Advertisement

Karnataka Election 2023: ಕಾಂಗ್ರೆಸ್‌-ಜೆಡಿಎಸ್‌ನಿಂದ ಹಗಲುಗನಸು; ನಿರಾಣಿ

03:47 PM Apr 07, 2023 | Team Udayavani |

ಬಾಗಲಕೋಟೆ: ಕಳೆದ 20 ವರ್ಷಗಳಿಂದ ನನ್ನನ್ನು ಎತ್ತರದ ಸ್ಥಾನಕ್ಕೆ ಏರಿಸಿದ ಬೀಳಗಿ ಜನತೆಯ ಭಾವನೆಗಳಿಗೆ ಸ್ಪಂದಿಸಿ ಜನಪರ ಕೆಲಸ ಮಾಡಿದ ಸಂತೃಪ್ತಿ ನನ್ನಲ್ಲಿದೆ. ನನ್ನ ಎಲ್ಲ ಕನಸುಗಳು ಸಾಕಾರವಾಗಿ ಬೀಳಗಿ ಕ್ಷೇತ್ರ ರಾಜ್ಯದಲ್ಲಿಯೇ ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೇರುವ ಕಾಲ ಸನ್ನಿಹಿತವಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಹನುಮ ಜಯಂತಿಯ ನಿಮಿತ್ತ ತುಳಸಿಗೇರಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ನಂತರ ಅಗಸನಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮ ರೈತರಿಗೆ ನೀರು, ವಿದ್ಯುತ್‌ ಹಾಗೂ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆದ್ಯತೆಯ ಮೇರೆಗೆ ನೀಡಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ನಿಷ್ಪಕ್ಷಪಾತವಾಗಿ ದೊರೆಯುವಂತೆ ಕೆಲಸ ಮಾಡಿದ್ದೇನೆ. ಜಾತಿ, ಮತಗಳ ಬೇಧ ಮರೆತು ಎಲ್ಲ ಸಮಾಜದವರು ನನ್ನನ್ನು ಪ್ರೀತಿಸುವ ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ ಎಂದರು.

ಕಳೆದ 75 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದಿಂದ ವಂಚಿತವಾದ ಅಭಿವೃದ್ಧಿ ಡಬಲ್‌ ಎಂಜಿನ್‌ ಸರ್ಕಾರ ಮಾಡಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಬಲಿಷ್ಟವಾಗುತ್ತಿದೆ. ಜನತೆ ಬಿಜೆಪಿ ಜತೆಗಿದ್ದಾರೆ. ಕಾಂಗ್ರೆಸ್‌ ಜೆಡಿಎಸ್‌ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗಲ್ಲ ಎಂದು ಮುರುಗೇಶ ನಿರಾಣಿ ಹೇಳಿದರು.

ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ಮತ್ತಿಕಟ್ಟಿ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರಾದ ಬಸವರಾಜ ಬನ್ನಿದಿನ್ನಿ, ಡೊಂಗ್ರಿಸಾಬ ನದಾಫ ಮತ್ತು ಬೆಂಬಲಿಗರು ಹಾಗೂ ನೀರಬೂದಿಹಾಳ ಗ್ರಾಮದ ಧರಿಯಪ್ಪ ಕೊಟ್ರನ್ನವರ, ಶೇಖಪ್ಪ ಹೂಲಗೇರಿ ಮತ್ತು ಅಗಸನಕೊಪ್ಪ ಗ್ರಾಮದ ಮಹಿಳಾ ಸಂಘದ ಸದಸ್ಯೆಯರಾದ ಲಕ್ಕವ್ವ ಮಾದರ, ಲಕ್ಷ್ಮವ್ವ ಹೊಸಮನಿ, ಇಂದ್ರವ್ವ ಪಾಟೀಲ, ಶೈಲಾ ಹಿರೇಗೌಡರ, ಗೀತಾ ಮಾದರ ಸೇರಿದಂತೆ ಸೂಳಿಕೇರಿ, ಅಗಸನಕೊಪ್ಪ, ಮತ್ತಿಕಟ್ಟಿ, ನೀರಬುದಿಹಾಳ ಗ್ರಾಮಗಳ ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next