Advertisement
ಕರ್ನಾಟಕದ ಪಾಲಿಗಂತೂ ಸತತ ನಾಲ್ಕನೇ ವರ್ಷ ವರುಣನ ಮುನಿಸು ಮುಂದುವರಿದಂತಾಗಿದೆ. ಸದ್ಯಕ್ಕೆ 17 ರಾಜ್ಯಗಳ 225 ಜಿಲ್ಲೆಗಳಲ್ಲಿ ಬರಗಾಲ ಕಾಣಿಸಿಕೊಳ್ಳಲಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ಮತ್ತು ಬರಗಾಲ ಪರಿಶೀಲನಾ ವ್ಯವಸ್ಥೆ ಎಚ್ಚರಿಸಿದೆ. ಬೇಸಿಗೆ ಆಗಮಿಸಿದಂತೆ ಬರಪೀಡಿತವಾಗುವ ಜಿಲ್ಲೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅದರಲ್ಲೂ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಬರದ ಹೊಡೆತಕ್ಕೆ ಗುರಿಯಾಗಲಿವೆ ಎನ್ನುವುದು ಹೆಚ್ಚು ಕಳವಳಕಾರಿ ವಿಚಾರ.
ಲೆಕ್ಕ ಹಾಕಿದರು. ಇದೀಗ ಇದೇ ಪ್ರಹಸನ ಈ ವರ್ಷವೂ ಪುನರಾವರ್ತ ನೆಯಾಗುವ ಸಾಧ್ಯತೆಯಿದೆ. ಇದು ಚುನಾವಣಾ ವರ್ಷವೂ ಆಗಿರುವು ದರಿಂದ ಬರದ ಮೇಲಿನ ರಾಜಕೀಯ ಕೆಸರೆರಚಾಟ ಜೋರಾಗಿಯೇ ನಡೆಯಬಹುದು. ಬರ ಎಲ್ಲರನ್ನೂ ಕಾಡಿದರೂ ಹೆಚ್ಚು ಹೊಡೆತ ನೀಡುವುದು ರೈತ ಸಮುದಾಯಕ್ಕೆ. ಈ ಸಮುದಾಯ ಉಳಿದೆಲ್ಲ ಜನವರ್ಗಗಳ ತಳಪಾಯ ಇದ್ದ ಹಾಗೆ. ಇದು ತನಕ ರೈತ ಸಮುದಾಯಕ್ಕೆ ಸತತ ಉಂಟಾಗುತ್ತಿರುವ ಬರದ ಬಾಧೆಯ ಪರಿಣಾಮ ಉಳಿದ ಜನವರ್ಗಗಳನ್ನು ಅಷ್ಟಾಗಿ ತಟ್ಟಿಲ್ಲ. ಆದರೆ ಇಂದಲ್ಲ ನಾಳೆಯಾದರೂ ಅದು ಆಹಾರ ಕ್ಷಾಮ, ಬೆಲೆಯೇರಿಕೆಯಂತಹ ಪರಿಣಾಮಗಳ ಮೂಲಕ ಸಮಾಜದ ಇತರ ಸಮುದಾಯಗಳನ್ನೂ ತೀವ್ರವಾಗಿ ತಟ್ಟುವುದು ಶತಸ್ಸಿದ್ಧ. ಕೃಷಿಯಿಂದ ದೇಶದ ಜಿಡಿಪಿಗೆ ಈಗ ಭಾರೀ ಎನ್ನಬಹುದಾದ ಯೋಗದಾನ ಇಲ್ಲದಿದ್ದರೂ, ಈಗಲೂ ಅತ್ಯಧಿಕ ಜನರಿಗೆ ಉದ್ಯೋಗ ನೀಡುತ್ತಿರುವುದು
ಕೃಷಿ ಕ್ಷೇತ್ರ ಮತ್ತು ಕೃಷಿ ಸಂಬಂಧಿ ಉದ್ಯಮಗಳು. ಬರದಿಂದಾಗಿ ಬೆಳೆ ವಿಫಲವಾದರೆ ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾಗುತ್ತಾರೆ ಹಾಗೂ ಇದರಿಂದ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ.
Related Articles
Advertisement
ಆದರೆ ಪ್ರತಿ ವರ್ಷ ಆಹಾರ ಧಾನ್ಯಗಳಿಗಾಗಿ ವಿದೇಶಗಳ ಅವಲಂಬನೆ ಆರ್ಥಿಕವಾಗಿ ಮಾತ್ರವಲ್ಲದೆ ದೇಶದ ಒಟ್ಟು ಹಿತಾಸಕ್ತಿಯಿಂದಲೂ ಸರಿಯಾದ ನಡೆಯಲ್ಲ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಬರ ಮಾಮೂಲಾಗುತ್ತಿರುವ ಸಂದರ್ಭದಲ್ಲಿ ಸರಕಾರ ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಶಾಶ್ವತ ಕಾರ್ಯಕ್ರಮಗಳನ್ನುರೂಪಿಸುವತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಂ. ಎಸ್. ಸ್ವಾಮಿನಾಥನ್ ಆಯೋಗ ಮಾಡಿರುವ ಶಿಫಾರಸುಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. *ಸಂಪಾದಕೀಯ