ಕುಷ್ಟಗಿ: ಮಾರ್ಚ್ 22 ರಂದು ಕುಷ್ಟಗಿಗೆ ಪ್ರಪ್ರಥಮ ಬಾರಿಗೆ ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಅಗಮಿಸಲಿದ್ದಾರೆ.
ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಸಮೀಪದ ವಜ್ರಬಂಡಿ ಕ್ರಾಸ್ ನಲ್ಲಿರುವ ಅಮರೇಶ್ವರ ಮಹಾದೇವ ಮಠದ ನಾಗಾಸಾದು ಆಶ್ರಮದಲ್ಲಿ ನಿರ್ಮಾಣಗೊಂಡ ಪಂಚಮುಖಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಲಿದ್ದಾರೆ. ಮಾರ್ಚ್ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮಧ್ಯಾಹ್ನ 2 ಕ್ಕೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಉದಯವಾಣಿ ಗೆ ಲಭ್ಯವಾಗಿದೆ.
ಕುಷ್ಟಗಿ ತಾಲೂಕಿನ ಇತಿಹಾಸದಲ್ಲಿ ರಾಜ್ಯಪಾಲರೊಬ್ವರು ಕುಷ್ಟಗಿ ಆಗಮಿಸುತ್ತಿರುವುದು ಇದೇ ಮೊದಲು ಎನ್ನುವ ಗರಿಮೆಗೆ ಕುಷ್ಟಗಿ ಪಾತ್ರ ಆಗಲಿದೆ ಎಂದರು.
ಮಾರ್ಚ13ರಂದು ಕುಷ್ಟಗಿ ವಜ್ರಬಂಡಿ ಕ್ರಾಸ್ ಅಮರನಾಥೇಶ್ವರ ಮಠದ ಮಹಂತ ಸಹದೇವಾನಂದ ಗಿರೀಜಿ ಮಹಾರಾಜ್ ಅವರು, ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಿ ಪಂಚಮುಖಿ ದೇವಸ್ಥಾನ ಕ್ಕೆ ಆಗಮಿಸುವ ಮಾಹಿತಿ ಇದೆ.
ಇದನ್ನೂ ಓದಿ: ಕೇರಳದ ಲಿಂಕ್; ಕಾಶ್ಮೀರದಲ್ಲಿ ಐಸಿಸ್ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