ಉಡುಪಿ: ಜಿಲ್ಲಾ ಕೇಂದ್ರದ ವಿಧಾನಸಭಾ ಕ್ಷೇತ್ರವಾಗಿರುವ ಉಡುಪಿ ಒಂದೇ ಕುಟುಂಬ ದಶಕಗಳ ಕಾಲ ಆಡಳಿತ ಕಂಡಿದೆ. ಮಹಿಳಾ ಮತದಾರು ಹೆಚ್ಚಿದ್ದರೂ, ಮೊಗವೀರ, ಬಿಲ್ಲವರ ಪ್ರಾಬಲ್ಯ.
2008ರಲ್ಲಿ ಕ್ಷೇತ್ರ ವಿಭಜನೆಗೂ ಮೊದಲು ಬ್ರಹ್ಮಾವರ ಪ್ರತ್ಯೇಕ ಕ್ಷೇತ್ರವಾಗಿತ್ತು. 2008ರಲ್ಲಿ ಬ್ರಹ್ಮಾವರ ಕ್ಷೇತ್ರದ ಬಹುಪಾಲು ಉಡುಪಿಯೊಳಗೆ ಸೇರಿದೆ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಮಣಿಪಾಲದ ಟಿ.ಎ. ಪೈ ಅವರು ಕಾಂಗ್ರೆಸ್‌ನಿಂದ ಗೆದ್ದು ವಿಧಾನ ಸಭೆ ಪ್ರವೇಶಿಸಿದ್ದರು. 1957ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿ (ಪಿಎಸ್‌ಪಿ) ಯ ಅಭ್ಯರ್ಥಿ ಜಯ ಸಾಧಿಸಿ ಅಧಿಕಾರ ಹಿಡಿದಿದ್ದರು. 1962ರಿಂದ 1978ರ ವರೆಗೂ ಕಾಂಗ್ರೆಸ್ ಅಧಿಕಾರ ನಡೆಸಿದ್ದು, 1983ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
1985 ಮತ್ತು 1989ರ ಚುನಾವಣೆಯಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಯಿತು. 1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯ ಸಾಧಿಸಿ, 1999ರಲ್ಲಿ ಅದೇ ಅಭ್ಯರ್ಥಿ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಅದೇ ವರ್ಷ ಮತ್ತೆ ಆಯ್ಕೆಯಾದವರು. 2004 ಮತ್ತು 2008ರ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. 2013ರಲ್ಲಿ ಕಾಂಗ್ರೆಸ್ ಜಯ ಕಂಡಿತು. 2018ರಲ್ಲಿ ಪುನರ್ ಬಿಜೆಪಿ ಅಧಿಕಾರ ಹಿಡಿಯಿತು. 9 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, ತಲಾ ಒಂದು ಬಾರಿ ಪಿಎಸ್‌ಪಿ, ಕರ್ನಾಟಕ ಕಾಂಗ್ರೆಸ್ ಪಕ್ಷ ಇಲ್ಲಿ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷದಿಂದ ಒಂದೇ ಮನೆಯ ಮೂವರು (ತಂದೆ, ತಾಯಿ, ಮಗ) ಈ ಕ್ಷೇತ್ರದ ಶಾಸಕರಾಗಿದ್ದರು. ಹಾಗೆಯೇ ಒಂದು ಬಾರಿಗೆ ಅದೇ ಮನೆಯ ತೀರ ಹತ್ತಿರದ ಸಂಬಂಧಿಯೊಬ್ಬರು ಶಾಸಕರಾಗಿದ್ದರು. ಸರಿ ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ಅದೇ ಮನೆಯವರು ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಬಿಜೆಪಿ ಇಲ್ಲಿ ಅಧಿಕಾರ 1983ರಲ್ಲಿ ಪಡೆದರೂ ಬಹುವರ್ಷ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೆ ಅಧಿಕಾರಕ್ಕೆ ಬಂದಿದ್ದು 2004ರಲ್ಲಿ.
ಕ್ಷೇತ್ರದಲ್ಲಿ ಬಿಲ್ಲವ, ಮೊಗವೀರ ಸಮು ದಾಯದ ಮತದಾರರು ಮೊದಲ ಸ್ಥಾನದಲ್ಲಿ ದ್ದಾರೆ. ಬಂಟ, ಬ್ರಾಹ್ಮಣ, ಜಿಎಸ್‌ಬಿ, ಒಬಿಸಿ, ಎಸ್ಸಿ/ಎಸ್.ಟಿ., ಅಲ್ಪಸಂಖ್ಯಾಕರ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.
ಪ್ರಭಾವಿಗಳಿದ್ದರು.
ಕ್ಷೇತ್ರದಿಂದ ನಾಲ್ಕು ಬಾರಿ ಜಯ ಸಾಧಿಸಿದ್ದ ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್ ಅವರು ಮೂರು ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗಿದ್ದರು. ಅನಂತರ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ, ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಡಾ| ವಿ.ಎಸ್. ಆಚಾರ್ಯ ಅವರು ವಿಧಾನ ಪರಿಷತ್ ಮೂಲಕ ಪ್ರಭಾವಿ ಖಾತೆ ಹೊಂದಿದ ಸಚಿವರು ಎಂಬ ಹೆಗ್ಗಳಿಕೆ ಪಡೆದಿದ್ದರು. ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರು ಸಚಿವರಾಗಿದ್ದರು.
ಟಿಕೆಟ್ ಲೆಕ್ಕಾಚಾರ
ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ರಾಜು ಖಾರ್ವಿ ಕೊಡೇರಿ