Advertisement

ಕರ್ನಾಟಕ ಕೇಂದ್ರೀಯ ವಿವಿ ಅಂತಾರಾಷ್ಟ್ರೀಯ ವಿವಿಯಾಗಲಿ

10:38 AM Sep 14, 2017 | |

ಕಲಬುರಗಿ: ಕರ್ನಾಟಕ ಕೇಂದ್ರೀಯವಿಶ್ವವಿದ್ಯಾಲಯವು ಸ್ವಲ್ಪ ಕಾಲಾವಧಿಯಲ್ಲಿಯೆ ಅಪ್ರತಿಮ ಸಾಧನೆಮಾಡಿರುವುದು ಸಂತೋಷದಾಯಕವಾಗಿದೆ. ಆದರೆ ಸಾಧಿಸಬೇಕಾದದ್ದು ಇನ್ನು ಸಾಕಷ್ಟಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ|ಎಸ್‌.ಎನ್‌ ಹೆಗಡೆ ಹೇಳಿದರು.

Advertisement

ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯವಿಶ್ವವಿದ್ಯಾಲಯದ ಶಿಕ್ಷಕ ಮತ್ತು ಸಂಶೋಧನಾವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಅಂತಾರಾಷ್ಟ್ರೀಯಮಟ್ಟದ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಅತ್ಯವಶ್ಯಕವಾಗಿದೆ. ಯಾವುದೇ ವಿಶ್ವವಿದ್ಯಾಲಯ ಅದು ಹೊಂದಿರುವ ಗುಣಾತ್ಮಕ ಶಿಕ್ಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಹೆಸರುವಾಸಿಯಾಗಿರುತ್ತದೆಯೇ ವಿನಃ ಆಡಳಿತಗಾರರಿಂದಲ್ಲ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ನಿರ್ಮಿಸುವಲ್ಲಿ ಪ್ರೊ| ಡಿ.ಸಿ. ಪಾವಟೆ ಹೇಗೆ ತಮ್ಮ ಪಾತ್ರ ನಿರ್ವಹಿಸಿದರೋ ಅದೆ ರೀತಿ ಪ್ರೊ| ಎಚ್‌.ಎಂ ಮಹೇಶ್ವರಯ್ಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಏಳಿಗೆಗೆ ಪಾತ್ರ ಅತಿಮುಖ್ಯವಾಗಿದೆ ಎಂದರು. 

ಶಿಕ್ಷಕರು ಯು.ಜಿ.ಸಿಯ ಎ.ಪಿ.ಐ ಅಂಕಗಳಿಗೆ ತಲೆಕೆಡಿಸಿಕೊಳ್ಳದೆ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಮತ್ತು ತಮ್ಮನ್ನುತಾವು ಸಾಮಾಜಿಕವಾಗಿ ಉಪಯುಕ್ತವಾದಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಪ್ರೊ| ಎಸ್‌.ಎನ್‌. ಹೆಗಡೆ ಹೇಳಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ ಮಾತನಾಡಿ, ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಶೈಕ್ಷಣಿಕವಾಗಿಹಾಗೂ ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಈಭಾಗದ ಎಲ್ಲಾ ವಿಶ್ವವಿದ್ಯಾಲಯಗಳು ಒಟ್ಟಾಗಿಕಾರ್ಯನಿರ್ವಹಿಸಬೇಕಾದ ಅವಶ್ಯತಕೆಯಿದೆ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಪ್ರಾಸ್ತಾವಿಕ ಮಾತನಾಡಿದರು. ಡಾ| ರಾಜೀವ್‌ ಜೋಶಿ ಸ್ವಾಗತಿಸಿದರು, ಕುಲಸಚಿವ ಪ್ರೊ|ಚಂದ್ರಕಾಂತ ಯಾತನೂರ ವಂದಿಸಿದರು. ಪ್ರೊ| ಎನ್‌. ನಾಗರಾಜು, ವಿವಿಧ ನಿಕಾಯಗಳ ಡೀನ್‌ಗಳು, ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next