Advertisement
ಕೆಎಚ್‌ಬಿ ಮನೆಗಳನ್ನು ನಿರ್ಮಿಸುವ ಬದಲು ನಿವೇಶನಗಳ ರಚನೆ ಮತ್ತು ಹಂಚಿಕೆಗೆ ಹೆಚ್ಚು ಗಮನ ಹರಿಸುತ್ತಿದೆ. ಅನೇಕ ಸೈಟ್ ಹಂಚಿಕೆದಾರರು ತಮ್ಮ ನಿವೇಶನಗಳಲ್ಲಿ ನಿಗದಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸುವ ಬದಲು ಹೂಡಿಕೆಯಾಗಿ ಇಟ್ಟುಕೊಳ್ಳುತ್ತಾರೆ. ನಿವೇಶನಗಳನ್ನು ಖಾಲಿ ಇಡುವುದನ್ನು ತಡೆಯುವುದು ಮತ್ತು ವಿಳಂಬವಿಲ್ಲದೆ ಮನೆ ನಿರ್ಮಿಸಲು ಹಂಚಿಕೆದಾರರನ್ನು ಪ್ರೇರೇಪಿಸಲು ಎರಡು ಕ್ರಮಗಳನ್ನು ಶಿಫಾರಸು ಮಾಡಿದೆ.
Related Articles
Advertisement
ಬಡಾವಣೆಗಳಿಗೆ ಮೂಲಸೌಕರ್ಯ: ಇನ್ನು ಪ್ರತಿ ನಿವೇಶನ ರಚನೆಗೆ ಎಕರೆಗೆ 3200 ರೂ.ಗಳನ್ನು ವಸತಿ ಇಲಾಖೆಯು ಏಜೆನ್ಸಿಗಳಿಗೆ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕರೂಪದ ದರವಿದೆ. ರಸ್ತೆ, ಚರಂಡಿ ಗಡಿ ಗುರುತು ಇತ್ಯಾದಿ ಮೂಲಸೌಕರ್ಯ ಒದಗಿಸಿ ನಿವೇಶನ ರಚಿಸಲು ಎಕರೆಗೆ 5 ಲಕ್ಷ ರೂ. ವರೆಗೆ ಹೆಚ್ಚಿಸಬಹುದು. ಶೇ.80ರಷ್ಟು ಮನೆಗಳ ನಿರ್ಮಾಣದ ನಂತರ ಬಡಾವಣೆಗೆ ನೀರು ಸರಬರಾಜು, ವಿದ್ಯುತ್ ಪೂರೈಕೆ, ಚರಂಡಿ ಇತ್ಯಾದಿಗಳನ್ನು ಮಾಡುವ ಬದಲು ಶೇ.40 ಅಥವಾ 50ರಷ್ಟು ಮನೆಗಳ ನಿರ್ಮಾಣವಾದ ಕೂಡಲೇ ಒದಗಿಸುವುದು ಸೂಕ್ತ.
ವಸತಿ ನಿವೇಶನ, ಮನೆಗಳ ಸಮೀಕ್ಷೆ: ಡಾ.ಬಿ.ಆರ್.ಅಂಬೇಡ್ಕರ್ ಸೇರಿ ವಿವಿಧ ವಸತಿ ಯೋಜನೆಗಳಡಿ ಹಂಚಿಕೆಯಾಗಿ ಖಾಲಿ ಇರುವ ಕೆಲ ಮನೆ, ನಿವೇಶನಗಳನ್ನು ಫಲಾನುಭವಿಗಳಲ್ಲದವರು ಅತಿಕ್ರಮಿಸಿಕೊಂಡಿದ್ದಾರೆ. ಕೆಲವೆಡೆ ಮಾಲೀಕತ್ವ ಪಡೆಯುವ ಮುನ್ನ ಹಂಚಿಕೆದಾರರೇ ಬಾಡಿಗೆ ಇತ್ಯಾದಿ ರೂಪದಲ್ಲಿ ಕೊಟ್ಟಿರುವುದೂ ಇದೆ. ಗ್ರಾಪಂಗಳ ಮೂಲಕ ಗ್ರಾಮೀಣ ಪ್ರದೇಶದ ಮಾಹಿತಿ ಪಡೆದು, ನಗರ ಪ್ರದೇಶದಲ್ಲಿ ಏಜೆನ್ಸಿ ಮೂಲಕ ನಿವೇಶನ ಮತ್ತು ಮನೆಗಳ ಸಮೀಕ್ಷೆ ನಡೆಸಬೇಕು. ಅನರ್ಹರಿಗೆ ಹಂಚಿಕೆಯಾಗಿರುವ ನಿವೇಶನ, ಮನೆಗಳನ್ನು ರದ್ದುಪಡಿಸಬೇಕು. ಅರ್ಹರಿಗೆ ಮಂಜೂರು ಮಾಡಲು ವಿಶೇಷ ಅಭಿಯಾನ ನಡೆಸಬೇಕು.