Advertisement
ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟಕ್ಕೆಸೇರಿಸಿಕೊಳ್ಳಬಾರದು ಎಂಬ ವಿಚಾರದಲ್ಲಿ ಪಟ್ಟು ಸಡಿಲಿಸದೆ ಒತ್ತಡ ತಂತ್ರ ಮುಂದು ವರಿಸಲು ಕೆಲವು ಮೂಲ ಬಿಜೆಪಿಗರು ತೀರ್ಮಾನಿಸಿದ್ದಾರೆ. ಸೋತವರಿಗೆ ಅವ ಕಾಶ ಕೊಡುವುದಾದರೆ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ್ ಅವರಿಗೂ ಪರಿಷತ್ ಸದಸ್ಯರನ್ನಾಗಿಸಿ ಸಂಪುಟದಲ್ಲಿ ಅವಕಾಶ ಕೊಡಿ ಎಂಬ ಹೊಸ ವರಸೆ ಆರಂಭಿಸಿದ್ದಾರೆ.
ಇದೇ ವಿಚಾರವಾಗಿ ಹಲವು ಸಚಿವರು, ಶಾಸಕರು ಶುಕ್ರವಾರ ರಾತ್ರಿ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದಾರೆ. ಇದಕ್ಕೆ ಬಹಿರಂಗ ವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ, ಈ ರೀತಿಯ ಸಭೆ ನಡೆಸುವುದು ತಪ್ಪು ಎಂದು ಖಾರವಾಗಿ ಹೇಳಿದ್ದಾರೆ. ಇದು ಬಿಜೆಪಿ ಸೇರಿ ವರ್ಷ ಕಳೆಯುವ ಹೊತ್ತಿನಲ್ಲೇ ವಲಸಿಗರಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಮಾತಿಗೆ ಪುಷ್ಟಿ ನೀಡಿದೆ.
Related Articles
Advertisement
ಈ ಮಧ್ಯೆ ಸಚಿವ ಸ್ಥಾನ ಹಂಚಿಕೆ ವಿಳಂಬವಾಗುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸೋತವರಿಗೆ ಸಚಿವ ಸ್ಥಾನ ಬೇಡವೆನ್ನುತ್ತಿರುವ ಶಾಸಕರ ಬಗ್ಗೆ ಪ್ರಸ್ತಾವಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಯಾಕೋ ವಿವಾದ ತನ್ನ ಬೆನ್ನು ಹಿಡಿದಿದೆ ಎಂದು ಬೇಸರದಿಂದ ನುಡಿದಿದ್ದಾರೆ.
ಯೋಗೇಶ್ವರ್‌ಗೆ ಸಚಿವ ಸ್ಥಾನ ಕೊಡಿಸಲು ಕಸರತ್ತು ನಡೆದಿರುವ ಬಗ್ಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ರಾಜುಗೌಡ, ಸೋತ ಇತರರಿಗೂ ಸಚಿವ ಸ್ಥಾನ ಕೊಡುವುದ ಸೂಕ್ತ ಎಂಬುದಾಗಿ ಹೊಸ ವರಸೆ ಆರಂಭಿಸಿದ್ದಾರೆ. “ಯೋಗೇಶ್ವರ್ ಮೇಲೆ ಜಾರಕಿಹೊಳಿಗೆ ಪ್ರೀತಿ ಇದೆಯೇ ಎಂದು ಗೊತ್ತಿಲ್ಲ. ಎಚ್.ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಬೇಸರವಿಲ್ಲ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಬಾರದು ಎಂದು ನೇರವಾಗಿಯೇ ಹೇಳಿದ್ದೇನೆ. ಆದರೆ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದರೆ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್‌ಗೂ ನೀಡಲಿ ಎಂದರು.
ಬಿಎಸ್‌ವೈಗೆ ಜಾರಕಿಹೊಳಿ ಮಾಹಿತಿದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರು ಶನಿವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ದಿಲ್ಲಿಯಿಂದ ವಾಪಸಾದ ಜಾರಕಿಹೊಳಿ ಶನಿವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು “ಕಾವೇರಿ’ ನಿವಾಸದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ದಿಲ್ಲಿಯಲ್ಲಿ ವರಿಷ್ಠರೊಂದಿಗಿನ ಸಮಾಲೋಚನೆ ಮತ್ತಿತರ ವಿಚಾರಗಳ ಬಗ್ಗೆಯೂ ವಿವರಿಸಿದ್ದಾರೆ ಎನ್ನಲಾಗಿದೆ. ಅನಂತರ ಸದಾಶಿವನಗರದ ನಿವಾಸದಲ್ಲಿ ಜಾರಕಿಹೊಳಿ ಅವರನ್ನು ಭೇಟಿ ಯಾದ ಎಂ.ಟಿ.ಬಿ. ನಾಗರಾಜ್ ಸ್ವಲ್ಪ ಹೊತ್ತು ಚರ್ಚಿಸಿದರು. ಬಳಿಕ ಪ್ರತಿಕ್ರಿಯಿಸಿದ ಎಂ.ಟಿ.ಬಿ. ನಾಗರಾಜ್, ನಮಗೆ ಯಾರ ಮೇಲೂ ಅಸಮಾಧಾನವಿಲ್ಲ. ಜಾರಕಿಹೊಳಿ ಬಗ್ಗೆಯೂ ಬೇಸರವಿಲ್ಲ. ಸಚಿವ ಸ್ಥಾನ ನೀಡುವುದಾಗಿ ಸಿಎಂ ಹೇಳುತ್ತಲೇ ಇದ್ದಾರೆ. ಆದರೆ ಈ ವರೆಗೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾವು 17 ಮಂದಿ ಒಟ್ಟಾಗಿಯೇ ಇದ್ದೇವೆ ಎಂದರು. ನನಗೆ ನಲುವತ್ತು ವರ್ಷಗಳ ರಾಜಕೀಯ ಅನುಭವವಿದೆ. ನನ್ನ ಅನುಭವ ಪರಿಗಣಿಸಿ ಸಚಿವ ಸ್ಥಾನ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆಯೇ ವಿನಾ ಸಚಿವ ಸ್ಥಾನಕ್ಕಾಗಿ ದಿಲ್ಲಿಗೆ ಅಲೆಯುವುದಿಲ್ಲ
-ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್, ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಂದು ಸಚಿವರಾಗಿ ಒಂದು ವರ್ಷವಾಗಿದೆ. ಅವರನ್ನು ವಲಸಿಗರು ಎಂದು ಕರೆಯಬೇಡಿ. ಅವರೆಲ್ಲ ಬಿಜೆಪಿಗೆ ಸೇರಿ ಶಕ್ತಿ ತುಂಬಿದ್ದಾರೆ.
-ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