದೆ.ಈ ರಸ್ತೆಯನ್ನು ಅವಲಂಬಿತವಾಗಿರುವ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಹಲವು ಜನರು ವಾಹನಗಳಲ್ಲಿ ಪ್ರಯಾಣಿಸಲಾಗದೆ ಪರದಾಡುತ್ತಿದ್ದಾರೆ.ಜಾಂಬ್ರಿ ಪ್ರದೇಶಕ್ಕೆ ಬರುವ ಪ್ರವಾಸಿಗರು ಕಂದಕದ ವರೆಗೆ ಬಂದು ಮುಂದೆ ಚಲಿಸಲಾಗದೇ , ಪ್ರೇಕ್ಷಣೀಯ ಸ್ಥಳವನ್ನು ವೀಕ್ಷಿಸಲಾಗದೇ ಹಿಂದಿರುತ್ತಿದ್ದಾರೆ.ಕಂದಕ ತೆಗೆಯುವಾಗ ಇದ್ದ ಕರ್ತವ್ಯ ಪ್ರಜೆÒ,ಮುತುವರ್ಜಿ ಸ್ಥಳೀಯಾಡಳಿತ ಮತ್ತು ಇಲಾಖೆಗೆ ಯಾಕಿಲ್ಲ ? ಎಂದು ಜನರಾಡಿಕೊಳ್ಳುತ್ತಿದ್ದಾರೆ. ತೆರವು ಕಾರ್ಯ ನಡೆಯದೇ ಗಡಿಭಾಗದ ಜನರಿಗೆ ಅನ್ಯಾಯವಾಗಿದೆ. ಪಾಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಆಡಳಿತಾಧಿಕಾರಿ ಯಶಸ್ ಮಂಜುನಾಥ ರವರು ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆ ಮಾತನಾಡಿ ಎರಡು ದಿನದಲ್ಲಿ ಮುಚ್ಚಿಸುವ ಭರವಸೆ ನೀಡಿದ್ದಾರೆ. ಆರ್ಲಪದವು-ಕಡಂದೇಲು-ಗಿಳಿಯಾಲು-ಕೇರಳ ಸಂಪರ್ಕಿಸುವ ರಸ್ತೆಯ ಬಗ್ಗೆ ಲೋಕೋಪಯೋಗಿ ಇಲಾಖೆಯವರ ಜೊತೆ ಮಾತನಾಡಿ ತೆರವು ಕಾರ್ಯಕ್ಕೆ ಕ್ರಮಕೈಗೊಳ್ಳಲಾಗುವುದು.
– ನವೀನ್ ಭಂಡಾರಿ,ತಾಲೂಕು ಕಾರ್ಯನಿರ್ವಹಣಾಧಿಕಾರಿ,ಪುತ್ತೂರು ಕಳೆದ ಸುಮಾರು 6 ತಿಂಗಳಿನಿಂದ ರಸ್ತೆಯನ್ನು ಬಂದ್ ಮಾಡಲಾಗಿದೆ.ಅಂತರ್ ರಾಜ್ಯ ರಸ್ತೆ ಮುಕ್ತ ಅವಕಾಶ ನೀಡಿದರೂ ನಮಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ.ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನಹರಿಸಿ ತೆಗೆದ ಕಂದಕಗಳಿಗೆ ಮಣ್ಣು ಮುಚ್ಚಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ.
– ಜಿ.ಮಹಾಬಲೇಶ್ವರ ಭಟ್ ಗಿಳಿಯಾಲು,ಪಾಣಾಜೆ ದಿನನಿತ್ಯದ ವಸ್ತುಗಳಿಗೆ ಆರ್ಲಪದವು ಪೇಟೆಯನ್ನು ಅವಲಂಬಿಸಿದ್ದಾನೆ.ಕರ್ನಾಟಕ ಪ್ರದೇಶದಲ್ಲಿ ಎರಡು ಕಡೆ ರಸ್ತೆಯನ್ನು ಬಂದ್ ಮಾಡಿರುವುದರಿಂದ ಆರ್ಲಪದವಿಗೆ ಬರಬೇಕಾದರೆ ಸುತ್ತಿ ಬಳಸಿ ಸಂಚಾರಿಸುತ್ತಿದ್ದಾನೆ.ಇದರಿಂದ ಸಮಯ ಮತ್ತು ಇಂಧನದ ಅಪ ವ್ಯಯವಾಗುತ್ತಿದೆ.ಕೂಡಲೇ ಮಣ್ಣು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು
– ಸಂತೋಷ್,ಕಿನ್ನಿಂಗಾರು,ನೆಟ್ಟಣಿಗೆ