Advertisement
ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹಮ್ಮಿಕೊಂಡಿರುವ ರಾಜ್ಯಮಟ್ಟದ 89ನೇ “ಮೆಡಿಕಾನ್ ಸಮ್ಮೇಳನ’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ತಮಿಳುನಾಡು ಬಳಿಕ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸಾರ್ವಜನಿಕರಿಗೆ ಸಾಮಾನ್ಯ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಸರಕಾರ ಹಿಂದಿನಿಂದಲೂ ಕ್ರಮ ವಹಿಸಿದೆ. ಹಾಗಾಗಿ ಇಂದು ನಮ್ಮ ರಾಜ್ಯ ಎರಡು ಕ್ಷೇತ್ರದಲ್ಲಿ ಲೀಡರ್ ಎನಿಸಿಕೊಳ್ಳುತ್ತಿದೆ ಎಂದರು.
ಹತ್ತು ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳ ಅನುಪಾತದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಬೇಕೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ರೂಪಿಸಿರುವ ಹೊಸ ಷರತ್ತು ಪ್ರಗತಿ ವಿರೋಧಿ ಧೋರಣೆಯಾಗಿದೆ. ಕರ್ನಾಟಕ ಸಹಿತ ದಕ್ಷಿಣ ಭಾರತದ ರಾಜ್ಯಗಳಲ್ಲಿ ವೈದ್ಯ ಶಿಕ್ಷಣ ತುಂಬಾ ಪ್ರಗತಿ ಸಾಧಿ ಸುತ್ತ ಹೊರಟಿರುವಾಗ ಇಂತಹ ನಿಯಮ ಜಾರಿಯಾದಲ್ಲಿ ಈ ಪ್ರದೇಶದಲ್ಲಿ ವೈದ್ಯ ಶಿಕ್ಷಣದ ಪ್ರಗತಿಗೆ ಪೆಟ್ಟು ಬೀಳಲಿದೆ. ವೈದ್ಯ ಶಿಕ್ಷಣ ಕೇಂದ್ರ ಹಾಗೂ ರಾಜ್ಯದ ಪಟ್ಟಿಯಲ್ಲಿರುವುದರಿಂದ ಇಂತಹ ಯಾವುದೇ ನಿಯಮಗಳನ್ನು ರೂಪಿಸುವ ಮುನ್ನ ರಾಜ್ಯಗಳ ಅಭಿಪ್ರಾಯ ಆಲಿಸುವುದು ವಾಡಿಕೆ. ಆದರೆ ಎನ್‌ಎಂಸಿ ಯಾರ ಅಭಿಪ್ರಾಯವನ್ನೂ ಕೇಳದೆ ಇಂತಹ ಪ್ರತಿಗಾಮಿ ಧೋರಣೆಯ ಷರತ್ತು ರೂಪಿಸಿ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿ ದರು.
Related Articles
ಔಷಧಗಳ ಆಮದು ಅವಲಂಬನೆ ಕಡಿಮೆ ಮಾಡಲು ದೇಶದಲ್ಲೇ ಔಷಧಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ 80 ಕ್ರಿಟಿಕಲ್ ಔಷಧಗಳ ಉತ್ಪಾದನೆ ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಔಷಧ ವಿಷಯದಲ್ಲಿ ವಿದೇಶಗಳ ಮೇಲೆ ಹೆಚ್ಚು ಅವಲಂಬನೆ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾದರೆ ದೇಶಿಯವಾ ಗಿ ಉತ್ಪಾದನೆ ಹೆಚ್ಚಿಸುವುದು ಅಗತ್ಯ ಎಂದರು.
Advertisement
ಆರೋಗ್ಯ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಈ ಹಿಂದೆ ದೇಶದಲ್ಲಿ ಶ್ರೀಮಂತರು ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಹೋಗುತ್ತಿದ್ದರು. ಆದರಿಂದು ಭಾರತದಲ್ಲಿ ಹೊಸ ತಂತ್ರಜ್ಞಾನದಿಂದ ವೈದ್ಯ ಕ್ಷೇತ್ರದಲ್ಲಿ ಪರಿವರ್ತನೆಯಾಗಿದೆ. ಹಾಗಾಗಿ ವಿದೇಶಿ ಪ್ರಜೆಗಳೇ ಚಿಕಿತ್ಸೆಗಾಗಿ ಇಂದು ನಮ್ಮ ರಾಷ್ಟ್ರಕ್ಕೆ ಬರುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ಒದಗಿಸುವ ದಿಸೆಯಲ್ಲಿ ಪೂರಕವಾಗಿ ಮೂಲ ಸೌರ್ಯಗಳ ಅಭಿವೃದ್ಧಿಗೆ ಸರಕಾರ ಹೆಜ್ಜೆಯನ್ನಿಟ್ಟಿದೆ ಎಂದರು.