Advertisement

ವಿಜಯಪುರದಲ್ಲಿ ಮತ್ತೆ ಭೂಕಂಪನ : ಜನರಲ್ಲಿ ಹೆಚ್ಚುತ್ತಿರುವ ಆತಂಕ

09:01 PM Oct 14, 2021 | Team Udayavani |

ವಿಜಯಪುರ : ನಗರಕ್ಕೆ ಹೊಂದಿಕೊಂಡಿರುವ ಹಿಟ್ನಳ್ಳಿಯಲ್ಲಿ ಆಯುಧ ಪೂಜೆ ದಿನವಾದ ಗುರುವಾರ ಭೂಕಂಪನ ಸಂಭವಿಸಿದೆ. ಕಳೆದ ಒಂದು ತಿಂಗಳಿನ ಒಳಗೆ ಹಲವು ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿ ಕಂಪಿಸಿದ್ದು ಜನರು ಆತಂಕಕ್ಕೆ ಗುರಿಯಾಗಿದ್ದಾರೆ.

Advertisement

ಹಿಟ್ನಳ್ಳಿ ಕೇಂದ್ರಿತವಾಗಿ ಜುಮನಾಳ, ಮನಗೂಳಿ ಪರಿಸರದಲ್ಲಿ ಗುರುವಾರ ಸಂಜೆ 6.22ಕ್ಕೆ ಸಂಭವಿಸಿದ ಭೂಕಂಪ 3.1 ಪ್ರಮಾಣದಷ್ಟು ತೀವ್ರತೆ ಹೊಂದಿತ್ತು ಎಂದು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ಭೂಮಿ‌ ಕಂಪಿಸಿದಾಗ ಮನೆಯಲ್ಲಿ ಇದ್ದವರು ಜೀವ ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ.

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ರಿಕ್ಟರ್ ಮಾಪಕದ ದಾಖಲೆ ಆಧರಿಸಿ ಜಿಲ್ಲಾಡಳಿತ ಭೂಕಂಪ ಸಂಭವಿಸಿದ್ದನ್ನು ದೃಢಪಡಿಸಿದೆ.

ಕಳೆದ ತಿಂಗಳಿನಿಂದೀಚೆಗೆ ಕಲಬುರ್ಗಿ, ಬಾಗಲಕೋಟ ಸೇರಿ ಕೆಲ ಪ್ರದೇಶದಲ್ಲಿ ಭೂಕಂಪನ ಸಂಭವಿಸುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next