Advertisement
ಸರಿಸುಮಾರು 10 ಸುದ್ದಿವಾಹಿನಿಗಳು ಸಮೀಕ್ಷೆ ನಡೆಸಿದ್ದು, ಕೆಲವು ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದೆ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿವೆ. ಆದರೆ, ಟೈಮ್ಸ್‌ನೌ-ಟುಡೇಸ್ ಚಾಣಕ್ಯ ನಡೆಸಿರುವ ಸಮೀಕ್ಷೆ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ಇದು ಬಿಜೆಪಿಗೆ 120, ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 26 ಮತ್ತು ಇತರೆ 3 ಸ್ಥಾನ ಪಡೆಯಲಿದೆ ಎಂದಿದೆ.
Related Articles
ಈ ಸಮೀಕ್ಷೆಗಳ ಪ್ರಕಾರ ಲಿಂಗಾಯತ ಸಮುದಾಯ ಬಿಜೆಪಿ ಕೈಹಿಡಿದಿದೆ. ಪ್ರತ್ಯೇಕ ಧರ್ಮ ವಿಚಾರ ಈ ಚುನಾವಣೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂದು ಸಮೀಕ್ಷೆ ಹೇಳಿದೆ. ಟುಡೇಸ್ ಚಾಣಕ್ಯದ ಪ್ರಕಾರ ಲಿಂಗಾಯತರಲ್ಲಿ ಶೇ.61ರಷ್ಟು ಬಿಜೆಪಿಗೆ, ಶೇ.20 ರಷ್ಟು ಕಾಂಗ್ರೆಸ್‌ಗೆ ಮತ್ತು ಶೇ.9 ರಷ್ಟು ಜೆಡಿಎಸ್ ಬೆಂಬಲಿಸಿದ್ದಾರೆ. ಹಾಗೆಯೇ ಒಕ್ಕಲಿಗರು ಜೆಡಿಎಸ್ ಬೆನ್ನಿಗೆ ನಿಂತಿದ್ದಾರೆ. ಅಂದರೆ ಶೇ.63 ರಷ್ಟು ದೇವೇಗೌಡರಿಗೆ, ಶೇ.11 ಸಿದ್ದರಾಮಯ್ಯಗೆ, ಶೇ.19 ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮತ ಹಾಕಿರಬಹುದು ಎಂದು ಈ ಸಮೀಕ್ಷೆ ಹೇಳಿದೆ. ಎಸ್‌ಸಿ, ಎಸ್ಟಿ, ಒಬಿಸಿಯ ಬಹುತೇಕ ಮಂದಿ ಬಿಜೆಪಿ ಬೆನ್ನಿಗೆ ನಿಂತಿದ್ದಾರೆ ಎಂದಿದ್ದರೆ, ಕುರುಬ ಮತ್ತು ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆ ಹೋಗಿವೆ ಎಂದು ಈ ಸಮೀಕ್ಷೆ ತಿಳಿಸಿದೆ.
Advertisement
ಜೆಡಿಎಸ್ ಕಿಂಗ್ಮೇಕರ್ಈ ಎಲ್ಲಾ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕಿಂಗ್‌ಮೇಕರ್ ಆಗಲಿದೆ. ಯಾವುದೇ ಪಕ್ಷಗಳು ಸರಳ ಬಹುಮತದ ಬಳಿಗೆ ಸುಳಿಯುವುದಿಲ್ಲ. ಹೀಗಾಗಿ ದೇವೇಗೌಡರೇ ಸರ್ಕಾರ ರಚನೆಯಲ್ಲಿ ನಿರ್ಣಾಯಕರಾಗುತ್ತಾರೆ. ಒಂದು ವೇಳೆ ಬಿಜೆಪಿ ಅಥವಾ ಕಾಂಗ್ರೆಸ್ 105 ರಿಂದ 110ರ ಬಳಿಗೆ ಸುಳಿದಲ್ಲಿ ಪಕ್ಷೇತರರ ಬೆಂಬಲ ಗಿಟ್ಟಿಸಿಕೊಂಡು ಸರ್ಕಾರ ರಚಿಸಬಹುದಾಗಿದೆ.