Advertisement
ಮುಂಗಾರು ನಿರ್ಗಮನ ಸಮೀಪಿಸಿದ್ದು, ಮಹಾ ರಾಷ್ಟ್ರದ ಪಶ್ಚಿಮ ಭಾಗಗಳಲ್ಲಿ ಮುಂದಿನ 2-3 ದಿನ ಗುಡುಗು -ಮಿಂಚು ಸಹಿತ ಮಳೆಯಾಗಲಿದ್ದರೆ, ಅರಬಿ ಸಮುದ್ರ ಹಾಗೂ ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡದಿಂದಾಗಿ ಕೊಂಕಣ ಗೋವಾ ಹಾಗೂ ಮಧ್ಯ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ.
ಹಸ್ತಾ ನಕ್ಷತ್ರದಲ್ಲಿ ಕೆಲವು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಮಳೆ ಬಿಡುವು ನೀಡಿದ ವೇಳೆ ಉಗ್ರ ಬಿಸಿಲು ಕೂಡ ಇರುವುದರಿಂದ ಕೃಷಿಗೆ ಈ ಮಳೆ ತೊಂದರೆ ನೀಡುವ ಸಾಧ್ಯತೆಯೇ ಅಧಿಕ. ಅದರಲ್ಲೂ ಹಲವೆಡೆ ವಿಳಂಬ ನಾಟಿಯಿಂದಾಗಿ ಭತ್ತದ ಗದ್ದೆಗಳು ಈಗ ಹೂಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದ್ದು, ಮಳೆ-ಬಿಸಿಲಿನಿಂದಾಗಿ ಕಾಳುಗಳು ಜೊಳ್ಳಾಗುವ ಸಾಧ್ಯತೆಯಿದೆ.