ಬೆಂಗಳೂರು:ಬೆಂಗಳೂರು ಮೂಲಭೂತ ಸೌಕರ್ಯಕ್ಕೆ 6 ಸಾವಿರ ಕೋಟಿ ವೆಚ್ಚದಲ್ಲಿ ಅಮೃತ್ ನಗರೋತ್ಥಾನದಡಿ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ, ನೀರುಗಾಲುವೆ, ಪಾರ್ಕ್ , ತ್ಯಾಜ್ಯ ನಿರ್ವಹಣೆ, ಸ್ಲಂ ಅಭಿವೃದ್ಧಿ. 2022-23 ನೇ ಸಾಲಿನಲ್ಲಿ 33 ಕಿ.ಮೀ ಮೆಟ್ರೋ ಮಾರ್ಗ ಸೇರಿಸಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ 58.19 ಕಿ.ಮೀ ಮೆಟ್ರೋ ಕಾಮಗಾರಿ ಆರಂಭವಾಗಿದ್ದು 2025 ರೊಳಗೆ ಪೂರ್ಣಗೊಳ್ಳಲಿದೆ…ಇದು ಸಿಎಂ ಬೊಮ್ಮಾಯಿ ಶುಕ್ರವಾರ ಮಂಡಿಸಿರುವ ಬಜೆಟ್ ನಲ್ಲಿ ನೀಡಿರುವ ಬಂಪರ್ ಕೊಡುಗೆ.
ಮೆಟ್ರೋ ಹಂತ್ರ 3 ಯೋಜನೆಯನ್ನು 11,250 ಕೋಟಿ ರೂ ವೆಚ್ಚದಲ್ಲಿ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗುವುದು. ಹೆಬ್ಬಾಳದಿಂದ ಜೆಪಿ ನಗರದವರೆಗೆ 32 ಕಿ.ಮೀ ರಿಂಗ್ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಗೆ 13 ಕಿ.ಮೀ ಮಾರ್ಗ 2022 23 ಸಾಲಿನಲ್ಲಿ 37 ಕಿ.ಮೀ ಉದ್ದದ ಸರ್ಜಾಪುರ, ಅಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15 ಸಾವಿರ ವೆಚ್ಚದಲ್ಲಿ 36 ಕಿ.ಮೀ ಹೊಸಮಾರ್ಗಕ್ಕೆ ಡಿಪಿಆರ್ ತಯಾರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.
ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕ್ (ಪಾದಾಚಾರಿ ರಸ್ತೆಬದಿ ವ್ಯಾಪಾರಿಗಳಸ ಸುರಕ್ಷತೆ ಹಾಗೂ ಮೆಟ್ರೋ ನಿಲ್ದಾಣವನ್ನು ಬಸ್ ನಿಕ್ದಾಣದೊಂದಿಗೆ ಸಂಪರ್ಕಿಸಲು) ವೈಟ್ ಫೀಲ್ಡ್, ಕೆ.ಆರ್ ಪುರಂ, ಯಶವಂತಪುರ, ಜ್ಞಾನಭಾರತಿ, ಯಲಹಂಕ ನಿಲ್ದಾಣಗಳಲ್ಲಿ 55 ಕೋಟಿ ರೂ ವೆಚ್ಚದಲ್ಲಿ (ಸಬ್ ಅರ್ಬನ್ ರೈಲ್ವೇ)ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕದ ಕಾಮಗಾರಿ ಕೈಗೊಳ್ಳಲಾಗುವುದು.
73 ಕಿ.ಮೀ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರೂ ಈಗಾಗಲೇ ಅನುಮೋದನೆಯಾಗಿದ್ದು DBFOT ಮಾದರಿಯಲ್ಕಿ ಗುತ್ತಿಗೆದಾರರೇ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಭರಿಸುವುದರೊಂದಿಗೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಗೊರಗುಂಟೆಪಾಳ್ಯಕ್ಕೆ ಗ್ರೇಡ್ ಸಪರೇಟರ್ ಮೇಲ್ಸೇತುವೆ ನಿರ್ಮಾಣಜ್ಕೆ ಬಿಬಿಎಂಪಿ ಬಿಡಿಎ ಜಂಟಿ ಕಾಮಗಾರಿ ,ಬಿಡಿಎ ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆ ಬನಶಂಕರಿ 6 ನೇ ಹಂತ ಅಂಜನಾಪುರ ಬಡಾವಣೆಯಕ್ಕಿ ರಸ್ತೆ, ಚರಂಡಿ ಕಾಮಗಾರಿಗೆ 404 ಕೋಟಿ ವೆಚ್ಚದಲ್ಲಿ ಬಿಡಿಎ ಯಿಂದ ನಿರ್ಮಾಣ ನಂತರ ಪಾಲಿಕೆಗೆ ಹಸ್ತಾಂತರಿಸಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.
