Advertisement
ಬ್ಯಾಂಕಿನ ನಿರ್ವಹಣಾ ಲಾಭವು 309.70 ಕೋ.ರೂ. ಆಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 18.25ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 261.92 ಕೋ.ರೂ. ನಿರ್ವಹಣಾ ಲಾಭ ಗಳಿಸಿತ್ತು. ಬ್ಯಾಂಕಿನ ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ. 16.38ರ ದರದಲ್ಲಿ ಹೆಚ್ಚಳಗೊಂಡು 424.42 ಕೋ.ರೂ. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಲಾಭವು 364.69 ಕೋ.ರೂ.ಗಳಾಗಿತ್ತು. ಜು. 15ರಂದು ಮಂಗಳೂರಿನಲ್ಲಿ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಭೆಯಲ್ಲಿ 2017ರ ಜೂನ್ ಮಾಸಾಂತ್ಯದ ಹಣಕಾಸು ವರದಿಯನ್ನು ಅನುಮೋದಿಸಲಾಯಿತು.
ಬ್ಯಾಂಕಿನ ಒಟ್ಟು ವ್ಯವಹಾರವು 2017ರ ಜೂ. 30ಕ್ಕೆ 94,711 ಕೋ.ರೂ. ತಲುಪಿದ್ದು ಇದು ವರ್ಷದಿಂದ ವರ್ಷಕ್ಕೆ ಶೇ. 9.56 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿ ಮೊತ್ತವು 51,501 ಕೋ.ರೂ.ನಿಂದ 56,227 ಕೋ.ರೂ. ತಲುಪಿ ಶೇ. 9.18ರ ಪ್ರಗತಿ ದಾಖಲಿಸಿದೆ. ಬ್ಯಾಂಕಿನ ಮುಂಗಡವು 34,946 ಕೋ.ರೂ.ನಿಂದ 38,484 ಕೋ.ರೂ. ತಲುಪಿ ಶೇ. 10.12ರ ದರದಲ್ಲಿ ವೃದ್ಧಿ ಸಾಧಿಸಿದೆ. ಬ್ಯಾಂಕಿನ ಸಿ.ಡಿ. ಅನುಪಾತವು ಉತ್ತಮಗೊಂಡಿದ್ದು ಶೇ. 68.44ರಷ್ಟಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಸಿ.ಡಿ. ಅನುಪಾತವು ಶೇ 67.86 ಆಗಿತು.¤ ಕಾಸಾ (ಚಾಲ್ತಿಖಾತೆ ಹಾಗೂ ಉಳಿತಾಯ ಖಾತೆ ) ಠೇವಣಿಗಳು ಶೇ. 28.94ರಷ್ಟಕ್ಕೆ ಏರಿವೆ. ಪ್ರಸಕ್ತ ಸಾಲಿನ ಮೊದಲ ತ್ತೈಮಾಸಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು 1,691 ಕೋ.ರೂ.ಗಳಷ್ಟಿದ್ದು, ಇದು ಬ್ಯಾಂಕಿನ ಒಟ್ಟು ಮುಂಗಡದ ಶೇ.4.34ರಷ್ಟಿದೆ. ನಿವ್ವಳ ಅನುತ್ಪಾದಕ ಆಸ್ತಿಯು 1,230 ಕೋ.ರೂ.ಗಳಾಗಿದ್ದು ನಿವ್ವಳ ಮುಂಗಡದ ಶೇ. 3.20ರಷ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಬಂಡವಾಳ ಪರ್ಯಾಪ್ತದ ಅನುಪಾತವು ಕನಿಷ್ಠ ಶೇ. 10.25 ಇರಬೇಕಾಗಿದು,ª 2017-18ರ ಮೊದಲ ತ್ತೈಮಾ ಸಾಂತ್ಯಕ್ಕೆ (30-06-2017) ಬ್ಯಾಂಕಿನ ಬಂಡವಾಳ ಪರ್ಯಾಪ್ತದ ಅನುಪಾತವು (ಕ್ಯಾಪಿಟಲ್ ಅಡಿಕ್ವಸಿ ರೇಶೊÂà) ಬೇಸೆಲ್ ಐಐಐ ಮಾನದಂಡಕ್ಕನುಗುಣವಾಗಿ ಶೇ. 13.02ರಷ್ಟಿದೆ.
Related Articles
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ಪ್ರಸಕ್ತ ಅರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಬ್ಯಾಂಕಿನ ಮುಂಗಡಗಳಲ್ಲಿನ ಹೆಚ್ಚಳವು ನಮ್ಮ ನಿರ್ವಹಣಾ ಲಾಭದ ಪ್ರಗತಿಗೆ ಕಾರಣವಾಗಿದೆ. ಇದು ಬ್ಯಾಂಕಿನ ಮುಂದಿನ ಅಭಿವೃದ್ಧಿಗೆೆ ಮುನ್ನುಡಿ ಬರೆಯಲಿದೆ. ನಿವ್ವಳ ಬಡ್ಡಿ ಲಾಭ ಮತ್ತು ನಿವ್ವಳ ಬಡ್ಡಿ ಲಾಭಾಂಶದಲ್ಲಿಯ ಚೇತರಿಕೆಯು ಕೂಡ ಅಭಿವೃದ್ಧಿಯ ದ್ಯೋತಕವಾಗಿವೆ. 2017ರ ಜೂ. 30ಕ್ಕೆ ಬ್ಯಾಂಕ್ 769 ಶಾಖೆಗಳನ್ನು, 1,398 ಎಟಿಎಂಗಳನ್ನು ಮತ್ತು 110 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಹೊಂದಿದೆ ಎಂದರು. 2018ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕು ಇನ್ನೂ 31 ಹೊಸ ಶಾಖೆಗಳನ್ನು ಮತ್ತು 52 ಹೊಸ ಎಟಿಎಂಗಳನ್ನು ಹಾಗೂ 40 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಪ್ರಾರಂಭಿಸುವ ಮೂಲಕ ಒಟ್ಟು 2,250 ಸೇವಾ ಕೇಂದ್ರಗಳನ್ನು ಹೊಂದಲಿದೆ. ಇದರೊಂದಿಗೆ ಶಾಖೆಗಳ ಸಂಖ್ಯೆ 800ಕ್ಕೆ, ಎಟಿಎಂಗಳು 1450ಕ್ಕೆ ಹಾಗೂ ಇ-ಲಾಬಿ / ಮಿನಿ ಇ-ಲಾಬಿಗಳ ಸಂಖ್ಯೆ 150ಕ್ಕೇರಲಿದೆ.
Advertisement