ಅತಿಕ್ರಮಿಸಿಕೊಂಡವರಿಂದ ಹಿಂಪಡೆದು, ಕಾನೂನು ಕ್ರಮ ಜರುಗಿಸಬಹುದು. “ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್ ಮಾಡಬೇಕು: ರಾಜೀವಗಾಂಧಿ ವಸತಿ ನಿಗಮವು ಪ್ರತಿ ಫಲಾನುಭವಿಯ ಆಧಾರ್ ಸಂಖ್ಯೆ ಪಡೆದು ಸರ್ಕಾರದ “ಕುಟುಂಬ’ ಡೇಟಾಬೇಸ್‌ಗೆ ಅಪ್‌ಲೋಡ್ ಮಾಡುತ್ತದೆ. ಆದರೆ, ಗೃಹ ಮಂಡಳಿಯಾಗಲೀ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಾಗಲೀ ಈ ಕೆಲಸ ಮಾಡದಿರುವುದರಿಂದ ಒಬ್ಬರಿಗೇ ಎರಡು ಯೋಜನೆಗಳ ಫಲ ಸಿಗುವ ಅಪಾಯವಿದ್ದು, ಅನರ್ಹ ಹಂಚಿಕೆದಾರರಿಗೂ ಸೌಲಭ್ಯ ವಿತರಣೆ ಆಗುತ್ತದೆ. ಇದನ್ನು ಸರಿಪಡಿಸಲು ಪ್ರತಿ ನಿವೇಶನ ಮತ್ತು ಮನೆಯ ಹಂಚಿಕೆದಾರರ ಆಧಾರ್ ವಿಲೀನಗೊಳಿಸಬೇಕು. ಅದನ್ನು ಕುಟುಂಬ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇ-ಖಾತಾ, ಇ-ಸ್ವತ್ತು, ಬಿಬಿಎಂಪಿ, ಬಿಡಿಎಗಳ ಖಾತಾ ಡೇಟಾಬೇಸ್‌ಗಳಿಗೂ ವಿಲೀನಗೊಳಿಸಬೇಕೆಂದು ಶಿಫಾರಸು ಮಾಡಿದೆ. 2.16 ಲಕ್ಷ ಕುಟುಂಬಗಳಿಗೆ ಸಿಕ್ಕೇ ಇಲ್ಲ ಹಕ್ಕುಪತ್ರ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ)ಯು ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿಯಲ್ಲಿ 1,821 ಘೋಷಿತ ಕೊಳೆಗೇರಿಗಳನ್ನು ಗುರುತಿಸಿದ್ದು, ಇಲ್ಲಿನ 3.36 ಲಕ್ಷ ಕುಟುಂಬಗಳ ಪೈಕಿ 1.20 ಲಕ್ಷ ಕುಟುಂಬಗಳು ಮಾತ್ರ ಹಕ್ಕುಪತ್ರ ಪಡೆದಿವೆಯಾದರೂ ಇನ್ನೂ 2,16 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ, ಒಂದೆರಡು ವರ್ಷಗಳಲ್ಲಿ ಹಕ್ಕುಪತ್ರ ನೀಡಬೇಕೆಂದು ಶಿಫಾರಸು ಮಾಡಿದೆ. ಮಂಡಳಿಯ ಜಮೀನು ಅತಿಕ್ರಮಿಸಿದವರಿಗೆ ಆ ಭೂಮಿಯ ಮಾರ್ಗಸೂಚಿ ಮೌಲ್ಯದ ಶೇಕಡಾವಾರು ದಂಡ ವಿಧಿಸಬಹುದು. ಅನಧಿಕೃತ ಸಾಗುವಳಿ ಮಾಡಿದರೆ 5 ಸಾವಿರ ರೂ.ಗಳಿಂದ 48 ಸಾವಿರ ರೂ.ವರೆಗೆ ದಂಡ, ನೋಟಿಸ್ ಅಥವಾ ನಿರ್ದೇಶನ ಉಲ್ಲಂ ಸಿದರೆ 36 ಸಾವಿರ ರೂ.ಗಳಿಂದ 72 ಸಾವಿರ ರೂ.ವರೆಗೆ ದಂಡ, ಅತಿಕ್ರಮ ತೆರವುಗೊಳಿಸುವ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ 35 ಸಾವಿರ ರೂ. ದಂಡ ವಿಧಿಸಲು ಶಿಫಾರಸು ಮಾಡಿದೆ.