Related Articles
ನಗರದ NGEF ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ್ ಮಾದರಿಯ ಗ್ರೀನ್ ಎಕ್ಸ್ ಪೋ ನಿರ್ಮಾಣ. ಆರು ಲಕ್ಷ “ಬಿ” ಖಾತಾಗಳನ್ನು ಎ ವಹಿಗೆ ದಾಖಲಿಸಲು ಭೂಕಂದಾಯ ನಿಯಮದಡಿ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಉಪನಗರ ರೈಲ್ವೇ ಯೋಜನೆಯನ್ನು 15,267 ಕೋಟಿ ರೂ ವೆಚ್ಚದಲ್ಕಿ 2026 ರ ವೇಳೆಗೆ ಪೂರ್ಣಗೊಳಿಸಕು ಉದ್ದೇಶ ಹೊಂದಲಾಗಿದೆ.
*ನಗರಕ್ಕೆ 775 ದಶಲಕ್ಷ ಲೀಟರ್ ಕಾವೇರಿ ನೀರು ತರಲು 5,550 ಕೋಟಿ ರೂ ವೆಚ್ಚದಲ್ಲಿ ಕಾವೇರಿ 5 ನೇ ಹಂತ ಜಾರಿಯಲ್ಲಿದ್ದು, 2024 25 ರೊಳಗೆ ಪೂರ್ಣಗೊಳಿಸಲಾಗುವುದು.
*ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಲಕ ಉನ್ನತೀಕರಣಕ್ಕೆ 1500 ಕೋಟಿ ರೂ ವೆಚ್ಚ .
*ಎತ್ತಿನಹೊಳೆಯಿಂದ 1.7 ಟಿ.ಎಂಸಿ ನೀರು ಬಳಸಿಕೊಳ್ಳಲು 312 ಕೋಟಿಯ ಟಿಜಿ ಹಳ್ಳಿ ಕಾಮಗಾರಿ 2022-23 ರಲ್ಲಿ ಮುಕ್ತಾಯ
*ನಗರದ ರಾಜಕಾಲುವೆ ಅಭಿವೃದ್ಧಿಪಡಿಸಿ ನಾಗರಿಕರ ವಿಹಾರ ತಾಣವಾಗಿಸಲು 195 ಕೋಟಿ ರೂ ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಲಾಗ್ತಿದೆ
*ನಗರದಲ್ಕಿ ಪ್ರವಾಹ ಪರಿಸ್ಥಿತಿ ತಡೆಯಲು ರಾಜಕಾಲುವೆ ಅಭಿವೃದ್ಧಿಗೆ 1,500 ಕೋಟಿ ರೂ ಮೊತ್ತದಲ್ಲಿ ಯೋಜನೆ
*ನಗರದ 4 ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
*20 ಶಾಲೆಗಳನ್ನು ‘ಬೆಂಗಳೂರು ಪಬ್ಲಿಕ್ ಶಾಲೆ ಅಭಿವೃದ್ಧಿಪಡಿಸಲು 89 ಕೋಟಿ ಮೀಸಲು
*ಮಡಿವಾಳ ಕೆರೆ ಎಲೆಮಲ್ಲಪ್ಪಶೆಟ್ಟಿ ಕೆರೆ ಅಭಿವೃದ್ಧಿಗೆ ಪಾಲಿಕೆಯಿಂದ ರೂಪುರೇಷೆ ಸಿದ್ಧತೆ
* ಒಟ್ಟಾರೆಯಾಗಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ಅನುದಾನ